Home
ಮೊಬೈಲ್

ಭಾರತದಲ್ಲಿ Vivo X300 ಬೆಲೆ ಎಷ್ಟು?..ಸಂಜು ಚೌಧರಿಯಿಂದ ಭರ್ಜರಿ ಸಿಹಿಸುದ್ದಿ!

ಭಾರತದ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Vivo X300 ಸರಣಿಯು ಇದೇ ಡಿಸೆಂಬರ್ 2 ರಂದು ದೇಶದಲ್ಲಿ ಬಿಡುಗಡೆಯಾಗುವುದು ಅಧಿಕೃತವಾಗಿದೆ. ಈ ಸರಣಿಯಲ್ಲಿ ಬಹುನಿರೀಕ್ಷಿತ Vivo X300 ಮತ್ತು Vivo X300 Pro ಎರಡೂ ಫೋನ್‌ಗಳು ಬಿಡುಗಡೆಯಾಗಲಿವೆ ಮತ್ತು ಈ ಎರಡೂ ಫೋನ್‌ಗಳ ಕುರಿತು ಕಂಪೆನಿಯು ಸಹ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಇದೀಗ ಈ ಫೋನ್‌ಗಳ ಬಿಡುಗಡೆಗೂ ಮೊದಲೇ ಜನಪ್ರಿಯ ಟಿಪ್‌ಸ್ಟಾರ್ ಓರ್ವರು ಬೇಸ್ Vivo X300 ಫೋನಿನ ಬೆಲೆ ಮಾಹಿತಿಯನ್ನು ಲೀಕ್ ಮಾಡಿದ್ದಾರೆ.!

ಹೌದು, ಜನಪ್ರಿಯ ಟಿಪ್‌ಸ್ಟರ್ ಸಂಜು ಚೌಧರಿ (@saaaanjjjuuu) X (ಹಿಂದೆ ಟ್ವಿಟರ್) ಅವರು ತಮ್ಮ ಪೋಸ್ಟ್‌ನಲ್ಲಿ ಮೂಲ ಮಾದರಿಯ ಉದ್ದೇಶಿತ ಬೆಲೆಯನ್ನು ಬಹಿರಂಗಪಡಿಸಿದ್ದಾರೆ. Vivo X300 ಫೋನಿನ MRP ಬೆಲೆ 16GB RAM ಮತ್ತು 512GB ಸ್ಟೋರೇಜ್ ಮಾದರಿಗೆ 89,999 ಆಗಿರುತ್ತದೆ ಎಂದು ಹೇಳಿದ್ದಾರೆ. ಆದರೆ, ಇದು ಮಾರಾಟದ ಮೇಳೆ 80,999 ಕ್ಕೆ ಲಭ್ಯವಿರಬಹುದು. ಹಾಗೆಯೇ, ಇದಕ್ಕಿಂತಲೂ ಕಡಿಮೆ 12 GB RAM ಮತ್ತು 256GB ಸ್ಟೋರೇಜ್ ಮಾದರಿಯ ಫೋನ್ ಕೇವಲ 74,999 ರೂ.ಗೆ ಲಭ್ಯವಾಗಬಹುದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ,

Vivo X300 ಸರಣಿ ಜೊತೆಗೆ ಬರುತ್ತಿರುವ ಟೆಲಿಕನ್ವರ್ಟರ್ ಕಿಟ್ ಅಥವಾ ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್‌ನ ಬೆಲೆ ರೂ. 20,999 ಎಂದು ಪೋಸ್ಟ್ ಮಾಡಿದ್ದಾರೆ. ಈ ಎಲ್ಲಾ ಸಾಧನಗಳ ಬೆಲೆಯು ಈ ಹಿಂದೆ ಲೀಕ್ ಆಗಿದ್ದ(ಅಂದಾಜು 1 ಲಕ್ಷ ಎಂದು ಸೂಚಿಸಿದ್ದವು) ಬೆಲೆಗಳಿಂತಲೂ ಸಾಕಷ್ಟು ಕಡಿಮೆ ಇರುವುದು ಆಶ್ಚರ್ಯವಾಗಿದೆ.! ಈಗಾಗಲೇ ನಾವು ತಿಳಿದಿರುವಂತೆ, Vivo X300 ಸರಣಿಯು ಇದೇ ಡಿಸೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಪರಿಚಯಗೊಳ್ಳಲಿದೆ ಮತ್ತು Amazon ಮತ್ತು Flipkart ಎರಡರಲ್ಲೂ ಮಾರಾಟಕ್ಕೆ ಬರಲಿದೆ. ಈ ಕುರಿತ ಮತ್ತಷ್ಟು ಮಾಹಿತಿ ಮುಂದಿದೆ.

