Home
ಮೊಬೈಲ್

ಇಂದಿನಿಂದ Vivo X200T ಸೇಲ್: ಬೆಲೆ, ಕೊಡುಗೆ ಮತ್ತು ಫೀಚರ್ಸ್ ನೋಡಿ!

ಭಾರತದ ಮೊಬೈಲ್ ಮಾರುಕಟ್ಟೆಗೆ ಕಳೆದ ವಾರವಷ್ಟೇ (ಜ.27) ಬಿಡುಗಡೆಯಾಗಿರುವ Vivo ಕಂಪೆನಿಯ ಬಹುನಿರೀಕ್ಷಿತ Vivo X200T ಸ್ಮಾರ್ಟ್‌ಫೋನ್ ಇಂದು ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ಝೈಸ್ ಜೊತೆ ಸಹ-ಎಂಜಿನಿಯರಿಂಗ್ ಮಾಡಲಾದ 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ, 20Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಡಿಸ್‌ಪ್ಲೇ ಮತ್ತು 90W ವೇಗದ ಚಾರ್ಜಿಂಗ್‌ನೊಂದಿಗೆ 6,200mAh ಬ್ಯಾಟರಿಯಂತಹ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ Vivo X200T ಫೋನ್ ಬೆಲೆ 55 ರೂ.ಗಳಿಂದ ಆರಂಭವಾಗಿದ್ದು, ಈ ಕುರಿತಂತೆ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.

Vivo X200T: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Vivo X200T ಫೋನ್ ಫೆಬ್ರವರಿ 3 ರಿಂದ Vivo ಇಂಡಿಯಾ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತದ ಚಿಲ್ಲರೆ ಪಾಲುದಾರರ ಮೂಲಕ ಖರೀದಿಗೆ ಲಭ್ಯವಿದೆ. 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಇದರ ಮೂಲ ಮಾದರಿಯು 59,999 ರೂ. ಹಾಗೂ ಇದರ 12GB + 512GB ಮಾದರಿಯ ಬೆಲೆ 69,999 ರೂ.ಗಳು. ಆದರೆ, ಗ್ರಾಹಕರು ಈ ಸ್ಮಾರ್ಟ್‌ಫೋನ್ ಮೇಲೆ 5,000 ರೂ. ಮೌಲ್ಯದ ತ್ವರಿತ ಕ್ಯಾಶ್‌ಬ್ಯಾಕ್ ಅಥವಾ 5,000 ರೂ. ವರೆಗಿನ ವಿನಿಮಯ ಬೋನಸ್ ಹಾಗೂ 18 ತಿಂಗಳ ವೆಚ್ಚವಿಲ್ಲದ EMI ಕೊಡುಗೆಯನ್ನು ಪಡೆಯಬಹುದು. ಇನ್ನು ಗ್ರಾಹಕರು ಸೀಸೈಡ್ ಲಿಲಾಕ್ ಮತ್ತು ಸ್ಟೆಲ್ಲರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಲು ಅವಕಾಶವಿದೆ.

ಇಂದಿನಿಂದ Vivo X200T ಸೇಲ್: ಬೆಲೆ, ಕೊಡುಗೆ ಮತ್ತು ಫೀಚರ್ಸ್ ನೋಡಿ!

Vivo X200T: ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೇ ವಿಭಾಗದಲ್ಲಿ Vivo X200T ಸ್ಮಾರ್ಟ್‌ಫೋನ್ 6.67-ಇಂಚಿನ AMOLED ಸ್ಕ್ರೀನ್ ಅನ್ನು ಹೊಂದಿದ್ದು, ಇದು 1,260 x 2,800 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 460 PPI ಪಿಕ್ಸೆಲ್ ಸಾಂದ್ರತೆ ಮತ್ತು ಗರಿಷ್ಠ 5,000 ನಿಟ್ಸ್ ಹೊಳಪನ್ನು ನೀಡುತ್ತದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, Vivo X200T 3nm ತಂತ್ರಜ್ಞಾನ ಆಧಾರಿತ ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12GB LPDDR5X ಅಲ್ಟ್ರಾ RAM ಮತ್ತು 512GB ವರೆಗೆ UFS 4.1 ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, Zeiss-ಟ್ಯೂನ್ ಮಾಡಲಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹಾಗೂ 3x ಆಪ್ಟಿಕಲ್ ಜೂಮ್ ಹೊಂದಿರುವ 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಸೇರಿವೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಕೂಡ ಒದಗಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 6,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದ್ದು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ.

Vivo X200T ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ದೀರ್ಘಕಾಲದ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಫೋನ್‌ಗೆ ಐದು ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು ಏಳು ವರ್ಷಗಳ ಭದ್ರತಾ ನವೀಕರಣಗಳನ್ನು ಒದಗಿಸುವ ಭರವಸೆಯನ್ನು ಕಂಪನಿ ನೀಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಮತ್ತು 4G LTE ನೆಟ್‌ವರ್ಕ್ ಬೆಂಬಲದ ಜೊತೆಗೆ Wi-Fi 7, ಬ್ಲೂಟೂತ್ 5.4, NFC ಮತ್ತು USB ಟೈಪ್-C ಪೋರ್ಟ್ ಇವೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 + IP69 ರೇಟಿಂಗ್ ಇದ್ದರೆ, ಫೋನ್ 160 x 74.2 x 7.9mm ಗಾತ್ರ ಮತ್ತು 203 ಗ್ರಾಂ ತೂಕವಿದೆ.

Best Mobiles in India

English summary
Vivo X200T is now on sale in India with a 6.67-inch AMOLED display, 50MP Zeiss camera, and 90W fast charging, along with cashback and EMI offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+