ಭಾರತದಲ್ಲಿ ಲಾಂಚ್ ಆಯ್ತು ವಿಶ್ವದ ಮೊದಲ ಇನ್ ಫಿಂಗರ್‌ಪ್ರಿಂಟ್ ಸ್ಮಾರ್ಟ್‌ಫೋನ್ 'ವಿವೋ X21'!!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ವಿಶೇಷತೆಗಳಿಂದಲೇ ಟ್ರೆಂಡ್ ಸೃಷ್ಟಿಸಿರುವ ಆಪಲ್ ನೋಚ್ ಫುಲ್ ಸ್ಕ್ರಿನ್ ಡಿಸ್‌ಪ್ಲೇ ವಿನ್ಯಾಸದ 'ವಿವೋ X21' ಮಾರುಕಟ್ಟೆಗೆ ಇಂದು ಕಾಲಿಟ್ಟಿದೆ. ಇಂದು ನವದೆಹಲಿಯಲ್ಲಿ ಆಯೋಜನೆಯಾಗಿದ್ದ ಬಹುದೊಡ್ಡ ಸಮಾರಂಭದಲ್ಲಿ ವಿವೊ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್ 'ವಿವೋ X21' ಭಾರತದ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.!
ಇಂದು ಬಿಡುಗಡೆಯಾದ 'ವಿವೋ X21' ಸ್ಮಾರ್ಟ್‌ಪೋನ್ ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿದೆ. ಈ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿಯೇ ಮೊದಲ ಬಾರಿಗೆ ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ವಿವೊವಿನ ಬಹು ನಿರೀಕ್ಷಿತ 'ವಿವೋ X21' ಸ್ಮಾರ್ಟ್‌ಫೋನ್ ಪಾತ್ರವಾಗಿದೆ.

ಇನ್ನು ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ 'ವಿವೋ X21' ಸ್ಮಾರ್ಟ್‌ಫೋನ್ ಬೆಲೆ ಮತ್ತು ಫೀಚರ್ಸ್‌ಗಳಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿಗೆ ನೇರಾನೇರ ಸೆಡ್ಡು ಹೊಡೆಯುತ್ತಿದೆ. ಹಾಗಾದರೆ, ವಿವೊ ಕಂಪೆನಿಯ ನೂತನ 'ವಿವೋ X21' ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!

ಡಿಸ್‌ಪ್ಲೇ ಮತ್ತು ವಿನ್ಯಾಸ!
ಐಫೋನ್ X ಮಾದರಿಯಲ್ಲಿ ವಿವೋ X21 ಸ್ಮಾರ್ಟ್‌ಫೋನ್ ಕೂಡ ನೋಚ್ ವಿನ್ಯಾಸದಲ್ಲಿ (2280 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್) 6.28 ಇಂಚಿನ FHD+ ಗುಣಮಟ್ಟದ ಸೂಪರ್ ಅಮೋಲೈಡ್ ಡಿಸ್‌ಪ್ಲೇಯನ್ನು ಹೊಂದಿದೆ. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫ್ಲಾಶ್‌ಲೈಟ್ ಮಾತ್ರ ಹೊಂದಿರುವ ಸ್ಮಾರ್ಟ್‌ಫೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಂತೆ ರೂಪಿತವಾಗಿದೆ.

