Vivo X200 FE ಫೋನ್ ಪರಿಚಯ: ಫೀಚರ್ಸ್ ಹೇಗಿವೆ ನೋಡಿ!
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ನಿರೀಕ್ಷಿಸಲಾಗಿದ್ದ Vivo X200 FE ಅನ್ನು ಅಂತಿಮವಾಗಿ ತೈವಾನ್‌ನಲ್ಲಿ ಪರಿಚಯಿಸಲಾಗಿದೆ. Vivo X200 ಸರಣಿಯ ಈ ಇತ್ತೀಚಿನ ಫೋನ್, ಗಮನಾರ್ಹ ವೈಶಿಷ್ಟ್ಯಗಳು ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಯ ಗಮನಸೆಳೆದಿತ್ತು. ಇದೀಗ ಈ ಹೊಸ ಸ್ಮಾರ್ಟ್‌ಫೋನ್ ನಾಲ್ಕು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಿದ್ದು, 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹೊಂದಿರುವ Zeiss-ಟ್ಯೂನ್ಡ್ ಟ್ರಿಪಲ್ ರಿಯರ್ ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆಯಾಗಿದೆ.
ಹೊಸ Vivo X200 FE ಫೋನ್ ವೈಶಿಷ್ಟ್ಯಗಳು ಹೀಗಿವೆ,
Vivo X200 FE ಫೋನ್ 6.31-ಇಂಚಿನ 1.5K (1,216x2,640 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ರಿಫ್ರೆಶ್ ದರ ಮತ್ತು 460ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಉತ್ತಮ ದೃಶ್ಯ ಅನುಭವವನ್ನು ನೀಡುತ್ತದೆ. ಕಾರ್ಯಕ್ಷಮತೆಯಲ್ಲಿ, 12GB LPDDR5X RAM ಮತ್ತು 512GB UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲಾದ MediaTek Dimensity 9300+ ಚಿಪ್‌ಸೆಟ್ ಹೊಂದಿದೆ. ಹಾಗೂ, ಡ್ಯುಯಲ್-ಸಿಮ್ ಬೆಂಬಲಿತ ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಬಾಗದಲ್ಲಿ,, Vivo X200 FE ಫೋನಿನ ಟ್ರಿಪಲ್ ರಿಯರ್ ಕ್ಯಾಮೆರಾವು Zeiss-ಬ್ರಾಂಡೆಡ್ ಸಿಸ್ಟಮ್ ನಲ್ಲಿ ವಿಶೇಷವಾಗಿ ರೂಪಿಸಲಾಗಿದೆ. ಇದು 50-ಮೆಗಾಪಿಕ್ಸೆಲ್ Zeiss IMX921 ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ, ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಯಾವುದೇ ಪರಿಸ್ಥಿತಿಯಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಅಳವಡಿಸಲಾಗಿದೆ.
ಬ್ಯಾಟರಿ ವಿಭಾಗದಲ್ಲಿ, Vivo X200 FE, 6,500mAh ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ, ಇದು ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ. ಅಲ್ಲದೆ, ಇದು 90W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ, ಇದರಿಂದ ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ, ಈ ಫೋನ್ IP68+IP69 ರೇಟಿಂಗ್‌ಗಳನ್ನು ಹೊಂದಿದೆ, ಇದು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. ಫೋನ್ 150.83x71.76x7.99mm ಅಳತೆಗಳನ್ನು ಹೊಂದಿದ್ದು, 186g ತೂಗುತ್ತದೆ.

ಇತರೆ ವೈಶಿಷ್ಟ್ಯಗಳು, ಸಂಪರ್ಕ ಆಯ್ಕೆಗಳಲ್ಲಿ, Vivo X200 FE ಫೋನ್ ಬ್ಲೂಟೂತ್ 5.4, GPS, Beidou, Glonass, Galileo, Qzss, A-GPS, Wi-Fi, OTG, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಆನ್‌ಬೋರ್ಡ್ ಸೆನ್ಸರ್‌ಗಳಲ್ಲಿ ಬಣ್ಣ ತಾಪಮಾನ ಸಂವೇದಕ, ಇ-ದಿಕ್ಸೂಚಿ, ದೂರ ಸಂವೇದಕ, ಗುರುತ್ವಾಕರ್ಷಣೆಯ ಸಂವೇದಕ, ಬೆಳಕಿನ ಸಂವೇದಕ, ಗೈರೊಸ್ಕೋಪ್, ಇನ್ಫ್ರಾರೆಡ್ ರಿಮೋಟ್ ಕಂಟ್ರೋಲ್, ಮತ್ತು ಫ್ಲಿಕರ್ ಸೆನ್ಸರ್ ಸೇರಿವೆ.
Vivo X200 FE: ಬೆಲೆ ಮತ್ತು ಲಭ್ಯತೆ,
Vivo X200 FE ವಾಸ್ತವವಾಗಿ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾದ Vivo S30 Pro Mini ಯ ಮರುಬ್ಯಾಡ್ಜ್ ಮಾಡಿದ ಆವೃತ್ತಿ ಎಂದು ಹೇಳಲಾಗಿದೆ. Vivo ನ ಅಧಿಕೃತ ತೈವಾನ್ ವೆಬ್‌ಸೈಟ್‌ನಲ್ಲಿ ಫೋನ್ ಅನ್ನು ಪಟ್ಟಿ ಮಾಡಲಾಗಿದ್ದರೂ, ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಇದು ಫ್ಯಾಷನ್ ಪಿಂಕ್, ಲೈಟ್ ಹನಿ ಹಳದಿ, ಮಿನಿಮಲಿಸ್ಟ್ ಕಪ್ಪು, ಮತ್ತು ಮಾಡರ್ನ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.
Vivo X200 FE ಮುಂಬರುವ ವಾರಗಳಲ್ಲಿ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಲಾಗಿದೆ. ಇದು ಜುಲೈ 3 ರಂದು ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗಲಿದ್ದು, ಮಲೇಷ್ಯಾದಲ್ಲಿ ಗ್ರಾಹಕರು ಈ ಹ್ಯಾಂಡ್‌ಸೆಟ್ ಅನ್ನು ಮೊದಲೇ ಕಾಯ್ದಿರಿಸಬಹುದು. ಆದಾಗ್ಯೂ, ಭಾರತದಲ್ಲಿ ಇದರ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಇನ್ನೂ ನೀಡಿಲ್ಲ.


Click it and Unblock the Notifications








