Vivo X200T vs Motorola Signature vs OnePlus 15R: ಯಾವುದು ಬೆಸ್ಟ್?
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಿಡ್-ರೇಂಜ್ ಪ್ರೀಮಿಯಂ ಫ್ಲಾಗ್‌ಶಿಪ್ ವಿಭಾಗದಲ್ಲಿ ಸ್ಪರ್ಧೆ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚೆಗೆ ಬಿಡುಗಡೆಗೊಂಡ Vivo X200T ಹಾಗೂ Motorola Signature ಹಾಗೂ ಕಳೆದ ವರ್ಷದ ಅಂತ್ಯದಲ್ಲಿ ಪರಿಚಯವಾಗಿರುವ OnePlus 15R ಸ್ಮಾರ್ಟ್‌ಫೋನ್‌ಗಳು ಒಂದೇ ಬೆಲೆ ಶ್ರೇಣಿಯಲ್ಲಿ ಲಭ್ಯವಿವೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಡಿಸ್ಪ್ಲೇ, ಬಲವಾದ ಬ್ಯಾಟರಿ ಮತ್ತು ಅಡ್ವಾನ್ಸ್ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಯುವ ಸ್ಮಾರ್ಟ್‌ಫೋನ್ ಪ್ರಿಯರನ್ನು ಹೆಚ್ಚಾಗಿ ಸೆಳೆಯುತ್ತವೆ. ಹಾಗಾಗಿ, Vivo X200T, Motorola Signature ಮತ್ತು OnePlus 15R ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಅಗತ್ಯಕ್ಕೆ ಯಾವ ಫೋನ್ ಸೂಕ್ತ ಎಂಬುದನ್ನು ತಿಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಬನ್ನಿ ಈ ಮೂರು ಫೋನ್‌ಗಳ ನಡುವಿನ ಸಂಪೂರ್ಣ ಹೋಲಿಕೆಯನ್ನು ನೋಡೋಣ.
ಮೊದಲು ಬೆಲೆ ವಿಷಯದಲ್ಲಿ
Vivo X200T ಭಾರತದಲ್ಲಿ ₹59,999 ರಿಂದ ಆರಂಭವಾಗುತ್ತದೆ. ಈ ಬೆಲೆಯಲ್ಲಿ 12GB RAM ಮತ್ತು 256GB ಸ್ಟೋರೇಜ್ ದೊರೆಯುತ್ತದೆ. 12GB RAM + 512GB ಸ್ಟೋರೇಜ್ ಮಾದರಿಯ ಬೆಲೆ ₹69,999. ಈ ಫೋನ್ Seaside Lilac ಮತ್ತು Stellar Black ಬಣ್ಣಗಳಲ್ಲಿ ಲಭ್ಯವಿದೆ.
Motorola Signature ಕೂಡ ₹59,999 ಆರಂಭಿಕ ಬೆಲೆಯೊಂದಿಗೆ ಬರುತ್ತದೆ (12GB RAM + 256GB). 16GB RAM + 512GB ಮಾದರಿ ₹64,999 ಹಾಗೂ 16GB RAM + 1TB ಸ್ಟೋರೇಜ್ ಮಾದರಿ ₹69,999. ಇದು Pantone Carbon ಮತ್ತು Pantone Martini Olive ಬಣ್ಣಗಳಲ್ಲಿ ಲಭ್ಯ.
ಈ ಮೂರು ಫೋನ್‌ಗಳಲ್ಲಿ OnePlus 15R ಅತ್ಯಂತ ಅಗ್ಗದ ಆಯ್ಕೆ. ಇದರ ಆರಂಭಿಕ ಬೆಲೆ ₹47,999 (12GB RAM + 256GB). 512GB ಸ್ಟೋರೇಜ್ ಮಾದರಿಯ ಬೆಲೆ ₹52,999. Charcoal Black, Mint Breeze ಮತ್ತು Electric Violet ಬಣ್ಣಗಳಲ್ಲಿ ಲಭ್ಯ.
ಹೋಲಿಕೆ: ಕಡಿಮೆ ಬಜೆಟ್‌ನಲ್ಲಿ ಫ್ಲಾಗ್‌ಶಿಪ್ ಅನುಭವ ಬೇಕಾದವರಿಗೆ OnePlus 15R ಉತ್ತಮ ಆಯ್ಕೆ. (ಗಮನಿಸಿ: ಇಲ್ಲಿ ಬ್ಯಾಂಕ್ ಕೊಡುಗೆಯನ್ನು ಸೇರಿಸಲಾಗಿಲ್ಲ)
ಡಿಸ್ಪ್ಲೇ ಮತ್ತು ವಿನ್ಯಾಸ
Vivo X200T ನಲ್ಲಿ 6.67 ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. 460ppi ಪಿಕ್ಸೆಲ್ ಡೆನ್ಸಿಟಿಯು ಸ್ಪಷ್ಟ ದೃಶ್ಯ ಅನುಭವ ನೀಡುತ್ತದೆ. ಇದರ ತೂಕ 203ಗ್ರಾಂ.
