ಐಫೋನ್‌ಗೆ ಸೆಡ್ಡುಹೊಡೆಯಲು ಬರುತ್ತಿದೆ Vivo X200 Ultra!
Vivo ಕಂಪನಿಯ ಹೊಸ ಫ್ಲಾಗ್‌ಶಿಪ್ 'Vivo X200 Ultra' ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಚೀನಾದಲ್ಲಿ ಬಿಡುಗಡೆಗೊಳ್ಳಲಿದೆ ಎಂಬುದು ದೃಢವಾಗಿದೆ. ಇದಕ್ಕೂ ಮೊದಲೇ ಈ Vivo X200 Ultra ಸ್ಮಾರ್ಟ್‌ಫೋನ್ ಹೇಗಿರುತ್ತದೆ ಮತ್ತು ಅದರ ಕೆಲವು ಪ್ರಮುಖ ವೈಶಿಷ್ಟ್ಯಗಳು ಅಧಿಕೃತವಾಗಿ ಬಹಿರಂಗವಾಗಿವೆ. ಈ ಕೆಲವು ಅಮಶಗಳಲ್ಲಿ, ಮುಂಬರುವ ಈ Vivo X200 Ultra ಸ್ಮಾರ್ಟ್‌ಫೋನ್ ಐಫೋನ್ 16 ಸರಣಿಯಂತೆ ಮೀಸಲಾದ ಕ್ಯಾಮೆರಾ ಬಟನ್ ಅನ್ನು ಹೊಂದಿದೆ ಮತ್ತು ದಪ್ಪತೆಯಲ್ಲಿ ಐಫೋನ್ 16 ಪ್ರೊ ಮ್ಯಾಕ್ಸ್‌ನ್ನು ಹೋಲಿಸುತ್ತದೆ ಎಂದು ತಿಳಿದುಬಂದಿದೆ.
ಹೌದು, Vivo ಕಂಪೆನಿಯ ಉತ್ಪನ್ನ ವ್ಯವಸ್ಥಾಪಕ ಹಾನ್ ಬೊ ಕ್ಸಿಯಾವೊ ಅವರು Vivo X200 Ultra ಸ್ಮಾರ್ಟ್‌ಫೋನಿನ ಮಧ್ಯದ ಫ್ರೇಮ್ ಅನ್ನು ತೋರಿಸುವ ಟೀಸರ್ ಅನ್ನು ವೀಬೊ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಚಿತ್ರದಲ್ಲ, Vivo X200 Ultra ಸ್ಮಾರ್ಟ್‌ಫೋನನ್ನು ಐಫೋನ್ 16 ಪ್ರೊ ಮ್ಯಾಕ್ಸ್ ಪಕ್ಕದಲ್ಲಿ ಇರಿಸಲಾಗಿದೆ. ಇದರಿಂದ Vivo X200 Ultra ಹೊಂದಿರುವ ತೆಳ್ಳಗಿನ ವಿನ್ಯಾಸವು ಪ್ರದರ್ಶನವಾಗಿದೆ. ಹಾಗೆಯೇ, ಚಿತ್ರಗಳನ್ನು ತೆಗೆಯಲು ಸ್ಮಾರ್ಟ್‌ಫೋನ ಬಲಬಾಗದ ಅಂಚಿನಲ್ಲಿ ಹೊಸ "ಮೀಸಲಾದ" ಕ್ಯಾಮೆರಾ ಬಟನ್ ಅನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ.

ಆಪಲ್‌ನ ಐಫೋನ್ 16 ಸರಣಿಯ ಎಲ್ಲಾ ಮಾದರಿಗಳು ಕ್ಯಾಮೆರಾ ಅಪ್ಲಿಕೇಶನ್ ಅನ್ನು ತ್ವರಿತವಾಗಿ ಪ್ರವೇಶಿಸಲು ಬದಿಯಲ್ಲಿ ಮೀಸಲಾದ ಕ್ಯಾಮೆರಾ ಬಟನ್ ಅನ್ನು ಹೊಂದಿವೆ. ಅದೇ ರೀತಿ ಈ Vivo X200 Ultra ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಬಟನ್ ಇದೆ, ನೀಲಿ ಪಟ್ಟಿಯನ್ನು ಹೊಂದಿರುವ ಈ ಬಟನ್ ಸ್ಲೈಡಿಂಗ್ ಗೆಸ್ಚರ್‌ಗಳನ್ನು ಬೆಂಬಲಿಸುತ್ತದೆ. ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೋಲುವ ಇದನ್ನು ಹೆಬ್ಬೆರಳನ್ನು ಬಳಸಿ ಸುಲಭವಾಗಿ ನಿರ್ವಹಿಸಬಹುದು. ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಚಿತ್ರಗಳನ್ನು ಕ್ಲಿಕ್ ಮಾಡಿದಾಗ ಇದರಿಂದ ಹೊಸ ಅನುಭವ ದೊರೆಯಲಿದೆ ಎನ್ನಲಾಗಿದೆ.
ಈ ವಾರದ ಆರಂಭದಲ್ಲಷ್ಟೆ, Vivo X200 Ultra ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 200-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರಲಿದೆ ಎಂಬ ಬಗ್ಗೆ ಕಂಪೆನಿಯು ಅಧಿಕೃತವಾಗಿ ತಿಳಿಸಿದೆ. Vivo X200 Ultra ಸ್ಮಾರ್ಟ್‌ಫೋನಿನ ಕ್ಯಾಮೆರಾ ಸಾಮರ್ಥ್ಯಗಳನ್ನು ಸಹ Vivo ಈಗಾಗಲೇ ಹಲವಾರು ಟೀಸರ್‌ಗಳಲ್ಲಿ ಹೈಲೈಟ್ ಮಾಡಿದ್ದು, ಮುಂಬರುವ ಈ ಸ್ಮಾರ್ಟ್‌ಫೋನಿನಲ್ಲಿ Vivo V3+ ಚಿಪ್ ಮತ್ತು ಇಮೇಜಿಂಗ್‌ಗಾಗಿ VS1 ಚಿಪ್‌ಸೆಟ್ ಇರುವುದನ್ನು ಸಹ ದೃಢಪಡಿಸಲಾಗಿದೆ.
ಹಿಂದಿನ ಸೋರಿಕೆಗಳ ಪ್ರಕಾರ, Vivo X200 Ultra ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.82-ಇಂಚಿನ 2K LTPO BOE ಮೈಕ್ರೋ-ಕ್ವಾಡ್-ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬರಲಿದೆ, ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಮತ್ತು 200-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ಇದು IP68 ಮತ್ತು IP69 ಧೂಳು ಮತ್ತು ನೀರು-ನಿರೋಧಕ ರೇಟಿಂಗ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. ಹಾಗೂ 90W ವೈರ್ಡ್ ಮತ್ತು 50W ವೈರ್‌ಲೆಸ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ.
ಚೀನಾದಲ್ಲಿ ಇದೇ ಏಪ್ರಿಲ್‌ನಲ್ಲಿ Vivo X200 Ultra ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತದಲ್ಲಿ Vivo X200 Ultra ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತದೆ ಎಂಬ ಕುರಿತಂತೆ Vivo ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ನಾವು ನೋಡುವುದಾದರೆ, ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ Vivo X100 ಸರಣಿಯು 63,999 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು ಇದರ 12GB+256GB ಮಾದರಿಗೆ 63,999 ರೂ. ಮತ್ತು 16GB+512GB ಮಾದರಿಗೆ 69,999 ರೂ. ಬೆಲೆ ನಿಗಧಿಯಾಗಿತ್ತು.


Click it and Unblock the Notifications








