Home
ಮೊಬೈಲ್

7200 ಉಳಿತಾಯ! 5800mAh ಬ್ಯಾಟರಿ.. 512GB ಸ್ಟೋರೇಜ್.. ಇಂದು Vivo X200 ಫಸ್ಟ್‌ ಸೇಲ್

ವಿವೋ ಇತ್ತೀಚೆಗೆ ವಿವೋ X200 (Vivo X200) ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿವೋ X200 5G (Vivo X200 5G) ಮೊಬೈಲ್ ದೇಶಿಯ ಮಾರುಕಟ್ಟೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದೆ. ಇದು ಮೊಬೈಲ್‌ ಪ್ರಿಯರನ್ನು ಆಕರ್ಷಿಸುತ್ತಿದೆ. ಅಂದಹಾಗೆ, ಈ ಸ್ಮಾರ್ಟ್‌ಫೋನ್‌ ಇಂದಿನಿಂದ (ಡಿಸೆಂಬರ್ 19) ತನ್ನ ಮೊದಲ ಮಾರಾಟವನ್ನು ಶುರು ಮಾಡಲಿದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಖರೀದಿಸಬಹುದು. ಬನ್ನಿ, ಈ ಫೋನಿನ ಮೇಲೆ ಯಾವೆಲ್ಲಾ ಆಫರ್‌ ಲಭ್ಯವಿದೆ ಮತ್ತು ವಿಶೇಷತೆಗಳೇನು ಎನ್ನುವುದನ್ನು ತಿಳಿಯೋಣ.

ನೂತನ ವಿವೋ X200 ಫೋನ್‌ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇದು ಕಾಸ್ಮೊಸ್ ಬ್ಲಾಕ್ ಮತ್ತು ನ್ಯಾಚುರಲ್ ಗ್ರೀನ್ ಬಣ್ಣಗಳಲ್ಲಿ ಮಾರಾಟವಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ ಹೊಂದಿದೆ. ಇದರಲ್ಲಿ 6.67 ಇಂಚಿನ ಡಿಸ್ಪ್ಲೇ ಇದೆ. ಜೊತೆಗೆ 512GB ಸ್ಟೋರೇಜ್, 5800mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇಂದು Vivo X200 ಫಸ್ಟ್‌ ಸೇಲ್; ಬರೋಬ್ಬರಿ 7,200 ಡಿಸ್ಕೌಂಟ್.. ಹೇಗಿವೆ ಫೀಚರ್ಸ್‌

ವಿವೋ X200 ಫೋನಿನ ಬೆಲೆ ಮತ್ತು ಆಫರ್‌ಗಳು

12GB + 256GB ಸ್ಟೋರೇಜ್‌ ಬೆಲೆ = 65,999 ರೂ.
16GB + 512GB ಸ್ಟೋರೇಜ್ ಬೆಲೆ = 71,999 ರೂ.

ವಿವೋ X200 ಫೋನಿನ 12GB + 256GB ಸ್ಟೋರೇಜ್‌ ವೇರಿಯಂಟ್ 65,999 ರೂ.ಗೆ ಲಭ್ಯವಿದೆ. ಹಾಗೆಯೇ 16GB + 512GB ಸ್ಟೋರೇಜ್ ರೂಪಾಂತರವು 71,999 ರೂ.ಗೆ ಮಾರಾಟವಾಗಲಿದೆ. ಕಂಪನಿಯು ಲಾಂಚ್‌ ಆಫರ್‌ ಪ್ರಯುಕ್ತ ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 7,200 ರೂ.ಗಳ ತ್ವರಿತ ರಿಯಾಯಿತಿ ನೀಡುತ್ತಿದೆ. ಈ ಮೊಬೈಲ್ ಇಂದು (ಡಿಸೆಂಬರ್ 19) ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್, ಫ್ಲಿಪ್‌ಕಾರ್ಟ್‌, ವಿವೋ ಇಂಡಿಯಾ ಇ-ಸ್ಟೋರ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ವಿವೋ X200: ಟಾಪ್ 5 ಫೀಚರ್ಸ್‌

ಡಿಸ್ಪ್ಲೇ ವಿವರ

ನೂತನ ವಿವೋ X200 ಮೊಬೈಲ್ ಈಗಾಗಲೇ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಫೋನಿನ ಫೀಚರ್ಸ್‌ಗಳಿಗೆ ಮೊಬೈಲ್‌ ಪ್ರಿಯರು ಫಿದಾ ಆಗಿದ್ದಾರೆ. ಈ ಸ್ಮಾರ್ಟ್‌ಫೋನ್ 120Hz ಡೈನಾಮಿಕ್ ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ವಿವೋ X200 ಫೋನನ್ನು ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 15 ಆಧಾರಿತ ಫನ್ ಟಚ್ ಓಎಸ್‌ 15 ನಲ್ಲಿ ಕೆಲಸ ಮಾಡುತ್ತದೆ.

ಇಂದು Vivo X200 ಫಸ್ಟ್‌ ಸೇಲ್; ಬರೋಬ್ಬರಿ 7,200 ಡಿಸ್ಕೌಂಟ್.. ಹೇಗಿವೆ ಫೀಚರ್ಸ್‌

ಸ್ಟೋರೇಜ್‌ ಆಯ್ಕೆ

ಹೊಸ ವಿವೋ X200 ಫೋನಿನಲ್ಲಿ 12GB RAM ಮತ್ತು 16GB RAM ಲಭ್ಯವಿದೆ. ಇದು 256GB ಸ್ಟೋರೇಜ್‌ ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ವಿವೋ X200 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಇದೆ. ಈ ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ವಿವೋ X200 ಮೊಬೈಲ್ ಅನ್ನು 5800mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ಚಾರ್ಜ್‌ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 + 69 ರೇಟಿಂಗ್ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಜೊತೆಗೆ ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Vivo X200 5G First Sale Start Today via Amazon: check Price, offer and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+