ಭಾರತಕ್ಕೆ Vivo X200T ಆಗಮನ ಶೀಘ್ರ: ಫೀಚರ್ಸ್, ಬೆಲೆ ಮಾಹಿತಿ ಲೀಕ್!
Vivo ತನ್ನ ಹೊಸ ಕಾಂಪ್ಯಾಕ್ಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ Vivo X200T ಅನ್ನು ಭಾರತಕ್ಕೆ ತರುತ್ತಿರುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಈಗಾಗಲೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣದಲ್ಲಿ ಈ ಫೋನ್ ಕಾಣಿಸಿಕೊಂಡಿರುವುದು ಬಿಡುಗಡೆಯು ಸಮೀಪದಲ್ಲಿದೆ ಎಂಬ ಸೂಚನೆ ನೀಡುತ್ತದೆ. ಲೀಕ್‌ಗಳು ಮತ್ತು ತಂತ್ರಜ್ಞಾನ ವಲಯದ ವರದಿಗಳ ಪ್ರಕಾರ, Vivo X200T ಭಾರತದಲ್ಲಿ ಜನವರಿ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಜೊತೆಗೆ ಇತ್ತೀಚಿಗೆ ಈ Vivo X200T ಫೋನಿನ ನಿರೀಕ್ಷಿತ ಫೀಚರ್ಸ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.!
ಹೌದು, ಜನಪ್ರಿಯ ಟಿಪ್‌ಸ್ಟರ್ ಯೋಗೇಶ್ ಬ್ರಾರ್ (@heyitsyogesh) ಅವರನ್ನು ಉಲ್ಲೇಖಿಸಿ, ಸ್ಮಾರ್ಟ್‌ಪ್ರಿಕ್ಸ್ ವರದಿ ಮಾಡಿರುವ ಪ್ರಕಾರ, ವದಂತಿಯಾಗಿರುವ Vivo X200T ಸ್ಮಾರ್ಟ್‌ಫೀನ್ ಜನವರಿ ಕೊನೆಯ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ, ಅಂದರೆ ಜನವರಿ 26 ಮತ್ತು ಜನವರಿ 31 ರ ನಡುವೆ ದೇಶದಲ್ಲಿ ಬಿಡುಗಡೆಯಾಗಬಹುದು. ಈ ಫೋನ್ ಭಾರತೀಯ ಬಳಕೆದಾರರಿಗೆ ಕನಿಷ್ಠ ಸ್ಟೆಲ್ಲಾರ್ ಬ್ಲ್ಯಾಕ್ ಮತ್ತು ಸೀಸೈಡ್ ಲಿಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ, ಕಂಪನಿಯು ಫೋನ್ ಬಿಡುಗಡೆಯನ್ನು ಇನ್ನೂ ದೃಢೀಕರಿಸಿಲ್ಲ ಎಂಬುದು ನಾವು ಗಮನಿಸಬೇಕಾದ ಸಂಗತಿ.
ಇನ್ನು ಬೆಲೆ ವಿಚಾರದಲ್ಲಿ, Vivo X200T ಅನ್ನು ಭಾರತದಲ್ಲಿ ಸುಮಾರು ರೂ. 50,000 ರಿಂದ ರೂ. 55,000 ದರದಲ್ಲಿ ಪರಿಚಯಿಸಬಹುದು ಎಂದು ಈ ವರದಿಯು ತಿಳಿಸಿದೆ. ಫೀಚರ್ಸ್ ವಿಷಯದಲ್ಲಿ, Vivo X200T ಫೋನ್ 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ, ಇದು 120Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ, ಇದು Zeiss-ಬ್ರಾಂಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಉದ್ದೇಶಿತ Vivo X200T ಕುರಿತು ಹೆಚ್ಚಿನ ವಿವರಗಳನ್ನು ಮುಂಬರುವ ವಾರಗಳಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.
ನಾವು ಈ ಹಿಂದೆ ಹೇಳಿದಂತೆ, Vivo X200T, Vivo X200 FE ನ ಮರುಬ್ರಾಂಡೆಡ್ ಆವೃತ್ತಿಯಾಗುವ ನಿರೀಕ್ಷೆಯಿದೆ. ಈ ಮೇಲಿನ ಮಾಹಿತಿ ನಿಜವಾಗಿದ್ದರೆ, Vivo X200T ಬೆಲೆಯು ಜುಲೈ 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾದ 'FE' ಮಾದರಿಗಿಂತ ಸ್ವಲ್ಪ ಕಡಿಮೆ ಬೆಲೆ ಹೊಂದಿರುತ್ತದೆ, ಇದರ 12GB RAM + 256GB ಸ್ಟೋರೇಜ್ ರೂಪಾಂತರದ ಆರಂಭಿಕ ಬೆಲೆ ರೂ. 54,999 ಮತ್ತು ಟಾಪ್-ಆಫ್-ಲೈನ್ 16GB RAM + 512GB ಸ್ಟೋರೇಜ್ ರೂಪಾಂತರದ ಆರಂಭಿಕ ಬೆಲೆ ರೂ. 59,999 ರೂ.ಗಳಾಗಿದ್ದು, ಇದನ್ನು ಆಂಬರ್ ಹಳದಿ, ಫ್ರಾಸ್ಟ್ ಬ್ಲೂ ಮತ್ತು ಲಕ್ಸ್ ಗ್ರೇ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

Vivo X200T: ನಿರೀಕ್ಷಿತ ಫೀಚರ್ಸ್
ಹಲವಾರು ಸೊರಿಕೆಯ ಮಾಹಿತಿಯಂತೆ, Vivo X200T ನಲ್ಲಿ 6.67 ಇಂಚಿನ AMOLED ಸ್ಕ್ರೀನ್ ಇರಲಿದೆ ಎನ್ನಲಾಗಿದ್ದು, ಇದು 120Hz ರಿಫ್ರೆಶ್ ರೇಟ್ ಬೆಂಬಲಿಸಬಹುದು. ಇದರಿಂದ ಗೇಮಿಂಗ್, ವೀಡಿಯೊ ವೀಕ್ಷಣೆ ಮತ್ತು ದಿನನಿತ್ಯದ ಬಳಕೆಯಲ್ಲಿ ಸ್ಮೂತ್ ಅನುಭವ ಸಿಗಲಿದೆ. ಪ್ರೀಮಿಯಂ ಡಿಸ್ಪ್ಲೇ ಗುಣಮಟ್ಟವು ಯುವ ಬಳಕೆದಾರರು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ವಿಶೇಷ ಆಕರ್ಷಣೆಯಾಗುವ ಸಾಧ್ಯತೆ ಇದೆ.
