ಭಾರತದಲ್ಲಿ Vivo X200T ಟೀಸರ್ ಔಟ್: ಫಸ್ಟ್ ಲುಕ್ ನೋಡಿ!
Vivo ಕಂಪೆನಿಯ ಬಹುನಿರೀಕ್ಷಿತ ಪ್ರೀಮಿಯಂ ಸ್ಮಾರ್ಟ್‌ಫೋನ್ Vivo X200T ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲು ಸಜ್ಜಾಗಿದೆ ಎಂಬ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ ಮೀಸಲಾದ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಭಾರತದಲ್ಲಿ Vivo X200T ಫೋನಿನ ಮೊದಲ ಅಧಿಕೃತ ಚಿತ್ರ ಬಹಿರಂಗವಾಗಿದೆ. ಇದರ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್‌ನ ವಿನ್ಯಾಸವು ದೃಢವಾಗಿದೆ. ಇದರಿಂದ Vivo X200T ಬಿಡುಗಡೆಯು ಅಧಿಕೃತವಾಗಿ ಸಮೀಪಿಸುತ್ತಿದೆ ಎಂಬ ಸೂಚನೆ ಸಹ ಸಿಕ್ಕಿದೆ.
Vivo X200T ಗಾಗಿ ಮೀಸಲಾದ ಮೈಕ್ರೋಸೈಟ್ ಟೀಸರ್‌ಗಳ ಪ್ರಕಾರ, Vivo X200T ಹಿಂಭಾಗದಲ್ಲಿ ಆಕರ್ಷಕ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರಲಿದೆ. ಇದರಲ್ಲಿ ಜೈಸ್ಸ್ (Zeiss) ಸಹಭಾಗಿತ್ವದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ. ಈ ವಿನ್ಯಾಸವು ಪ್ರೀಮಿಯಂ ಲುಕ್ ನೀಡುವುದರ ಜೊತೆಗೆ ಫೋಟೋಗ್ರಫಿ ಪ್ರಿಯರಿಗೆ ಹೆಚ್ಚು ಆಕರ್ಷಕವಾಗುವಂತೆ ರೂಪುಗೊಂಡಿದೆ. ಮೊದಲಿಗೆ ಪರ್ಪಲ್ ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಈ ಫೋನ್, ಯುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದಂತೆ ಕಾಣುತ್ತದೆ.

ಭಾರತದಲ್ಲಿ Vivo X200T ಬೆಲೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ ಈ ಸುದ್ದಿ ಬಂದಿದೆ.ಬೆಲೆಯ ವಿಷಯದಲ್ಲಿ, Vivo X200T ಅನ್ನು ಭಾರತದಲ್ಲಿ ಸುಮಾರು ರೂ. 50,000 ರಿಂದ ರೂ. 55,000 ನಡುವಿನ ಶ್ರೇಣಿಯಲ್ಲಿ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ಬೆಲೆ ಶ್ರೇಣಿಯಲ್ಲಿ ಫ್ಲ್ಯಾಗ್‌ಶಿಪ್ ಅನುಭವ ನೀಡುವ ಫೋನ್ ಆಗಿ ಇದು ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಬಣ್ಣಗಳ ಆಯ್ಕೆಯಲ್ಲಿ Stellar Black ಮತ್ತು Seaside Lilac ವೇರಿಯಂಟ್‌ಗಳು ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.
ಇದೀಗ ಸೋರಿಕೆಯಾಗಿರುವ ಹಲವು ಮಾಹಿತಿಗಳ ಪ್ರಕಾರ, Vivo X200T ನಲ್ಲಿ 6.67 ಇಂಚಿನ AMOLED ಡಿಸ್ಪ್ಲೇ ಇದ್ದು, 1.5K ರೆಸಲ್ಯೂಶನ್ ನೀಡುವ ಸಾಧ್ಯತೆ ಇದೆ. ಕಾರ್ಯಕ್ಷಮತೆ ವಿಭಾಗದಲ್ಲಿ, MediaTek Dimensity 9400+ ಚಿಪ್‌ಸೆಟ್ ಬಳಸಲಾಗಬಹುದು. ಸಾಫ್ಟ್‌ವೇರ್ ವಿಭಾಗದಲ್ಲಿ, ಇದು Android 16 ಆಧಾರಿತ OriginOS 6 ಜೊತೆಗೆ ಬರುತ್ತದೆ ಎಂಬ ನಿರೀಕ್ಷೆ ಇದೆ. ಬ್ಯಾಟರಿ ವಿಬಾಗದಲ್ಲಿ, 6,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, 90W ವೈಯರ್ಡ್ ಮತ್ತು 40W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನಿರೀಕ್ಷಿಸಲಾಗಿದೆ.

ಕ್ಯಾಮೆರಾ ವಿಭಾಗವೇ ಈ Vivo X200T ಫೋನ್‌ನ ಪ್ರಮುಖ ಹೈಲೈಟ್ ಆಗಿರಲಿದೆ. ವರದಿಗಳ ಪ್ರಕಾರ, ಇದರಲ್ಲಿ 50 ಮೆಗಾಪಿಕ್ಸೆಲ್ Sony LYT-702 ಪ್ರೈಮರಿ ಕ್ಯಾಮೆರಾ (OIS ಸಹಿತ), 50 ಮೆಗಾಪಿಕ್ಸೆಲ್ Samsung JN1 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹಾಗೂ 50 ಮೆಗಾಪಿಕ್ಸೆಲ್ LYT-600 ಅಲ್ಟ್ರಾವೈಡ್ ಕ್ಯಾಮೆರಾ ಇರಬಹುದು. ಒಟ್ಟಾರೆಯಾಗಿ Vivo X200T ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಹೊಸ ಸ್ಪರ್ಧೆಯನ್ನು ತರುವಂತಹ ಫೀಚರ್ಸ್ ಮತ್ತು ಬೆಲೆಗಳನ್ನು ಹೊಂದಿರಬಹುದು ಎಂದು ಹಲವು ವರದಿಗಳು ಹೇಳಿವೆ.
ಗಮನಿಸುವುದಾದರೆ, ಭಾರತದಲ್ಲಿ ಲಾಂಚ್ ಆಗುವ ಮುನ್ನವೇ Vivo X200T, BIS ಪ್ರಮಾಣೀಕರಣ ತಾಣದಲ್ಲಿ V2561 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದ್ದು, ಇದು ಭಾರತೀಯ ಮಾರುಕಟ್ಟೆಗೆ ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕಂಪನಿಯು ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ಜನವರಿ ಅಂತ್ಯದೊಳಗೆ ಅನಾವರಣವಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತಿವೆ. ಅಧಿಕೃತ ಲಾಂಚ್ ಸಮೀಪಿಸುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಫೋನ್ ಬಗ್ಗೆ ಇನ್ನಷ್ಟು ವಿವರಗಳು ಬಹಿರಂಗವಾಗುವ ನಿರೀಕ್ಷೆ ಇದೆ.


Click it and Unblock the Notifications








