Home
ಮೊಬೈಲ್

ನಾಳೆ Vivo X200 ಸರಣಿ ಲಾಂಚ್; ಒಂದಲ್ಲ, ಮೂರು ಸೊಗಸಾದ ಫೋನ್.. 200MP ಕ್ಯಾಮೆರಾ.. ಬೆಲೆ ಲೀಕ್!

ವಿವೋ ಪ್ರಿಯರಿಗೆ ನಾಳೆ ಸಂತೋಷದ ದಿನ. ವಿವೋ X200 (Vivo X200) ಸರಣಿಯು ನಾಳೆ (ಡಿಸೆಂಬರ್ 12) ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ವಿವೋ X200 (Vivo X200) ಮತ್ತು ವಿವೋ X200 ಪ್ರೊ (Vivo X200 Pro) ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಜೊತೆಗೆ ವಿವೋ X200 ಪ್ರೊ ಮಿನಿ (Vivo X200 Pro Mini) ಸಹ ಬರುವ ಸಾಧ್ಯತೆಯಿದೆ. ಮೊಬೈಲ್‌ ಪ್ರಿಯರು ಈ ಮೊಬೈಲ್‌ ಖರೀದಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕಂಪನಿಯು ಜನವರಿ ತಿಂಗಳಲ್ಲಿ Vivo X100 ಸರಣಿಯನ್ನು ಬಿಡುಗಡೆ ಮಾಡಿತ್ತು. ಇದೀಗ, ವಿವೋ X200 ಸರಣಿಯ ಫೋನ್‌ಗಳು ನಾಳೆ ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿವೆ. ಈ ಸರಣಿಯು ಮೂರು 50MP ಕ್ಯಾಮೆರಾಗಳನ್ನು ಹೊಂದಿರುತ್ತದೆ. ಈ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತವೆ. ಇದರಲ್ಲಿ 6.67 ಮತ್ತು 6.78 ಇಂಚಿನ ಡಿಸ್ಪ್ಲೇ ಲಭ್ಯವಿರಲಿದೆ. ಜೊತೆಗೆ 512GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ನಾಳೆ Vivo X200 ಸರಣಿ ಲಾಂಚ್; 200MP ಕ್ಯಾಮೆರಾ, 6000mAh ಬ್ಯಾಟರಿ.. ಬೆಲೆ ಲೀಕ್

ವಿವೋ X200 ಸರಣಿಯ ಬೆಲೆ ಮತ್ತು ಲಭ್ಯತೆ

ವಿವೋ X200 ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಫೋನಿನ 12GB + 256GB ಸ್ಟೋರೇಜ್‌ ಬೆಲೆ 65,999 ರೂ. ಮತ್ತು 16GB + 512GB ಸ್ಟೋರೇಜ್ ಬೆಲೆ 71,999 ರೂ. ಇರಲಿದೆ. ವಿವೋ X200 ಪ್ರೊ ಮೊಬೈಲ್‌ನ 16GB + 512GB ಸ್ಟೋರೇಜ್‌ ರೂಪಾಂತರವು 94,999 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಿಡುಗಡೆಯ ಬಳಿಕ ಈ ಸ್ಮಾರ್ಟ್‌ಫೋನ್‌ಗಳು ಅಮೆಜಾನ್, ಫ್ಲಿಪ್‌ಕಾರ್ಟ್‌, ವಿವೋ ಇಂಡಿಯಾ ಇ-ಸ್ಟೋರ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ವಿವೋ X200 ಮೊಬೈಲ್ ಕಾಸ್ಮೊಸ್ ಬ್ಲಾಕ್ ಮತ್ತು ನ್ಯಾಚುರಲ್ ಗ್ರೀನ್ ಬಣ್ಣಗಳಲ್ಲಿ ಬರುತ್ತದೆ. ವಿವೋ X200 ಪ್ರೊ ಸ್ಮಾರ್ಟ್‌ಫೋನ್ ಟೈಟಾನಿಯಂ ಗ್ರೇ ಮತ್ತು ಕಾಸ್ಮೊಸ್ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.

ವಿವೋ X200 ಮತ್ತು ವಿವೋ X200 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ X200 ಮೊಬೈಲ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಆದರೆ, ವಿವೋ X200 ಪ್ರೊ ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಇದೆ. ಎರಡೂ ಸ್ಮಾರ್ಟ್‌ಫೋನ್‌ಗಳು 120Hz ಡೈನಾಮಿಕ್ ರಿಫ್ರೆಶ್ ದರ ಮತ್ತು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಹೊಂದಿರುತ್ತದೆ. ವಿವೋ X200 ಪ್ರೊ ಮೊಬೈಲ್ LTPO ತಂತ್ರಜ್ಞಾನ ಮತ್ತು 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ವಿವೋ X200 ಮೊಬೈಲ್ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ವಿವೋ X200 ಮತ್ತು ವಿವೋ X200 ಪ್ರೊ ಎರಡು ಮೊಬೈಲ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿವೆ. ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 15 ಆಧಾರಿತ FunTouch ಓಎಸ್‌ 15 ನಲ್ಲಿ ಕೆಲಸ ನಿರ್ವಹಿಸುತ್ತವೆ. ಇದು 16GB RAM ಮತ್ತು 512GB ಸ್ಟೋರೇಜ್‌ ಹೊಂದಿದೆ.

200 ಮೆಗಾಪಿಕ್ಸೆಲ್ ಕ್ಯಾಮೆರಾ

ವಿವೋ X200 ಸ್ಮಾರ್ಟ್‌ಫೋನ್ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ, 50 ಮೆಗಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಹೊಂದಿದೆ. ವಿವೋ X200 ಪ್ರೊ ಸ್ಮಾರ್ಟ್‌ಫೋನ್‌ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 200 ಮೆಗಾಪಿಕ್ಸೆಲ್ Zeiss APO ಟೆಲಿಫೋಟೋ ಲೆನ್ಸ್ ಹೊಂದಿದೆ. ಎರಡೂ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ X200 ಫೋನ್ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ ವಿವೋ X200 ಪ್ರೊ ಫೋನಿನಲ್ಲಿ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
Vivo X200 Series India Launch on December 12: Know Price, Specs and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+