ಗ್ಲಾಸ್ ಫಿಂಗರ್ ಪ್ರಿಂಟ್‌ ನೊಂದಿಗೆ ಬರುತ್ತಿರುವ ವಿವೊ ಎಕ್ಸ್ 21 ಒಂದು ಅದ್ಬುತ ಸ್ಮಾರ್ಟ್‌ಪೋನ್!!

|

ಕಳೆದೊಂದು ದಶಕದಲ್ಲಾದ ತಂತ್ರಜ್ಞಾನ ಅಭಿವೃದ್ಧಿಯಿಂದ ಸ್ಮಾರ್ಟ್ ಪೋನ್ ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿದೆ. ಕಂಪ್ಯೂಟರ್, ಮ್ಯೂಸಿಕ್ ಪ್ಲೇಯರ್, ಗೇಮಿಂಗ್ ಸಲಕರಣೆ, ಹೈ ಎಂಡ್ ಕ್ಯಾಮೆರಾ ಎಲ್ಲವಕ್ಕೂ ಪರ್ಯಾಯವಾಗಿ ಸ್ಮಾರ್ಟ್ ಪೋನ್ ಕಣ್ಣ ಮುಂದಿದೆ. ಆದರೆ, ಕಳೆದ 2-3 ವರ್ಷಗಳಲ್ಲಿ ಸ್ಮಾರ್ಟ್ ಪೋನ್ ಮಾರುಕಟ್ಟೆ ಏರಿಳಿತಗಳನ್ನು ಕಾಣುತ್ತಿದೆ. ಪ್ರಮುಖ ಹ್ಯಾಂಡ್ ಸೆಟ್ಸ್, ಫ್ಲಾಗ್ ಶಿಪ್ ಸ್ಮಾರ್ಟ್ ಪೋನ್ ಗಳು ಮಾರುಕಟ್ಟೆಯಲ್ಲಿ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ಕಾಣುತ್ತಿವೆ.

ಗ್ಲಾಸ್ ಫಿಂಗರ್ ಪ್ರಿಂಟ್‌ ನೊಂದಿಗೆ ಬರುತ್ತಿದೆ ವಿವೊ ಎಕ್ಸ್ 21 ಸ್ಮಾರ್ಟ್‌ಪೋನ್!!

ಹೊಸತನದೊಂದಿಗೆ ಗುರುತಿಸಿಕೊಂಡಿರುವ ಟಾಪ್ ಸ್ಮಾರ್ಟ್ ಪೋನ್ ತಯಾರಿಕಾ ಕಂಪನಿ ವಿವೊ ತನ್ನ ಹೊಸ ಫ್ಲಾಗ್ ಶಿಪ್ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಲು ವೇದಿಕೆ ಸಜ್ಜು ಮಾಡಿಕೊಂಡಿದೆ. ಸೂಕ್ಷ್ಮ ಬೆಜೆಲ್ ನೊಂದಿಗೆ ಟಾಲರ್ ಡಿಸ್ ಪ್ಲೇ ಹೊಂದಿರುವ ಹೊಸ ಸ್ಮಾರ್ಟ್ ಪೋನ್ ತ್ವರಿತ ಚಾರ್ಜಿಂಗ್, ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ ಮತ್ತು AR ಸ್ಟಿಕ್ಕರ್ಸ್ ಅನ್ನು ಹೊಂದಿರಲಿದೆ. ಆದರೆ, ಸ್ಮಾರ್ಟ್ ಪೋನ್ ಮಾರುಕಟ್ಟೆಯಲ್ಲಿ ಮುಂದುವರೆಯುತ್ತಿರುವ ಟ್ರೆಂಡ್ ಬದಲಾಯಿಸಲು ವಿವೊ ನಿರ್ಧರಿಸಿದ್ದು, ಹೊಸ ಸ್ಮಾರ್ಟ್ ಪೋನ್ ಎಲ್ಲದಕ್ಕೂ ಉತ್ತರವಾಗಲಿದೆ.

ಗ್ಲಾಸ್ ಫಿಂಗರ್ ಪ್ರಿಂಟ್ ಸೆನ್ಸಾರ್

ಗ್ಲಾಸ್ ಫಿಂಗರ್ ಪ್ರಿಂಟ್ ಸೆನ್ಸಾರ್

ವಿವೋ ಕಂಪನಿ ವಿವೋ ಎಕ್ಸ್21 ಸ್ಮಾರ್ಟ್ ಪೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಜಗತ್ತಿನ ಮೊದಲ ಫ್ಯುಟುರಿಸ್ಟಿಕ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಕಮರ್ಷಿಯಲ್ ಸ್ಮಾರ್ಟ್ ಪೋನ್ ಆಗಿರಲಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2017)ರಲ್ಲಿ ಹೊಸ ಬಯೋಮೆಟ್ರಿಕ್ ಗುಣಮಟ್ಟ ಹೊಂದಿರುವ ತಂತ್ರಜ್ಞಾನವನ್ನು ಜಗತ್ತಿನ ಮುಂದೆ ವಿವೋ ಅನಾವರಣಗೊಳಿಸಿತ್ತು.