Motorola Signature ನಲ್ಲಿ 6.83 ಇಂಚಿನ AMOLED ಡಿಸ್ಪ್ಲೇ, 165Hz ರಿಫ್ರೆಶ್ ರೇಟ್ ಮತ್ತು Gorilla Glass Victus 2 ರಕ್ಷಣೆ ಇದೆ. ತೂಕ ಕೇವಲ 186ಗ್ರಾಂ ಇದ್ದು, ಈ ಮೂರು ಫೋನ್‌ಗಳಲ್ಲಿ ಅತ್ಯಂತ ಕಡಿಮೆ ತೂಕ ಹೊಂದಿದೆ.
OnePlus 15R ನಲ್ಲಿ 6.8 ಇಂಚಿನ LTPO AMOLED ಡಿಸ್ಪ್ಲೇ, 165Hz ರಿಫ್ರೆಶ್ ರೇಟ್ ಮತ್ತು 3,600 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ತೂಕ 219ಗ್ರಾಂ ಇದ್ದು, ಮೂರು ಫೋನ್‌ಗಳಲ್ಲಿಯೇ ಸ್ವಲ್ಪ ಭಾರವಿದೆ.
ಹೋಲಿಕೆ: ಡಿಸ್ಪ್ಲೇ ರಿಫ್ರೆಶ್ ರೇಟ್ ಮತ್ತು ಗೇಮಿಂಗ್‌ಗೆ Motorola ಮತ್ತು OnePlus ಎರಡೂ ಸ್ಮಾರ್ಟ್‌ಫೋನ್‌ಗಳು ಮುಂಚೂಣಿಯಲ್ಲಿವೆ.
ಪ್ರೊಸೆಸರ್ ಮತ್ತು ಸಾಫ್ಟ್‌ವೇರ್
Vivo X200T ನಲ್ಲಿ 3nm MediaTek Dimensity 9400+ ಚಿಪ್‌ಸೆಟ್ ಇದೆ. ಮತ್ತು Android 16 ಆಧಾರಿತ Origin OS 6 ನಲ್ಲಿ ಕಾರ್ಯನಿರ್ವಹಿಸಲಿದೆ.
Motorola Signature ನಲ್ಲಿ Snapdragon 8 Gen 5 ಪ್ರೊಸೆಸರ್ ಇದೆ, Android 16 ಮತ್ತು Hello UI ನಲ್ಲಿ ಕಾರ್ಯನಿರ್ವಹಿಸಲಿದೆ.
OnePlus 15R ನಲ್ಲಿ Snapdragon 8 Gen 5 ಚಿಪ್‌ಸೆಟ್ ಇದೆ, OxygenOS 16 ನಲ್ಲಿ ಕಾರ್ಯನಿರ್ವಹಿಸಲಿದೆ.
ಹೋಲಿಕೆ: ಪರ್ಫಾರ್ಮೆನ್ಸ್ ದೃಷ್ಟಿಯಿಂದ Motorola ಮತ್ತು OnePlus ಸ್ವಲ್ಪ ಮುಂದಿವೆ.

ಕ್ಯಾಮೆರಾ ವಿಭಾಗ
Vivo X200T ನಲ್ಲಿ Zeiss ಟ್ಯೂನ್ ಮಾಡಿದ 50MP ಟ್ರಿಪಲ್ ಕ್ಯಾಮೆರಾ (ಪ್ರೈಮರಿ + ಅಲ್ಟ್ರಾವೈಡ್ + 3x ಟೆಲಿಫೋಟೋ) ಸೆಟಪ್ ಇದೆ. ಮತ್ತು 32MP ಸೆಲ್ಫಿ ಕ್ಯಾಮೆರಾ ಇದೆ.
Motorola Signature ನಲ್ಲಿ 50MP Sony LYT-828 ಪ್ರೈಮರಿ, 50MP ಅಲ್ಟ್ರಾವೈಡ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಸೆಟಪ್ ಇದೆ. ಮತ್ತು 50MP ಸೆಲ್ಫಿ ಕ್ಯಾಮೆರಾ.
