Home
ಮೊಬೈಲ್

ಸಿಹಿಸುದ್ದಿ: ಶೀಘ್ರದಲ್ಲೇ ಭಾರತಕ್ಕೂ ಬರಲಿದೆಯಂತೆ Vivo X Fold 5 ಫೋನ್!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ತನ್ನ ಮುಂಬರುವ ಬಹುನಿರೀಕ್ಷಿತ ಫೋಲ್ಡಬಲ್ ಸ್ಮಾರ್ಟ್‌ಫೋನ್ Vivo X Fold 5 ಅನ್ನು ಜೂನ್ 25 ರಂದು ಚೀನಾದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಆನ್‌ಲೈನ್‌ನಲ್ಲಿ ಈಗಾಗಲೇ ಇದರ ವೈಶಿಷ್ಟ್ಯಗಳನ್ನು ವಿವೋ ಕಂಪೆನಿಯು ಸಕ್ರಿಯವಾಗಿ ಪ್ರಚಾರ ಮಾಡುತ್ತಿದೆ. ಈ ವೇಳೆಯಲ್ಲೇ, ಭಾರತದಲ್ಲೂ ಈ ಫೋನ್ ಬಿಡುಗಡೆಯಾಗುವ ಸೂಚನೆ ದೊರೆತಿದೆ. ಹೌದು, ಜುಲೈ ಎರಡನೇ ವಾರದಲ್ಲಿ ಈ ಫೋನ್ ಭಾರತಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೊಸ ಸೋರಿಕೆಗಳು ಸೂಚಿಸುತ್ತಿವೆ.!

Vivo X Fold 5 ಫೋನಿನ ಭಾರತದಲ್ಲಿ ಬಿಡುಗಡೆಯ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ, ಜುಲೈ ಎರಡನೇ ವಾರದಲ್ಲಿ ಈ ಫೋನ್ ಭಾರತಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೊಸ ಸೋರಿಕೆಗಳು ಸೂಚಿಸುತ್ತಿವೆ. ಹೆಸರಿಸದ ಉದ್ಯಮದ ಮೂಲಗಳನ್ನು ಉಲ್ಲೇಖಿಸಿ, 91Mobiles ವರದಿ ಮಾಡಿರುವ ಪ್ರಕಾರ ಜುಲೈ 10 ಮತ್ತು ಜುಲೈ 15 ರ ನಡುವೆ Vivo X Fold 5 ಅನ್ನು ಭಾರತದಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಆದರೆ, ಕಂಪೆನಿಯು ಈ ಕುರಿತ ಯಾವುದೇ ಮಾಹಿತಿಯನ್ನು ಅಧಿಕೃತಪಡಿಸಿಲ್ಲ.

Vivo X Fold 5 ಫೋನ್ ಚೀನಾದಲ್ಲಿ ಇದೇ ಜೂನ್ 25 ರಂದು ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4:30) ಈ ಫೋನ್ ಪರಿಚಯವಾಗಲಿದೆ. ಇದು ಜುಲೈ 9 ರಂದು ಬಿಡುಗಡೆಯಾಗುವ ಸಾಧ್ಯತೆಯಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 7 ಮತ್ತು ಜುಲೈ 2 ರಂದು ಚೀನಾದಲ್ಲಿ ಬಿಡುಗಡೆಯಾಗಲಿರುವ ಹಾನರ್ ಮ್ಯಾಜಿಕ್ V5 ಫೋಲ್ಡಬಲ್ ಫೋನ್‌ಗಳೊಂದಿಗೆ Vivo X Fold 5 ನೇರವಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ. ಮುಂಬರುವ ಈ Vivo X Fold 5 ಫೋನ್ ಕುರಿತು ಇದುವರೆಗಿನ ಮಾಹಿತಿ ಈ ಕೆಳಗಿನಂತಿದೆ.