ಗ್ಲಾಸ್ ಫಿಂಗರ್ ಪ್ರಿಂಟ್ ಹೊಂದಿದ ಮಾಸ್ ಮಾರ್ಕೆಟ್ ನ ಮೊದಲ ಸ್ಮಾರ್ಟ್ ಪೋನ್

ಗ್ಲಾಸ್ ಫಿಂಗರ್ ಪ್ರಿಂಟ್ ಹೊಂದಿದ ಮಾಸ್ ಮಾರ್ಕೆಟ್ ನ ಮೊದಲ ಸ್ಮಾರ್ಟ್ ಪೋನ್

ಗ್ಲಾಸ್ ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಪೋನ್ ಆಗಿ ವಿವೋ X20 Plus ಬಿಡುಗಡೆ ಮಾಡಿತ್ತು. ಅದನ್ನೇ ಇನ್ನಷ್ಟು ಉತ್ತಮಗೊಳಿಸಿ X21 ಸ್ಮಾರ್ಟ್ ಪೋನ್ ಪರಿಚಯಿಸಲು ಮುಂದಾಗಿದೆ. ಫ್ಯುಟುರಿಸ್ಟಿಕ್ ತಂತ್ರಜ್ಞಾನದೊಂದಿಗೆ ಯಾವುದೇ ಅನುಮಾನಗಳಿಲ್ಲದೇ ಮಾಸ್ ಮಾರ್ಕೆಟ್ ಗೆ ಕಾಲಿಡುತ್ತಿರುವ ಸ್ಮಾರ್ಟ್ ಪೋನ್ ಇದಾಗಿದೆ. ಗ್ಲಾಸ್ ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿದ ಮತ್ತಷ್ಟು ಸ್ಮಾರ್ಟ್ ಪೋನ್ ಗಳು ಬಿಡುಗಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇಂಜಿನಿಯರಿಂಗ್ ತಂತ್ರದ ಸೂಕ್ಷ್ಮತೆ

ಇಂಜಿನಿಯರಿಂಗ್ ತಂತ್ರದ ಸೂಕ್ಷ್ಮತೆ

ವಿವೋ ಎಕ್ಸ್ 21 ನ AMOLED ಸ್ಕ್ರೀನ್ ಕೆಳಗಡೆ ಸಿನಾಪ್ಡಿಕ್ಸ್ ಕ್ಲಿಯರ್ IDFS9500 ಆಪ್ಟಿಕಲ್ ಸೆನ್ಸಾರ್ ಅಳವಡಿಸಲಾಗಿದೆ. ಇದೊಂದು ಬಹು ಕಷ್ಟಕರವಾದ ಕಾರ್ಯವಾಗಿದ್ದು, ಸೂಕ್ಷ್ಮ ಇಂಜಿನಿಯರಿಂಗ್ ತಂತ್ರಗಳನ್ನು ಉಪಯೋಗಿಸಬೇಕಾಗುತ್ತದೆ. ಆಪಲ್ ಮತ್ತು ಸ್ಯಾಮಸಂಗ್ ಎರಡು ಈ ತಂತ್ರಜ್ಞಾನವನ್ನು ಪ್ರಯೋಗಿಸಿವೆ. ಆದರೆ, ಯಶಸ್ವಿಯಾಗಿದ್ದು ಮಾತ್ರ ವಿವೋ.

ಮೂರನೇ ಪದರಿನಲ್ಲಿರುವ ಸೆನ್ಸಾರ್ ನಿಂದ ಕಾರ್ಯ

ಮೂರನೇ ಪದರಿನಲ್ಲಿರುವ ಸೆನ್ಸಾರ್ ನಿಂದ ಕಾರ್ಯ

ಸಿನಾಪ್ಡಿಕ್ಸ್ ಕ್ಲಿಯರ್ IDFS9500 ಫಿಂಗರ್ ಪ್ರಿಂಟ್ ಸೆನ್ಸಾರ್ ಪ್ರಮುಖವಾಗಿ ತೆಳುವಾದ CMOS ಸೆನ್ಸಾರ್ ಆಗಿದ್ದು, ಆಪ್ಟಿಕ್ಸ್ ತತ್ವಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ವಿವೋ X21 ಸ್ಮಾರ್ಟ್ ಪೋನ್ ಮೇಲಿನ ಗ್ಲಾಸ್ ನಿಂದ ಮೂರು ಪದರುಗಳ ನಂತರ ಅಳವಡಿಸಲಾಗಿದೆ. OLED pixels ಮೂಲಕ ಹಾದು ಹೋದ ಪ್ರತಿಫಲನಗೊಂಡ ಫಿಂಗರ್ ಪ್ರಿಂಟ್ ಅನ್ನು ಸಿನಾಪ್ಟಿಕ್ಸ್ ಸೆರೆ ಹಿಡಿಯುತ್ತದೆ.

