ಭಾರತದಲ್ಲಿ Vivo X Fold 5 ಮಾರಾಟ ಆರಂಭ: 15,000 ತ್ವರಿತ ರಿಯಾಯಿತಿ!
ಭಾರತದ ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಪುಸ್ತಕ ಶೈಲಿಯ ಫೋಲ್ಡೆಬಲ್ ಫೋನ್ 'Vivo X Fold 5' ಮಾರಾಟವು ಇಂದಿನಿಂದ (ಜುಲೈ 30) ಆರಂಭವಾಗಿದೆ. ಫ್ಲಿಪ್‌ಕಾರ್ಟ್ ಮತ್ತು Vivo ಅಧಿಕೃತ ವೆಬ್‌ಸೈಟ್ ಮೂಲಕ ಇದೀಗ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಫೋನ್ ಖರೀದಿಯ ಮೇಲೆ 15,000 ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗಾದರೆ, ಹೊಸ Vivo X Fold 5 ಸ್ಮಾರ್ಟ್‌ಫೋನ್ ಬೆಲೆ ಎಷ್ಟು, ಕೊಡುಗೆಗಳು ಯಾವುವು ಮತ್ತು ಈ ಫೋನ್ ಫೀಚರ್ಸ್ ಹೇಗಿವೆ ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Vivo X Fold 5 : ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Vivo X Fold 5 ಸ್ಮಾರ್ಟ್‌ಫೋನ್ ಒಂದೇ 16GB RAM ಮತ್ತು 512GB ಸ್ಟೋರೇಜ್ ಮಾದರಿಯಲ್ಲಿ ಮತ್ತು ಟೈಟಾನಿಯಂ ಗ್ರೇ ಬಣ್ಣದಲ್ಲಿ ₹1,49,999 ಬೆಲೆಗೆ ಬಿಡುಗಡೆಯಾಗಿದೆ. ಗ್ರಾಹಕರು IDFC, ಫೆಡರಲ್, ಆಕ್ಸಿಸ್, ICICI, Yes Bank ಮತ್ತು ಇತರ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ₹15,000 ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಎಂದು ಕಂಪೆನಿಯು ತಿಳಿಸಿದೆ. ಈ ಕೊಡುಗೆಯೊಂದಿಗೆ, Vivo X Fold 5 ಫೋನಿನ ಪರಿಣಾಮಕಾರಿ ಬೆಲೆ ₹1,34,999 ಕ್ಕೆ ಇಳಿಯುತ್ತದೆ.
Vivo X Fold 5 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು,
ಪುಸ್ತಕ ಶೈಲಿಯ ಹೊಸ Vivo X Fold 5 ಫೋನ್ 8.03-ಇಂಚಿನ ಫ್ಲೆಕ್ಸಿಬಲ್ AMOLED ಆಂತರಿಕ ಡಿಸ್‌ಪ್ಲೇ ಮತ್ತು 6.53-ಇಂಚಿನ AMOLED ಕವರ್ ಡಿಸ್‌ಪ್ಲೇ ಹೊಂದಿದೆ. ಈ ಎರಡೂ ಡಿಸ್‌ಪ್ಲೇಗಳು 120Hz ರಿಫ್ರೆಶ್ ರೇಟ್ ಮತ್ತು 4,500 NITS ಗರಿಷ್ಠ ಹೊಳಪನ್ನು ಹೊಂದಿದ್ದು, ತೀಕ್ಷ್ಣತೆ, ಸ್ಪಷ್ಟತೆ ಮತ್ತು ಪ್ರತಿಕ್ರಿಯೆಗಿಂತಲೂ ಉತ್ತಮ ವೀಕ್ಷಣಾ ಅನುಭವವನ್ನು ನೀಡುತ್ತವೆ ಎಂದು ಕಂಪೆನಿಯು ಹೇಳಿಕೊಂಡಿದೆ. ಇಷ್ಟೇ ಅಲ್ಲದೆ, ಈ ಎರಡೂ ಡಿಸ್‌ಪ್ಲೇಗಳು Tüv Rheinland Global Eye Protection 3.0 ಪ್ರಮಾಣೀಕರಣ ಮತ್ತು ವೈವಿದ್ಯಮಯ ಬಣ್ಣ ಪ್ರಮಾಣೀಕರಣವನ್ನೂ ಹೊಂದಿವೆ.

