Home
ಮೊಬೈಲ್

ಭಾರತದಲ್ಲಿ Vivo X200T ಬಿಡುಗಡೆ: ಹೊಸ ಸಬ್-ಫ್ಲ್ಯಾಗ್‌ಶಿಪ್ ಹೇಗಿದೆ ನೋಡಿ!

ಭಾರತದಲ್ಲಿ Vivo ಕಂಪೆನಿಯ ಜನಪ್ರಿಯ X200 ಶ್ರೇಣಿಗೆ ಇತ್ತೀಚಿನ ಸೇರ್ಪಡೆಯಾಗಿ ಹೊಸ Vivo X200T ಸ್ಮಾರ್ಟ್‌ಫೋನ್ ಇಂದು (ಜ.27, ಮಂಗಳವಾರ) ಭರ್ಜರಿಯಾಗಿ ಬಿಡುಗಡೆಯಾಗಿದೆ. ಈಗಾಗಲೇ Vivo X200 ಮತ್ತು Vivo X200 ಪ್ರೊ ಮಾದರಿಗಳನ್ನು ಒಳಗೊಂಡಿರುವ ಈ ಸರಣಿಗೆ, Vivo X200T ಸ್ಮಾರ್ಟ್‌ಫೋನ್ ಕೂಡ ಸೇರಿಕೊಂಡಿದ್ದು, ಇದು ಝೈಸ್ ಜೊತೆ ಸಹ-ಎಂಜಿನಿಯರಿಂಗ್ ಮಾಡಲಾದ 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ, 20Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಡಿಸ್‌ಪ್ಲೇ ಮತ್ತು 90W ವೇಗದ ಚಾರ್ಜಿಂಗ್‌ನೊಂದಿಗೆ 6,200mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸರಳವಾಗಿ ಹೇಳುವುದಾದರೆ, Vivo X200T ಫೋನ್ ಒಂದು ಸಬ್-ಫ್ಲ್ಯಾಗ್‌ಶಿಪ್ ಆಗಿದ್ದು, 55 ಸಾವಿರ ಬೆಲೆ ವಿಭಾಗದಲ್ಲಿ ಸ್ಪರ್ಧಿಸುವಂತೆ ಬಂದಿದೆ. ಹಾಗಾದರೆ, ಹೊಸ Vivo X200T ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Vivo X200T: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Vivo X200T ಬೆಲೆ 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಯು 59,999 ರೂ. ರಿಂದ ಪ್ರಾರಂಭವಾಗುತ್ತದೆ. ಇದು 12GB + 512GB ಕಾನ್ಫಿಗರೇಶನ್‌ನಲ್ಲಿಯೂ ಲಭ್ಯವಿದ್ದು, ಇದರ ಬೆಲೆ 69,999 ರೂ.ಗಳು. ಆದರೆ, ಗ್ರಾಹಕರು ಈ ಸ್ಮಾರ್ಟ್‌ಫೋನ್ ಮೇಲೆ 5,000 ರೂ. ಮೌಲ್ಯದ ತ್ವರಿತ ಕ್ಯಾಶ್‌ಬ್ಯಾಕ್ ಅಥವಾ 5,000 ರೂ. ವರೆಗಿನ ವಿನಿಮಯ ಬೋನಸ್ ಹಾಗೂ 18 ತಿಂಗಳ ವೆಚ್ಚವಿಲ್ಲದ EMI ಕೊಡುಗೆಯನ್ನು ಪಡೆಯಬಹುದು. ಇನ್ನು ಇದೇ ಫೆಬ್ರವರಿ 3 ರಿಂದ Vivo ಇಂಡಿಯಾ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತದ ಚಿಲ್ಲರೆ ಪಾಲುದಾರರ ಮೂಲಕ Vivo X200T ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬರುತ್ತಿದ್ದು, ಗ್ರಾಹಕರು ಸೀಸೈಡ್ ಲಿಲಾಕ್ ಮತ್ತು ಸ್ಟೆಲ್ಲರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಲು ಅವಕಾಶವಿರಲಿದೆ.

ಭಾರತದಲ್ಲಿ Vivo X200T ಬಿಡುಗಡೆ: ಹೊಸ ಸಬ್-ಫ್ಲ್ಯಾಗ್‌ಶಿಪ್ ಹೇಗಿದೆ ನೋಡಿ!

Vivo X200T: ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೇ ವಿಭಾಗದಲ್ಲಿ Vivo X200T ಸ್ಮಾರ್ಟ್‌ಫೋನ್ 6.67-ಇಂಚಿನ AMOLED ಸ್ಕ್ರೀನ್ ಅನ್ನು ಹೊಂದಿದ್ದು, ಇದು1,260 x 2,800 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 460 PPI ಪಿಕ್ಸೆಲ್ ಸಾಂದ್ರತೆ ಮತ್ತು ಗರಿಷ್ಠ 5,000 ನಿಟ್ಸ್ ಹೊಳಪನ್ನು ನೀಡುತ್ತದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, Vivo X200T 3nm ತಂತ್ರಜ್ಞಾನ ಆಧಾರಿತ ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12GB LPDDR5X ಅಲ್ಟ್ರಾ RAM ಮತ್ತು 512GB ವರೆಗೆ UFS 4.1 ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, Zeiss-ಟ್ಯೂನ್ ಮಾಡಲಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹಾಗೂ 3x ಆಪ್ಟಿಕಲ್ ಜೂಮ್ ಹೊಂದಿರುವ 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಸೇರಿವೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಕೂಡ ಒದಗಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 6,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದ್ದು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ.

Vivo X200T ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ದೀರ್ಘಕಾಲದ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಫೋನ್‌ಗೆ ಐದು ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು ಏಳು ವರ್ಷಗಳ ಭದ್ರತಾ ನವೀಕರಣಗಳನ್ನು ಒದಗಿಸುವ ಭರವಸೆಯನ್ನು ಕಂಪನಿ ನೀಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಮತ್ತು 4G LTE ನೆಟ್‌ವರ್ಕ್ ಬೆಂಬಲದ ಜೊತೆಗೆ Wi-Fi 7, ಬ್ಲೂಟೂತ್ 5.4, NFC ಮತ್ತು USB ಟೈಪ್-C ಪೋರ್ಟ್ ಇವೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 + IP69 ರೇಟಿಂಗ್ ಇದ್ದರೆ, ಫೋನ್ 160 x 74.2 x 7.9mm ಗಾತ್ರ ಮತ್ತು 203 ಗ್ರಾಂ ತೂಕವಿದೆ.

Best Mobiles in India

English summary
Vivo has launched the new Vivo X200T in India as a sub-flagship smartphone, featuring a Zeiss co-engineered 50MP triple camera setup, a 6.67-inch AMOLED display with high refresh rate, and a massive 6,200mAh battery with 90W fast charging, targeting the competitive ₹55,000 price segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+