ಪರ್ಫಾರ್ಮೆನ್ಸ್ ಭಾಗದಲ್ಲಿ, Vivo X200T ಗೆ MediaTek Dimensity 9000 ಸರಣಿ ಅಥವಾ Dimensity 9400+ ಚಿಪ್‌ಸೆಟ್ ಸಿಗುವ ಸಾಧ್ಯತೆ ಇದೆ. ಈ ಪ್ರೊಸೆಸರ್ ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು AI ಆಧಾರಿತ ಫೀಚರ್‌ಗಳಿಗೆ ಸೂಕ್ತವಾಗಿದೆ. ಜೊತೆಗೆ, ಸುರಕ್ಷತೆಗಾಗಿ 3D ಅಲ್ಟ್ರಾಸೋನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಬಹುದು ಎಂದು ವರದಿಗಳು ಸೂಚಿಸುತ್ತವೆ.
ಫೋನ್ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಲು, Vivo X200T ನಲ್ಲಿ 4.5K ನ್ಯಾನೋಫ್ಲೂಯಿಡ್ ವಾಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಇರಬಹುದು. ಬ್ಯಾಟರಿ ಮತ್ತು ಚಾರ್ಜಿಂಗ್ ವಿಷಯದಲ್ಲೂ ಈ ಫೋನ್ ಗಮನ ಸೆಳೆಯುವ ಸಾಧ್ಯತೆ ಇದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ನಿರೀಕ್ಷೆಯಿದೆ, ಇದರಿಂದ ಕಡಿಮೆ ಸಮಯದಲ್ಲೇ ಬ್ಯಾಟರಿ ಚಾರ್ಜ್ ಮಾಡಬಹುದು.
ಕ್ಯಾಮೆರಾ ವಿಭಾಗದಲ್ಲಿ, Vivo X200T ಪ್ರಮುಖ ಅಪ್‌ಗ್ರೇಡ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ. ಈ ಫೋನ್‌ನಲ್ಲಿ Zeiss ಸಹಯೋಗದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರಬಹುದು. ಮೂರು ಕ್ಯಾಮೆರಾಗಳೂ 50 ಮೆಗಾಪಿಕ್ಸೆಲ್ ಸೆನ್ಸಾರ್‌ಗಳನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಕಡಿಮೆ ಬೆಳಕಿನ ಫೋಟೋಗ್ರಫಿ, ಪೋರ್ಟ್ರೇಟ್ ಮತ್ತು ವಿಡಿಯೋ ರೆಕಾರ್ಡಿಂಗ್‌ನಲ್ಲಿ ಉತ್ತಮ ಫಲಿತಾಂಶ ನೀಡಲು ಈ ಕ್ಯಾಮೆರಾ ವ್ಯವಸ್ಥೆ ಸಹಾಯ ಮಾಡಬಹುದು.
ಒಟ್ಟಾರೆಯಾಗಿ, Vivo X200T ಫೋನ್ ಭಾರತದಲ್ಲಿ ಲಾಂಚ್ ಆದರೆ, ಕಾಂಪ್ಯಾಕ್ಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಭಾರೀ ಸ್ಪರ್ಧೆ ಉಂಟಾಗುವ ಸಾಧ್ಯತೆ ಇದೆ. ಶಕ್ತಿಶಾಲಿ ಪ್ರೊಸೆಸರ್, Zeiss ಕ್ಯಾಮೆರಾ, ವೇಗದ ಡಿಸ್ಪ್ಲೇ ಮತ್ತು ವೇಗದ ಚಾರ್ಜಿಂಗ್ ಫೀಚರ್‌ಗಳು ಈ ಫೋನ್ ಅನ್ನು ಗಮನಾರ್ಹ ಆಯ್ಕೆಯಾಗಿ ಮಾಡುತ್ತವೆ. ಅಧಿಕೃತ ಲಾಂಚ್ ಘೋಷಣೆಯೊಂದಿಗೆ ಇನ್ನಷ್ಟು ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಕನ್ನಡ ಗಿಜ್‌ಬಾಟ್‌ನಲ್ಲಿ ಟ್ಯೂನ್ ಆಗಿರಿ.


Click it and Unblock the Notifications








