Home
ಮೊಬೈಲ್

ಭಾರತಕ್ಕೆ Vivo X300 ಮತ್ತು X300 Pro ಫೋನ್‌ಗಳು ಎಂಟ್ರಿ: ಬೆಲೆ, ಫೀಚರ್ಸ್ ನೋಡಿ!

ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ಹೊಸ Vivo X300 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಸರಣಿಯು ಇಂದು (2, ಡಿಸೆಂಬರ್) ಭರ್ಜರಿಯಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ, ಈ ಸರಣಿಯಲ್ಲಿ Vivo X300 ಮತ್ತು X300 Pro ಎಂಬ ಎರಡೂ ಫೋನ್‌ಗಳು ಪರಿಚಯಗೊಂಡಿದ್ದು, ಈ ಎರಡೂ ಫೋನ್‌ಗಳು Zeiss ಪ್ರಮಾಣೀಕೃತ ಕ್ಯಾಮೆರಾ ವ್ಯವಸ್ಥೆ, Android 16 ಆಧಾರಿತ OriginOS 6 ಮತ್ತು ಶಕ್ತಿಶಾಲಿ 3nm MediaTek Dimensity 9500 ಪ್ರೊಸೆಸರ್‌ನಂತಹ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Vivo X300 ಸರಣಿ: ಬೆಲೆ ಮತ್ತು ಲಭ್ಯತೆ
Vivo X300 ಮಾದರಿಯ ಬೆಲೆ ದೇಶದಲ್ಲಿ ₹75,999 ರಿಂದ ಆರಂಭವಾಗುತ್ತದೆ.( ಜೊತೆಗೆ ಲಾಂಚ್ ಆಫರ್‌ಗಳು ಇವೆ)
12GB + 256GB : ₹75,999
12GB + 512GB : ₹81,999
16GB + 512GB : ₹85,999
ಈ ಬೇಸ್ Vivo X300 ಮಾದರಿಯು Summit Red, Mist Blue ಮತ್ತು Phantom Black ಬಣ್ಣಗಳಲ್ಲಿ ಪರಿಚಯಗೊಂಡಿದೆ.

ಇತ್ತ Vivo X300 Pro ಏಕೈಕ 16GB RAM + 512GB ಸ್ಟೋರೇಜ್ ಮಾದರಿಯ ಬೆಲೆ ₹1,09,999 ರೂ.ಗಳಾಗಿವೆ.
ಈ ಮಾದರಿಯು Dune Gold ಮತ್ತು Elite Black ಎರಡು ಬಣ್ಣಗಳಲ್ಲಿ ಪರಿಚಯಗೊಂಡಿದೆ.

ಕಂಪನಿಯು Vivo X300 ಸರಣಿಗಾಗಿ ವಿಶೇಷ Telephoto Extender Kit ಅನ್ನು ₹18,999 ಕ್ಕೆ ಪರಿಚಯಿಸಿದೆ.

ಈ ಎರಡೂ ಫೋನ್‌ಗಳ ಪ್ರೀ-ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಮಾರಾಟವು ಡಿಸೆಂಬರ್ 10 ರಿಂದ ಆರಂಭವಾಗಲಿದೆ.

ಭಾರತಕ್ಕೆ Vivo X300 ಮತ್ತು X300 Pro ಫೋನ್‌ಗಳು ಎಂಟ್ರಿ: ಬೆಲೆ, ಫೀಚರ್ಸ್ ನೋಡಿ!

Vivo X300 ಸರಣಿ: ಗ್ರಾಹಕರಿಗಾಗಿ ಲಾಂಚ್ ಆಫರ್‌ಗಳು
Vivo X300 ಸರಣಿಗಾಗಿ ಹಲವು ಆಕರ್ಷಕ ಆಫರ್‌ಗಳನ್ನೂ ಘೋಷಿಸಿದೆ. HDFC, YES Bank ಸೇರಿದಂತೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಗ್ರಾಹಕರು ಈ ಫೋನ್‌ಗಳ ಮೇಲೆ 10% ತಕ್ಷಣದ ಕ್ಯಾಶ್‌ಬ್ಯಾಕ್ ಲಭ್ಯದೆ. ಇದರ ಜೊತೆಗೆ 1 ವರ್ಷದ ಹೆಚ್ಚುವರಿ ವಾರಂಟಿ, Google Gemini ಹೊಂದಿರುವ Jio Pro ಪ್ಲಾನ್ 18 ತಿಂಗಳು ಉಚಿತ, V-Shield ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಮೇಲೆ 70% ರಿಯಾಯಿತಿ ಮತ್ತು ಫೋನ್‌ ಖರೀದಿಯ ಜೊತೆಗೆ ಕೇವಲ ₹1,499 ಕ್ಕೆ Vivo TWS 3e ಇಯರ್‌ಬಡ್ಸ್ ಲಭ್ಯವಾಗುವ ಕೊಡುಗೆಗಳನ್ನು ಒದಗಿಸಲಾಗಿದೆ.