ಹಲವಾರು ಟೀಸರ್‌ಗಳು Vivo X Fold 5 ಫೋನ್‌ನ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಸ್ಪಷ್ಟ ಕಲ್ಪನೆ ನೀಡುತ್ತವೆ. ಈ ಫೋನ್ 6,000mAh ಬ್ಯಾಟರಿಯೊಂದಿಗೆ ಬರಲಿದ್ದು, ಇದು 80W ವೈರ್ಡ್ ಮತ್ತು 40W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ರಿವರ್ಸ್ ಚಾರ್ಜಿಂಗ್ ಸಾಮರ್ಥ್ಯವೂ ಇದರಲ್ಲಿದೆ. ಕ್ಯಾಮೆರಾ ವಿಭಾಗದಲ್ಲಿ, ಇದು ಝೈಸ್-ಟ್ಯೂನ್ಡ್ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿರಲಿದೆ, ಇದರಲ್ಲಿ 3x ಆಪ್ಟಿಕಲ್ ಜೂಮ್ ಹೊಂದಿರುವ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಸೇರಿದೆ.

ಸಿಹಿಸುದ್ದಿ: ಶೀಘ್ರದಲ್ಲೇ ಭಾರತಕ್ಕೂ ಬರಲಿದೆಯಂತೆ Vivo X Fold 5 ಫೋನ್!

ಡಿಸ್‌ಪ್ಲೇ ವಿಷಯದಲ್ಲಿ, Vivo X Fold 5 ಫೋನ್‌ ಒಳ ಮತ್ತು ಹೊರ ಸ್ಕ್ರೀನ್‌ಗಳು 8T LTPO ಪ್ಯಾನೆಲ್‌ಗಳನ್ನು ಬಳಸುತ್ತವೆ. ಪುಸ್ತಕ-ಶೈಲಿಯ ಈ ಫೋಲ್ಡಬಲ್ ಫೋನ್‌ನ ಅಧಿಕೃತ ಚಿತ್ರಗಳು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ತೆಳುವಾದ ವಿನ್ಯಾಸ ಮತ್ತು ದೊಡ್ಡ ವೃತ್ತಾಕಾರದ ಕ್ಯಾಮೆರಾ ಕಟೌಟ್ ಅನ್ನು ಪ್ರದರ್ಶಿಸುತ್ತವೆ. Vivo X Fold 5 ಫೋನ್ ಬೈಬಾಯಿ (ಹಸಿರು), ಕ್ವಿಂಗ್‌ಸಾಂಗ್ (ಬಿಳಿ), ಮತ್ತು ಟೈಟಾನಿಯಂ (ಕಪ್ಪು) ಎಂಬ ಮೂರು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ ಎಂದು ಈಗಾಗಲೇ ಖಚಿತಪಡಿಸಲಾಗಿದೆ.

ಇಷ್ಟೇ ಅಲ್ಲದೆ, ಬಾಳಿಕೆ ಮತ್ತು ರಕ್ಷಣೆಯ ದೃಷ್ಟಿಯಿಂದ, Vivo X Fold 5 ಫೋನ್ IPX8 + IPX9 + IPX9+ ನೀರಿನ ಪ್ರತಿರೋಧ ರೇಟಿಂಗ್ ಅನ್ನು ಹೊಂದಿದೆ ಎಂದು ಜಾಹೀರಾತು ಮಾಡಲಾಗಿದೆ. ಇದಲ್ಲದೆ, ಇದು IP5X-ರೇಟೆಡ್ ಧೂಳು ನಿರೋಧಕ ಸಾಮರ್ಥ್ಯವನ್ನೂ ಹೊಂದಿದೆ. ಫೋನ್ ಸುಮಾರು 216 ಗ್ರಾಂ ತೂಕವನ್ನು ಹೊಂದಿರಲಿದೆ ಮತ್ತು ಮಡಚಿದಾಗ ಸುಮಾರು 9.2 ಮಿ.ಮೀ ದಪ್ಪವಿರಲಿದೆ ಎಂದು ದೃಢಪಡಿಸಲಾಗಿದೆ. ಹಾಗಾಗಿ, ಈ ಫೋನ್ ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಬರುತ್ತದೆ ಎಂಬ ಸುದ್ದಿಯು ಹೆಚ್ಚು ಮೌಲ್ಯವನ್ನು ಹೊಂದಿದೆ.

Best Mobiles in India

English summary
Vivo X Fold 5 is expected to be announced in India between July 10 and July 15. In the meantime, Vivo will launch the foldable phone in China on June 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+