ಬಳಸುವವರೆಗೂ ಮ್ಯಾಜಿಕ್ ಗೊತ್ತಾಗಲ್ಲ

ಬಳಸುವವರೆಗೂ ಮ್ಯಾಜಿಕ್ ಗೊತ್ತಾಗಲ್ಲ

ಗ್ಲಾಸ್ ಫಿಂಗರ್ ಪ್ರಿಂಟ್ ಸೆನ್ಸಾರ್ ಬಹಳ ಆಸಕ್ತಿಕರವಾಗಿದ್ದು, ನೀವೇ ಬಳಸುವವರೆಗೂ ಇದರ ಮ್ಯಾಜಿಕ್ ಗೊತ್ತಾಗಲ್ಲ. ಥಿಯಾರಿಟಿಕಲಿ ಫೇಶಿಯಲ್ ರೆಕಾಗ್ನೈಷನ್ ಗಿಂತ ಫಿಂಗರ್ ಪ್ರಿಂಟ್ ರೀಡರ್ ಹೆಚ್ಚು ವೇಗವಾಗಿದೆ. ಮತ್ತು ಯಾವುದೇ ವಾತಾವರಣದಲ್ಲೂ ಸಹ ಬಳಸಬಹುದಾಗಿದೆ. ಕತ್ತಲೆ ಕೋಣೆಯಲ್ಲಿಯೂ ಉಪಯೋಗಿಸಬಹುದು, ಪ್ರಖರ ಸೂರ್ಯನ ಬೆಳಕಲ್ಲೂ ಬಳಸಬಹುದಾಗಿದೆ.

ಬೆರಳಿನ ಕಂಪರ್ಟಬಲಿಟಿಯು ಮುಖ್ಯ ವಿವೋಗೆ

ಬೆರಳಿನ ಕಂಪರ್ಟಬಲಿಟಿಯು ಮುಖ್ಯ ವಿವೋಗೆ

ಬೆರಳನ್ನು ಆರಾಮಾಗಿ ಸ್ಕ್ರೀನ್ ಮೇಲಿಡಲು ವಿವೋ X21ರ ಚಿನ್ ನ 1 cm ಮೇಲ್ಭಾಗದಲ್ಲಿ ಸೆನ್ಸಾರ್ ಅಳವಡಿಸಲಾಗಿದೆ. X21ನ AMOLED ಸ್ಕ್ರೀನ್ ನಲ್ಲಿನ ನಿಗದಿತ ಸ್ಥಳವನ್ನು ನೀವು ಮುಟ್ಟಿದಾಗ ಅಲ್ಲಿನ ಬೆಳಕು ನಿಮ್ಮ ಫಿಂಗರ್ ಪ್ರಿಂಟ್ ಅನ್ನು ಕ್ಯಾಪ್ಚರ್ ಮಾಡುತ್ತದೆ. ಬೆಳಕಿನ ಕಿರಣಗಳು ಪ್ರತಿಫಲನಗೊಂಡು ಸ್ಕ್ರೀನ್ ಕೆಳಗಿರುವ ಸೆನ್ಸಾರ್ ಮೂಲಕ ಕ್ಯಾಪ್ಚರ್ ಆಗುತ್ತದೆ. ಸೆನ್ಸಾರ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸ್ವಲ್ಪ ಒತ್ತಡ ಹಾಕುವುದು ಉತ್ತಮ.

ಭದ್ರತೆಗಾಗಿ ಎರಡೇರಡು ಫೀಚರ್

ಭದ್ರತೆಗಾಗಿ ಎರಡೇರಡು ಫೀಚರ್

ವಿವೋ X21 ಗ್ಲಾಸ್ ಫಿಂಗರ್ ಪ್ರಿಂಟ್ ಸೆನ್ಸಾರ್ ನೊಂದಿಗೆ ಸ್ನಾಪಿ ಫೇಸ್ ಅನ್ ಲಾಕ್ ಫೀಚರ್ ಅನ್ನು ನೀಡಿದೆ. ಇದು ಫೇಸ್ ರೆಕ್ನಾಯಷೆನ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಕಣ್ಣನ್ನು ಮಿಟುಕಿಸುವದರಿಂದ ಹ್ಯಾಂಡ್ ಸೆಟ್ ಅನ್ ಲಾಕ್ ಆಗುತ್ತದೆ. ಎರಡೇರಡು ಉನ್ನತ ಭದ್ರತಾ ತಂತ್ರಗಳನ್ನು ವಿವೋ X21 ಹೊಂದಿರುವುದರಿಂದ ಯಾವುದೇ ಆತಂಕ ಬೇಕಿಲ್ಲ.