Vivo X300 ಸರಣಿ: ಪ್ರಮುಖ ಫೀಚರ್ಸ್ ಮತ್ತು ವೈಶಿಷ್ಟ್ಯಗಳು.
ಸ್ಟಾಂಡರ್ಡ್ Vivo X300 ಮಾದರಿಯು 120Hz ರಿಫ್ರೆಶ್ ರೇಟ್‌ನೊಂದಿಗೆ 6.31-ಇಂಚಿನ LTPO AMOLED ಡಿಸ್ಪ್ಲೇಯನ್ನು ಹೊಂದಿದೆ. ಇತ್ತ ಹೈ-ಎಂಡ್ Vivo X300 Pro ಮಾದರಿಯು ದೊಡ್ಡದಾದ 6.78-ಇಂಚಿನ 1.5K BOE Q10+ LTPO AMOLED ಸ್ಕ್ರೀನ್ ಅನ್ನು ಹೊಂದಿದೆ. ಈ ಎರಡೂ ಫೋನ್‌ಗಳು 16GB ವರೆಗೆ LPDDR5x Ultra RAM ಮತ್ತು 512GB ವರೆಗೆ UFS 4.1 ಆನ್‌ಬೋರ್ಡ್ ಮೆಮೊರಿಯೊಂದಿಗೆ ಬಂದಿವೆ.

ಕ್ಯಾಮೆರಾ ವಿಭಾಗದಲ್ಲಿ, Vivo X300 ನಲ್ಲಿ f/1.68 ಅಪರ್ಚರ್ ಮತ್ತು OIS ಹೊಂದಿರುವ 200MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಇದೆ.. ಮತ್ತೊಂದೆಡೆ, Vivo X300 Pro ಮಾದರಿಯು OIS ಹೊಂದಿರುವ 50MP ಸೋನಿ LYT-828 ಪ್ರಾಥಮಿಕ ಸಂವೇದಕ, 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 200MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ.

ಮುಂಭಾಗದಲ್ಲಿ, ಎರಡೂ ಫೋನ್‌ಗಳು 50MP ಸೆಲ್ಫಿ ಕ್ಯಾಮೆರಾ ಮತ್ತು ಪ್ರೊ ಇಮೇಜಿಂಗ್ VS1 ಮತ್ತು V3+ ಇಮೇಜಿಂಗ್ ಚಿಪ್‌ಗಳನ್ನು ಹೊಂದಿವೆ. ಬ್ಯಾಟರಿ ವಿಭಾಗದಲ್ಲಿ, Vivo X300 6,040mAh ಬ್ಯಾಟರಿ ಹೊಂದಿದ್ದರೆ, ; ಪ್ರೊ ಆವೃತ್ತಿಯು 6,510mAh ಬ್ಯಾಟರಿಯನ್ನು ಹೊಂದಿದೆ. ಎರಡೂ 90W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತವೆ. ಜೊತೆಗೆ ಧೂಳು ಮತ್ತು ನೀರಿನಿಂದ ರಕ್ಷಣೆಗೆ IP68 ಮತ್ತು IP69 ರೇಟಿಂಗ್ ಇವೆ.

Best Mobiles in India

English summary
The Vivo X300 flagship series made a grand debut today (December 2). As anticipated, the lineup features two models — the Vivo X300 and X300 Pro — equipped with a Zeiss-certified camera system, Android 16-based OriginOS 6, and the powerful 3nm MediaTek Dimensity 9500 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+