Vivo X300 ಸರಣಿ: ಬಿಡುಗಡೆ ದಿನಾಂಕ ಮತ್ತು ಲಭ್ಯತೆ
ಭಾರತದಲ್ಲಿ Vivo X300 ಸರಣಿಯು ಇದೇ ಡಿಸೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಪರಿಚಯಗೊಳ್ಳಲಿದೆ ಮತ್ತು Amazon ಮತ್ತು Flipkart ಎರಡರಲ್ಲೂ ಮಾರಾಟಕ್ಕೆ ಬರಲಿದೆ. Vivo ಕಂಪನಿಯು ಈ ಬಿಡುಗಡೆಯನ್ನು ಲೈವ್ ಈವೆಂಟ್ ಆಗಿರುತ್ತದೆಯೇ ಅಥವಾ ಸಾಫ್ಟ್ ಲಾಂಚ್ ಆಗಿರುತ್ತದೆಯೇ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಲೈವ್ ಈವೆಂಟ್ ಅನ್ನು Vivo ತನ್ನ ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪ್ರಸಾರ ಮಾಡುವ ಸಾಧ್ಯತೆ ಇದೆ.ವಿಶೇಷ ಏನೆಂದರೆ, ಭಾರತೀಯ ಗ್ರಾಹಕರಿಗಾಗಿ India-exclusive Red Edition ಅನ್ನು ಕೂಡಾ ಕಂಪನಿ ತರುತ್ತಿದೆ.

ಭಾರತದಲ್ಲಿ Vivo X300 ಬೆಲೆ ಎಷ್ಟು?..ಸಂಜು ಚೌಧರಿಯಿಂದ ಭರ್ಜರಿ ಸಿಹಿಸುದ್ದಿ!

Vivo X300 ಸರಣಿ: ಎಕ್ಸ್‌ಟೆಂಡರ್ ಕಿಟ್‌ ಟೀಸರ್
Vivo ಕಂಪನಿಯು X300 ಸರಣಿಗಾಗಿ ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್‌ನ ಆಗಮನವನ್ನು ಟೀಸರ್ ಮಾಡಿದೆ. ಇದು Zeiss 2.35x ಟೆಲಿಕನ್ವರ್ಟರ್ ಲೆನ್ಸ್‌ಗಳನ್ನು ಒಳಗೊಂಡಿದೆ, ಇದು ದೂರದ ವಸ್ತುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಕ್ಯಾಪ್ಚರ್ ಮಾಡಲು ಸಹಾಯ ಮಾಡಲು ವಿಸ್ತೃತ ಆಪ್ಟಿಕಲ್ ಜೂಮ್ ಅನ್ನು ಸಕ್ರಿಯಗೊಳಿಸುತ್ತದೆ. ಕಿಟ್ ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿರುವ ಮೀಸಲಾದ ಟೆಲಿಕನ್ವರ್ಟರ್ ಮೋಡ್‌ನೊಂದಿಗೆ ಹೊಂದಿಕೊಳ್ಳುತ್ತದೆ, ಇದು NFC ಸಪೋರ್ಟ್ ಇರುವುದರಿಂದ ಫೋನ್‌ಗೆ ಲೆನ್ಸ್ ಅನ್ನು ಜೋಡಿಸಿದ ಕ್ಷಣದಲ್ಲೇ ಅದನ್ನು ಗುರುತುಸಿ ಸ್ವಯಂ ಚಾಲಿತವಾಗಿ ಟೆಲಿಫೋಟೋ ಮೋಡ್ ಸಕ್ರಿಯಗೊಳ್ಳುತ್ತದೆ.

