Home
ಮೊಬೈಲ್

ಭಾರತದಲ್ಲಿ ನಾಳೆ Vivo X300 ಸರಣಿ ಲಾಂಚ್: ಆರಂಭಿಕ ಬೆಲೆ, ಆಫರ್ಸ್ ಲೀಕ್!

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ Vivo X300 ಸರಣಿಯು ನಾಳೆ (ಡಿಸೆಂಬರ್ 2) ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಈ ಸರಣಿಯಲ್ಲಿ Vivo X300 ಮತ್ತು Vivo X300 Pro ಮಾದರಿಗಳನ್ನು ಪರಿಚಯಿಸಲಾಗುತ್ತಿದ್ದು, ಬಿಡುಗಡೆಗೂ ಮುನ್ನವೇ ಜನಪ್ರಿಯ ಟಿಪ್‌ಸ್ಟರ್ ಸಂಜು ಚೌಧರಿ (@saaaanjjjuuu) ಅವರು Vivo X300 ಬೇಸ್ ಮಾದರಿಯ ಬೆಲೆ ವಿವರಗಳನ್ನು ಮತ್ತೊಮ್ಮೆ ಲೀಕ್ ಮಾಡಿದ್ದಾರೆ. ಅವರ ಹೊಸ ಪೋಸ್ಟ್ ಪ್ರಕಾರ, ಭಾರತದಲ್ಲಿ Vivo X300 12GB RAM + 256GB ಸ್ಟೋರೇಜ್ ವೇರಿಯಂಟ್‌ನ ಬೆಲೆ ₹75,999 ರಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ. ಮತ್ತು ಲಾಂಚ್ ವೇಳೆ Vivo ಖರೀದಿದಾರರಿಗೆ ಹಲವು ಆಕರ್ಷಕ ಪ್ರಯೋಜನಗಳನ್ನು ನೀಡಲಿರುವ ಬಗ್ಗೆ ತಿಳಿಸಲಾಗಿದೆ.

ಹೌದು, ಭಾರತದಲ್ಲಿ Vivo X300 ಸರಣಿಯ ಬೆಲೆ ಪೋಸ್ಟ್ ಪ್ರಕಾರ, ಭಾರತದಲ್ಲಿ Vivo X300 ಬೆಲೆ ಮೂಲ 12GB/256GB ಮಾದರಿಗೆ ರೂ. 75,999 ರಿಂದ ಪ್ರಾರಂಭವಾಗುತ್ತದೆ. ಪೋಸ್ಟ್‌ನಲ್ಲಿ ಇತರ ರೂಪಾಂತರ ಅಥವಾ Vivo X300 Pro ಬೆಲೆಯನ್ನು ಉಲ್ಲೇಖಿಸಿಲ್ಲ. ಆದರೆ ಈ ಮಾಹಿತಿ ನಿಖರವಾಗಿದ್ದರೆ, ಇದು Vivo X300 ಸರಣಿಯನ್ನು OPPO Find X9 ಸರಣಿಯಂತೆಯೇ ಅದೇ ಶ್ರೇಣಿಯಲ್ಲಿ ಇರಿಸುತ್ತದೆ. ನಾವು ನೆನಪಿಸಿಕೊಳ್ಳುವುದಾದರೆ, ಇತ್ತೀಚಿಗಷ್ಟೇ ದೇಶದಲ್ಲಿ ಬಿಡುಗಡೆಯಾಗಿರುವ OPPO Find X9 ನ ಮೂಲ ಆವೃತ್ತಿಯ ಬೆಲೆ ರೂ. 74,999, ಆದರೆ ಟಾಪ್-ಎಂಡ್ ಮಾದರಿಯ ಬೆಲೆ ರೂ. 84,999 ಗೆ ಬಿಡುಗಡೆಯಾಗಿವೆ. ಅಂದರೆ 16GB RAM ಮತ್ತು 512GB ಸಂಗ್ರಹಣೆಯೊಂದಿಗೆ Vivo X300 ಬೆಲೆ ಸುಮಾರು 85,000 ಆಗಿರಬಹುದು ಎಂದು ಸೂಚಿಸುತ್ತಿದೆ.

ಸಂಜು ಚೌಧರಿ ಅವರು ಪ್ರಕಟಿಸಿರುವ ಪೋಸ್ಟ್‌ನಲ್ಲಿ, Vivo X300 ಸರಣಿಯು ಹಲವು ಆಕರ್ಷಕ ಪ್ರಯೋಜನಗಳನ್ನು ಹೊಂದಿರಲಿದೆ. ಇದರಲ್ಲಿ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಆನ್‌ಲೈನ್ ಖರೀದಿ ಮಾಡಿದ ಗ್ರಾಹಕರು 10% ತ್ವರಿತ ಕ್ಯಾಶ್‌ಬ್ಯಾಕ್, ಒಂದು ವರ್ಷದ ವಿಸ್ತೃತ ವಾರಂಟಿ, 70% ವರೆಗೆ ಸ್ಕ್ರೀನ್ ಪ್ರೊಟೆಕ್ಷನ್ ಯೋಜನೆ ರಿಯಾಯಿತಿ, 24 ತಿಂಗಳವರೆಗೆ No-Cost EMI ಮತ್ತು ಉಚಿತ Vivo TWS 3e ಇಯರ್‌ಬಡ್‌ಗಳನ್ನು ಪಡೆಯುತ್ತಾರೆ. ಆಫ್‌ಲೈನ್ ಖರೀದಿದಾರರಿಗೆ 10% ಕ್ಯಾಶ್‌ಬ್ಯಾಕ್ ಅಥವಾ ಬ್ಯಾಂಕ್ ಡಿಸ್ಕೌಂಟ್, TWS 3e ಮತ್ತು ಟೆಲಿಕನ್ವರ್ಟರ್ ಕಿಟ್ ಕೇವಲ ₹9,999 ಗೆ ಲಭ್ಯವಾಗುತ್ತದೆ. ₹9,999 ಮೌಲ್ಯದ Swiss Military ಟ್ರಾಲಿ ಬ್ಯಾಗ್ ಉಚಿತವಾಗಿ ಪಡೆಯುತ್ತಾರೆ ಎಂದು ಪೋಸ್ಟ್‌ನಲ್ಲಿ ಕಂಡುಬಂದಿದೆ. ಆದರೆ, ಇದು ಅಧಿಕೃತವಾಗಿ ಖಚಿತವಾಗಿಲ್ಲ.