ಕಾರ್ಯಕ್ಷಮತೆಗಾಗಿ, Vivo X Fold 5 ಫೋನ್ ಶಕ್ತಿಯುತವಾದ Snapdragon 8 Gen 3 ಚಿಪ್‌ಸೆಟ್ ಹೊಂದಿದೆ. ಇದನ್ನು 16GB LPDDR5X RAM ಮತ್ತು 512GB UFS 4.1 ಸ್ಟೋರೇಜ್ನೊಂದಿಗೆ ಜೋಡಿಸಲಾಗಿದೆ. ಇದು ಗೇಮಿಂಗ್, ಮಲ್ಟಿಟಾಸ್ಕಿಂಗ್, ಮತ್ತು ಭಾರಿ ಆಪ್‌ಗಳ ನಿರ್ವಹಣೆಯಲ್ಲಿ ಉತ್ತಮ ಸಾಮರ್ಥ್ಯ ನೀಡುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, Android 15 ಆಧಾರಿತ FunTouchOS 15 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಭಾಗದಲ್ಲಿ, Vivo X Fold 5 ಫೋನ್ ಒಟ್ಟು ಮೂರು ಸಂವೇದಕಗಳಿರುವ ಶಕ್ತಿಶಾಲಿ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ, OIS (Optical Image Stabilization) ಬೆಂಬಲದ 50MP Sony IMX921 ಪ್ರಾಥಮಿಕ ಸೆನ್ಸಾರ್, 50MP ಟೆಲಿಫೋಟೋ ಕ್ಯಾಮೆರಾ (3x ಆಪ್ಟಿಕಲ್ ಮತ್ತು 100x ಡಿಜಿಟಲ್ ಜೂಮ್), ಮತ್ತು 50MP ಅಲ್ಟ್ರಾ-ವೈಡ್ ಲೆನ್ಸ್ ಸಹ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, Vivo X Fold 5 ಎರಡು 20MP ಫ್ರಂಟ್ ಕ್ಯಾಮೆರಾಗಳಿವೆ. ಇದಲ್ಲದೆ, ಈ ಫೋನ್ AI Image Studio ಎಡಿಟಿಂಗ್ ವೈಶಿಷ್ಟ್ಯವನ್ನೂ ಬೆಂಬಲಿಸುತ್ತದೆ.
ಬ್ಯಾಟರಿ ವಿಭಾಗದಲ್ಲಿ, Vivo X Fold 5 ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದ್ದು, ಇದು 80W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, ಡ್ಯುಯಲ್ ನ್ಯಾನೋ ಸಿಮ್, Wi-Fi, Bluetooth 5.4, GPS, OTG, NFC ಮತ್ತು USB Type-C ಪೋರ್ಟ್ ವೈಶಿಷ್ಟ್ಯಗಳಿವೆ. ನೀರು ಮತ್ತು ಧೂಳು ನಿರೋಧಕ ಸುರಕ್ಷತೆಗೆ IPX8, IPX9, ಮತ್ತು IP5X ಪ್ರಮಾಣೀಕರಣ ಹೊಂದಿರುವ ಈ ಫೋನ್ ಮಡಿಸಿದಾಗ 9.2 ಮಿಮೀ ಮತ್ತು ತೆರೆದಾಗ ಕೇವಲ 4.3 ಮಿಮೀ ದಪ್ಪವಿದೆ. ಮತ್ತು ಇದರ ತೂಕ 217 ಗ್ರಾಂ. ಆಗಿದೆ.


Click it and Unblock the Notifications








