ಸ್ವಲ್ಪ ಕಾಯಿರಿ! 200MP ಕ್ಯಾಮೆರಾ.. 5700mAh ಬ್ಯಾಟರಿ.. ಭಾರತಕ್ಕೆ ಬರುತ್ತೆ ಹೊಸ Vivo ಫೋನ್.. ಬೆಲೆ ಇಷ್ಟೆನಾ?
ಬಹುನಿರೀಕ್ಷಿತ ವಿವೋ X200 (Vivo X200) ಸರಣಿಯು ಕಳೆದ ವರ್ಷ (ಡಿಸೆಂಬರ್ 2024) ಭಾರತದಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ Vivo X200 ಮತ್ತು Vivo X200 Pro ಫೋನನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ವಿವೋ ಮೊಬೈಲ್‌ಗಳು ಕ್ಯಾಮೆರಾ ಸೆಟಪ್‌ನಿಂದಲೇ ಹೆಚ್ಚು ಸದ್ದು ಮಾಡಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ನಂತರ, ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ವಿವೋ X200 ಪ್ರೊ ಮಿನಿ (Vivo X200 Pro Mini) ಲಾಂಚ್ ಮಾಡಲಿದೆ. ಈ ಹೊಸ ಫೋನಿನ ಬಿಡುಗಡೆ ದಿನಾಂಕ, ಬೆಲೆ ಮತ್ತು ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ.
ವಿವೋ X200 ಪ್ರೊ ಮಿನಿ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50MP + 50MP + 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಇದು 6.31 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 5,700mAh ಬ್ಯಾಟರಿ, 32MP ಸೆಲ್ಫಿ ಕ್ಯಾಮೆರಾ, 90W ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ಫೀಚರ್ಸ್ ಒಳಗೊಂಡಿರುತ್ತದೆ. ಮೊಬೈಲ್ ಪ್ರಿಯರು ಈ ಫೋನಿನ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ವಿವೋ X200 ಪ್ರೊ ಮಿನಿ ಬಿಡುಗಡೆ ದಿನಾಂಕ
ವಿವೋ X200 ಪ್ರೊ ಮಿನಿ ಫೋನಿನ ಭಾರತ ಬಿಡುಗಡೆ ದಿನಾಂಕದ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ವಿವೋ ಈ ಫೋನನ್ನು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಮತ್ತು ಭಾರತದಲ್ಲಿ ಏಪ್ರಿಲ್, ಮೇ ಅಥವಾ ಜೂನ್ ತಿಂಗಳ ನಡುವೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ವಿವೋ X200 ಪ್ರೊ ಮಿನಿ ಬೆಲೆ
ವಿವೋ X200 ಪ್ರೊ ಮಿನಿ ಫೋನಿನ ಬಿಡುಗಡೆ ದಿನಾಂಕದ ಜೊತೆಗೆ, ಬೆಲೆ ವಿವರ ಸಹ ಸೋರಿಕೆಯಾಗಿದೆ. ವರದಿಯ ಪ್ರಕಾರ, ಈ ವಿವೋ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ 70 ಸಾವಿರ ರೂ.ಗಳ ಬಜೆಟ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಈ ಫೋನಿನ ಆರಂಭಿಕ ಬೆಲೆ 63,999 ರೂ. ಆಗಿರಲಿದೆ. ಹಾಗೆಯೇ ಟಾಪ್ ವೇರಿಯಂಟ್ ಬೆಲೆಯು 69,999 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ವಿವೋ X200 ಪ್ರೊ ಮಿನಿ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ X200 ಪ್ರೊ ಮಿನಿ ಸ್ಮಾರ್ಟ್‌ಫೋನ್ 6.31 ಇಂಚಿನ 1.5K ಡಿಸ್ಪ್ಲೇ ಹೊಂದಿರುತ್ತದೆ. ಇದು 2640 × 1216 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ X200 ಪ್ರೊ ಮಿನಿ ಮೊಬೈಲ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 9400 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದನ್ನು 3 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ OriginOS 5 ಜೊತೆಗೆ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ವಿವೋ X200 ಪ್ರೊ ಮಿನಿ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 100X ಡಿಜಿಟಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ತೃತೀಯ (ಪೆರಿಸ್ಕೋಪ್ ಲೆನ್ಸ್) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ X200 ಪ್ರೊ ಮಿನಿ ಸ್ಮಾರ್ಟ್‌ಫೋನ್ 5,700mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಸ್ಮಾರ್ಟ್‌ಫೋನ್ 90W ವೈರ್ಡ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.


Click it and Unblock the Notifications