Vivo X300 ಸರಣಿ: ಇಲ್ಲಿಯವರೆಗೂ ನಾವು ತಿಳಿದಿರುವುದು
ಭಾರತದಲ್ಲಿ Vivo X300 ಸರಣಿಯ ಎರಡೂ ಪೋನ್‌ಗಳು 3nm MediaTek Dimensity 9500 ಚಿಪ್‌ಸೆಟ್‌ನಿಂದ ಚಾಲಿತವಾಗಲಿವೆ. ಈ ಫೋನ್‌ಗಳಲ್ಲಿ Pro Imaging VS1 ಮತ್ತು V3+ ಎಂಬ ಇಮೇಜಿಂಗ್ ಚಿಪ್‌ಗಳನ್ನು ಸೇರಿಸಲಾಗಿದ್ದು, ಇದರಿಂದ ಫೋಟೋಗ್ರಫಿ, ವೀಡಿಯೊ ಮತ್ತು ನೈಟ್ ಮೋಡ್ ಕಾರ್ಯಕ್ಷಮತೆ ಗಣನೀಯವಾಗಿ ಹೆಚ್ಚುವ ನಿರೀಕ್ಷೆಯಿದೆ. ಇನ್ನು ಈ ಎರಡೂ ಫೋನ್‌ಗಳು Android 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸಲಿವೆ.

ಕ್ಯಾಮೆರಾ ವಿಭಾಗದಲ್ಲಿ, Vivo X300 Pro Zeiss-ಟ್ಯೂನ್ ಮಾಡಿದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಸಜ್ಜುಗೊಂಡಿದೆ ಎಂದು ದೃಢಪಡಿಸಲಾಗಿದೆ. ಇದು 50-ಮೆಗಾಪಿಕ್ಸೆಲ್ (f/1.57) ಸೋನಿ LYT-828 ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ (f/2.0) Samsung JN1 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 200-ಮೆಗಾಪಿಕ್ಸೆಲ್ (f/2.67) HPB APO ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ (f/2.0) Samsung JN1 ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎಂದು ಟೀಸ್ ಮಾಡಲಾಗಿದೆ.

ಇತ್ತ ಸ್ಟ್ಯಾಂಡರ್ಡ್ Vivo X300 ಮಾದರಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 200-ಮೆಗಾಪಿಕ್ಸೆಲ್ (f/1.68) HPB ಮುಖ್ಯ ಕ್ಯಾಮೆರಾ, OIS ಹೊಂದಿರುವ 50-ಮೆಗಾಪಿಕ್ಸೆಲ್ (f/2.57) Sony LYT-602 ಟೆಲಿಫೋಟೋ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ (f/2.0) Samsung JN1 ಅಲ್ಟ್ರಾವೈಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಕೂಡ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ (f/2.0) Samsung JN1 ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿರಲಿದೆ.

ಈ ಬಾರಿ Vivo ತನ್ನ X300 ಸರಣಿಯೊಂದಿಗೆ ಭಾರತದಲ್ಲಿ ಪ್ರೀಮಿಯಂ ಕ್ಯಾಮೆರಾ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯು ನಿರೀಕ್ಷೆಯಿದೆ. ಡಿಸೆಂಬರ್ 2 ರಂದು ಬೆಲೆ ಮತ್ತು ಇತರ ವೈಶಿಷ್ಟ್ಯಗಳು ಬಹಿರಂಗವಾಗಲಿದ್ದು, ದೇಶದ ಫ್ಲಾಗ್‌ಷಿಪ್ ಫೋನ್ ವಿಭಾಗದಲ್ಲಿ ದೊಡ್ಡ ಸ್ಪರ್ಧೆಯು ಎದುರಾಗಬಹುದು.!

Best Mobiles in India

English summary
Popular tipster Sanju Chaudhary (@saaaanjjjuuu) X (formerly Twitter) has revealed the target price of the base model in his post. He said that the MRP price of the Vivo X300 phone will be 89,999 for the 16GB RAM and 512GB storage model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+