ಪ್ರೊಸೆಸರ್ ಮತ್ತು RAM!
ವಿವೋ X21 ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 660Soc ಆಕ್ಟಕೋರ್ ಪ್ರೊಸೆಸರ್ ಅನ್ನು ನೀಡಲಾಗಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾದ ಸಹಾಯದಿಂದ ಕಾರ್ಯನಿರ್ವಹಣೆ ನಿಡುವ ಪ್ರೊಸೆಸರ್ ಜೊತೆಗೆ 6GB RAM ಮತ್ತು 64GB| 128GB ಇಂಟರ್‌ನಲ್ ಮೆಮೊರಿ ವೆರಿಯಂಟ್‌ನಲ್ಲಿ ಬಿಡುಗಡೆಯಾಗಿದೆ. ಆಂಡ್ರಾಯ್ಡ್ ಒರಿಯೋದಲ್ಲಿ ಒಎಸ್ ಸ್ಮಾರ್ಟ್‌ಫೋನಿನಲ್ಲಿ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ!
ಐಫೋನ್ Xನಲ್ಲಿ ನೀಡಿರುವ ರೀತಿಯಲ್ಲಿಯೇ ವಿವೋ X21 ಸ್ಮಾರ್ಟ್‌ಫೋನಿನಲ್ಲಿ ಒಂದರ ಕೆಳಗೆ ಮತ್ತೊಂದು ಕ್ಯಾಮೆರಾ ಮಾದರಿಯಲ್ಲಿ 12 MP + 5 MPಯ ಡ್ಯುಯಲ್ ಲೈನ್ಸ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. 12 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ಕೃತಕ ಬುದ್ದಿ ಮತ್ತೆ ಕ್ಯಾಮೆರಾ ತಂತ್ರಜ್ಞಾನವನ್ನು ಒಳಗೊಂಡಿದೆ.

ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್!
ಮೊದಲೇ ಹೇಳೀದಂತೆ ಮೊದಲ ಬಾರಿಗೆ ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ವಿವೋ X21 ಸ್ಮಾರ್ಟ್‌ಫೋನ್ ಪಾತ್ರವಾಗಿದೆ. ಅಂದರೆ ಯಾವುದೇ ಭೌತಿಕ ಆಯ್ಕೆಗಳಿಲ್ಲದೆ, ಫೋನಿನ ಡಿಸ್‌ಪ್ಲೇ ಟಚ್ ಮಾಡಿದರೆ ನಿಖರವಾಗಿ ಕಾರ್ಯನಿರ್ವಹಣೆ ನೀಡುವಂತಹ ಸ್ಕ್ಯಾನರ್ ಅನ್ನು ಡಿಸ್‌ಪ್ಲೇಯಲ್ಲಿಯೇ ಅಳವಡಿಸಲಾಗಿದೆ.

ಇತೆರೆ ಏನೆಲ್ಲಾ ಫೀಚರ್ಸ್?
3200mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್, ಬ್ಲೂಟೂತ್ 5.0, ಒಟಿಜಿ ಸಪೋರ್ಟ್, 4G ವೋಲ್ಟ್, ಫನ್ ಟಚ್ ಓಎಸ್ 4.0, ಬೊಕೆ ವೈಶಿಷ್ಟ್ಯ, 4ಕೆ ವೀಡಿಯೋ ರೆಕಾರ್ಡಿಂಗ್, ಎಐ ಚಾಲಿತ ಫೇಸ್ ಬ್ಯೂಟಿ ವೈಶಿಷ್ಟ್ಯಗಳನ್ನು ನಾವು ವಿವೋ X21 ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ. ಬಹುತೇಕ ಎಲ್ಲಾ ಹೈ ಎಂಡ್ ಫೀಚರ್ಸ್‌ಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.


ಮಾರಾಟ ಮತ್ತು ಬೆಲೆ?
ಭಾರೀ ಫೀಚರ್ಸ್ ಒಳಗೊಂಡಿರುವ ವಿವೋ X21 ಸ್ಮಾರ್ಟ್‌ಫೋನ್ ಬೆಲೆ ಭಾರತದಲ್ಲಿ 35,990 ರೂಪಾಯಿಗಳಿಂದ ಪ್ರಾರಂಭವಾಗಿದೆ. ವಿವೋ X21 ಸ್ಮಾರ್ಟ್‌ಫೋನ್ ಇಂದಿನಿಂದಲೇ ಮಾರಾಟಕ್ಕಿದ್ದು, ಪ್ರಖ್ಯಾತ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮತ್ತು ವಿವೊ ಕಂಪೆನಿಯ ಆನ್‌ಲೈನ್ ಸ್ಟೋರ್‌ನಲ್ಲಿ ಇಂದೇ ಬುಕ್ ಮಾಡಬಹುದಾಗಿದೆ.


Click it and Unblock the Notifications