OnePlus 15R ನಲ್ಲಿ 50MP ಪ್ರೈಮರಿ + 8MP ಅಲ್ಟ್ರಾವೈಡ್ ಕ್ಯಾಮೆರಾ ಸೆಟಪ್ ಇದೆ. ಮತ್ತು 32MP ಸೆಲ್ಫಿ ಸೆಲ್ಫಿ ಕ್ಯಾಮೆರಾ ಇದೆ.
ಹೋಲಿಕೆ: ಕ್ಯಾಮೆರಾ ಪ್ರಿಯರಿಗೆ Motorola Signature ಅತ್ಯುತ್ತಮ ಆಯ್ಕೆಯಾಗಿದೆ. ಈ ಬೆಲೆಯಲ್ಲಿ Motorola Signature ಕ್ಯಾಮೆರಾ ಫೀಚರ್ಸ್ ಊಹಿಸಲಾಗದ್ದು ಎನ್ನಬಹುದು.
ಬ್ಯಾಟರಿ ಮತ್ತು ಚಾರ್ಜಿಂಗ್
Vivo X200T ನಲ್ಲಿ 6,200mAh ಬ್ಯಾಟರಿ ಇದ್ದು, ಇದಕ್ಕೆ 90W ವೈರ್ಡ್ + 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ.
Motorola Signature ನಲ್ಲಿ 5,200mAh ಬ್ಯಾಟರಿ ಇದ್ದು, ಇದಕ್ಕೆ 90W ವೈರ್ಡ್ + 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ.
OnePlus 15R ನಲ್ಲಿ 7,400mAh ಬ್ಯಾಟರಿ ಇದ್ದು, ಇದಕ್ಕೆ 80W ವೈರ್ಡ್ ಚಾರ್ಜಿಂಗ್ ಬೆಂಬಲವಿದೆ
ಹೋಲಿಕೆ: ಬ್ಯಾಟರಿ ಲೈಫ್‌ನಲ್ಲಿ OnePlus 15R ಸ್ಪಷ್ಟವಾಗಿ ಮುಂಚೂಣಿಯಲ್ಲಿದ್ದರೆ, ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ನಲ್ಲಿ Motorola Signature ಉತ್ತಮವಾಗಿದೆ.
ರಕ್ಷಣೆ ಮತ್ತು ಬಿಲ್ಡ್
Vivo X200T ಮತ್ತು Motorola Signature -ಪೋನ್‌ಗಳು IP68 + IP69 ರೇಟಿಂಗ್ ಹೊಂದಿವೆ.
OnePlus 15R ಫೋನ್ IP66 + IP68 + IP69 + IP69K ರೇಟಿಂಗ್ ಹೊಂದಿದೆ.
ಹೋಲಿಕೆ: ರಕ್ಷಣೆ ಮತ್ತು ಬಿಲ್ಡ್ ವಿಷಯದಲ್ಲಿ ಮೂರು ಫೋನ್‌ಗಳು ಉತ್ತಮವಾಗಿವೆ ಎಂದು ಹೇಳಬಹುದು
ಅಂತಿಮ ನಿರ್ಣಯ ಏನು?
Vivo X200T, Motorola Signature ಮತ್ತು OnePlus 15R ಮೂರು ಸ್ಮಾರ್ಟ್‌ಫೋನ್‌ಗಳು ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಡಿಸ್ಪ್ಲೇ, ಬಲವಾದ ಬ್ಯಾಟರಿ ಮತ್ತು ಅಡ್ವಾನ್ಸ್ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿವೆ. ಆದರೆ, ನಿಮ್ಮ ಬಳಕೆಯ ಅಗತ್ಯ ಮತ್ತು ಬಜೆಟ್ ಆಧಾರವಾಗಿ ಸರಿಯಾದ ಸ್ಮಾರ್ಟ್‌ಫೋನ್ ಆಯ್ಕೆಮಾಡುವುದು ಉತ್ತಮ. ನಿಮಗೆ,
ಕ್ಯಾಮೆರಾ ಮತ್ತು ಪ್ರೀಮಿಯಂ ಅನುಭವ ಬೇಕಾದರೆ: Motorola Signature ಆಯ್ದುಕೊಳ್ಳಿ
ಬ್ಯಾಟರಿ ಮತ್ತು ಬೆಲೆ ಮೌಲ್ಯ ಬೇಕಾದರೆ: OnePlus 15R ಆಯ್ದುಕೊಳ್ಳಿ
ಸಮತೋಲನವಾದ ಫ್ಲಾಗ್‌ಶಿಪ್ ಬೇಕಾದರೆ: Vivo X200T ಆಯ್ದುಕೊಳ್ಳಿ


Click it and Unblock the Notifications