ಉತ್ಕೃಷ್ಟ ಡಿಸ್ ಪ್ಲೇ

ಉತ್ಕೃಷ್ಟ ಡಿಸ್ ಪ್ಲೇ

ಗ್ಲಾಸ್ ಫಿಂಗರ್ ಪ್ರಿಂಟ್ ತಂತ್ರಜ್ಞಾನ ಬಿಟ್ಟು ವಿವೋ X21 ನೋಡಿದರೆ, 19:9 ಆಸ್ಪೆಕ್ಟ್ ರೇಸಿಯೋದೊಂದಿಗೆ 6.28 ಇಂಚ್ AMOLED ಬೆಜೆಲ್ ಡಿಸ್ ಪ್ಲೇ. ಮಲ್ಟಿಮೀಡಿಯಾ ಉದ್ದೇಶಕ್ಕೆ ಬಳಸುವಾಗ 90.3% ಸ್ಕ್ರೀನ್ ಟು ಬಾಡಿ ರೆಸಿಯೋ ವಿವೋವನ್ನು ಬೆಸ್ಟ್ ಸ್ಮಾರ್ಟ್ ಪೋನ್ ಆಗಿ ರೂಪಿಸಿದೆ.

ಕ್ಯಾಮೆರಾದಲ್ಲೂ ಬೆಸ್ಟ್... ಡ್ಯುಯಲ್ ಪಿಕ್ಸೆಲ್ ಸೆನ್ಸಾರ್..!

ಕ್ಯಾಮೆರಾದಲ್ಲೂ ಬೆಸ್ಟ್... ಡ್ಯುಯಲ್ ಪಿಕ್ಸೆಲ್ ಸೆನ್ಸಾರ್..!

Vivo X21ನಲ್ಲಿನ ಫೀಚರ್ ಗಳಲ್ಲಿ ಮತ್ತೊಂದು ಉತ್ತಮ ಫೀಚರ್ ಎಂದರೆ ಸ್ಪೋರ್ಟ್ಸ್ ಡ್ಯುಯಲ್ ಲೆನ್ಸ್ ಕ್ಯಾಮೆರಾ. ಇದು ಡ್ಯುಯಲ್ ಪಿಕ್ಸೆಲ್ ಸೆನ್ಸಾರ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇದು ಮಂದ ಬೆಳಕಿನಲ್ಲಿ ವೇಗವಾದ ಫೋಕಸಿಂಗ್ ನಿಂದ ಕ್ಯಾಮೆರಾದ ಸಾಮರ್ಥ್ಯ ಹೆಚ್ಚಿಸುತ್ತದೆ. 4K ವಿಡಿಯೋ ರೆಕಾರ್ಡಿಂಗ್ ಗೆ ಆಯ್ಕೆಯಿದ್ದು, AI ಆಧಾರಿತ 12MP ಸೆಲ್ಫಿ ಕ್ಯಾಮೆರಾ ಇದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಕೈಗೆಟಕುವ ಬೆಲೆಯಲ್ಲಿಯೇ ಹೊಸ ತಂತ್ರಜ್ಞಾನ

ಕೈಗೆಟಕುವ ಬೆಲೆಯಲ್ಲಿಯೇ ಹೊಸ ತಂತ್ರಜ್ಞಾನ

ಸ್ನಾಪ್ ಡ್ರಾಗನ್ 660 CPU, ಆಂಡ್ರಾಯ್ಡ್ ಒರಿಯೋದಿಂದ ಕಾರ್ಯನಿರ್ವಹಿಸಲಿರುವ Vivo X21 6GB RAM ಹೊಂದಿದ್ದು, ಭಾರತದಲ್ಲಿ 35,990ರೂ.ಗೆ ಮಾರಾಟವಾಗಲಿದೆ. ಹೀಗೆ ಹೊಸ ಗ್ಲಾಸ್ ಪಿಂಗರ್ ಪ್ರಿಂಟ್ ತಂತ್ರಜ್ಞಾನ ಪರಿಚಯಿಸಿದ ವಿವೋ X21, ಸ್ಮಾರ್ಟ್ ಪೋನ್ ತಯಾರಕರಿಗೆ ಹೊಸ ದಾರಿಯನ್ನು ವಿವೋ ತೋರಿಸಿದೆ.

Best Mobiles in India

English summary
Vivo X21 is the first commercial smartphone with the futuristic in-display fingerprint scanning technology. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X