ಶೀಘ್ರವೇ ಮಾರುಟಕ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ವಿವೊ X20 ಸ್ಮಾರ್ಟ್ ಫೋನ್..!
ಮೊದಲ ಬಾರಿಗೆ ಮಾರುಕಟ್ಟೆಗೆ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್ ಫೋನ್, ವಿವೊ X20 ಯನ್ನು ಲಾಂಚ್ ಮಾಡಿದ್ದ ವಿವೋ. ಮಾರ್ಚ್ ನಲ್ಲಿ ಚೀನಾ ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಈ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಮುಂದಾಗಿದ್ದು, ಮೇ.29ರಂದು ಭಾರತದಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ.

ವಿವೊ ಫಾಗ್ ಶಿಪ್ ಆಗಿರುವ ವಿವೊ X20 ಸ್ಮಾರ್ಟ್ ಫೋನ್ ಈಗಾಗಲೇ ಹಲವು ಮಾರುಕಟ್ಟೆಗಳಲ್ಲಿ ದೊರೆಯುತ್ತಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಶೀಘ್ರವೇ ಆಂಡ್ರಾಯ್ಡ್ ಪಿ ಬೀಟಾ ಆವೃತ್ತಿಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಾಕಷ್ಟು ಸದ್ದು ಮಾಡಲಿದೆ.
ಈಗಾಗಲೇ ವಿವೋ ಭಾತರದಲ್ಲಿ X ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಸಲುವಾಗಿ ಇನ್ವೆಟ್ ಅನ್ನು ಕಳುಹಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿವೊ X20ಯನ್ನು ಲಾಂಚ್ ಮಾಡಲಾಗುವುದು ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ವಿವೊ X20 ಸ್ಮಾರ್ಟ್ ಫೋನ್ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಆಗಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಒನ್ ಪ್ಲಸ್ 6 ಮತ್ತು ಹಾನರ್ 10 ಸ್ಮಾರ್ಟ್ ಫೋನ್ ಗಳಿಗೆ ಸರಿಸಾಟಿಯಾಗಲಿದ್ದು, ತನ್ನ ವಿಶೇಷತೆಗಳ ಮೂಲಕವೇ ಸಾಕಷ್ಟು ಬಳಕೆದಾರರನ್ನು ಸೆಳೆಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನಿನಲ್ಲಿ 6.28 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಅಮೊಲೈಡ್ ಡಿಸ್ ಪ್ಲೇ ಇದಾಗಿದೆ.
ಇದು ನೋಡಲು ಐಪೋನ್ X ಮಾದರಿಯಲ್ಲಿ ಕಾಣಿಸಿಕೊಂಡಿದ್ದು, 19:9 ಅನುಪಾತದ ಡಿಸ್ ಪ್ಲೇಯೊಂದಿಗೆ ನೋಚ್ ಸಹ ಇದೆ. ಸ್ನಾಪ್ ಡ್ರಾಗನ್ 660 ರೋಸೆಸ್ 6GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ. ಬಳಕೆದಾರರಿಗೆ ವಿಭಿನ್ನ ಅನುಭವನ್ನು ಈ ಸ್ಮಾರ್ಟ್ ಪೋನ್ ನೀಡಲಿದೆ.


Click it and Unblock the Notifications