ಭಾರತದಲ್ಲಿ ನಾಳೆ Vivo X300 ಸರಣಿ ಲಾಂಚ್: ಆರಂಭಿಕ ಬೆಲೆ, ಆಫರ್ಸ್ ಲೀಕ್!

ಇದಕ್ಕೂ ಮೊದಲು ಟೆಲಿಕನ್ವರ್ಟರ್ ಅಥವಾ ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್ ಬೆಲೆ ₹20,999 ಎಂದು ಲೀಕ್ ಆಗಿತ್ತು. ಆದರೆ, ಫೋನ್‌ಗಳ ಜೊತೆಗೆ TWS 3e ಮತ್ತು ಟೆಲಿಕನ್ವರ್ಟರ್ ಕಿಟ್ ಕೇವಲ ₹9,999 ಗೆ ಲಭ್ಯವಾಗುವ ಸಾಧ್ಯತೆಯು ಸಿಹಿಸುದ್ದಿಯಾಗಿದೆ. ಇನ್ನು ಈ ಹಿಂದಿನ ಹಲವು ಲೀಕ್‌ಗಳು, Vivo X300 ಸರಣಿಯು₹1 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಹೊಂದಿರುವುದನ್ನು ಸೂಚಿಸಿದ್ದವು. ಹೊಸ ಲೀಕ್‌ನಲ್ಲಿ ಬೆಲೆಯಲ್ಲಿ ಗಮನಾರ್ಹವಾಗಿ ಕಡಿಮೆ ಇರುವುದರಿಂದ Vivo ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. Vivo X300 ಸರಣಿ ಡಿಸೆಂಬರ್ 2ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಪರಿಚಯಗೊಳ್ಳಲಿದ್ದು, Amazon ಮತ್ತು Flipkart ಎರಡರಲ್ಲೂ ಮಾರಾಟಕ್ಕೆ ಬರಲಿದೆ.ಈ ಕುರಿತ ಮತ್ತಷ್ಟು ಮಾಹಿತಿ ಮುಂದಿದೆ.

Vivo X300 ಸರಣಿ: ಬಿಡುಗಡೆ ದಿನಾಂಕ ಮತ್ತು ಲಭ್ಯತೆ
ಭಾರತದಲ್ಲಿ Vivo X300 ಸರಣಿಯು ಇದೇ ಡಿಸೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಪರಿಚಯಗೊಳ್ಳಲಿದೆ ಮತ್ತು Amazon ಮತ್ತು Flipkart ಎರಡರಲ್ಲೂ ಮಾರಾಟಕ್ಕೆ ಬರಲಿದೆ. Vivo ಕಂಪನಿಯು ಈ ಬಿಡುಗಡೆಯನ್ನು ಲೈವ್ ಈವೆಂಟ್ ಆಗಿರುತ್ತದೆಯೇ ಅಥವಾ ಸಾಫ್ಟ್ ಲಾಂಚ್ ಆಗಿರುತ್ತದೆಯೇ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಲೈವ್ ಈವೆಂಟ್ ಅನ್ನು Vivo ತನ್ನ ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪ್ರಸಾರ ಮಾಡುವ ಸಾಧ್ಯತೆ ಇದೆ.ವಿಶೇಷ ಏನೆಂದರೆ, ಭಾರತೀಯ ಗ್ರಾಹಕರಿಗಾಗಿ India-exclusive Red Edition ಅನ್ನು ಕೂಡಾ ಕಂಪನಿ ತರುತ್ತಿದೆ.

Vivo X300 ಸರಣಿ: ಎಕ್ಸ್‌ಟೆಂಡರ್ ಕಿಟ್‌ ಟೀಸರ್
Vivo ಕಂಪನಿಯು X300 ಸರಣಿಗಾಗಿ ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್‌ನ ಆಗಮನವನ್ನು ಟೀಸರ್ ಮಾಡಿದೆ. ಇದು Zeiss 2.35x ಟೆಲಿಕನ್ವರ್ಟರ್ ಲೆನ್ಸ್‌ಗಳನ್ನು ಒಳಗೊಂಡಿದೆ, ಇದು ದೂರದ ವಸ್ತುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಕ್ಯಾಪ್ಚರ್ ಮಾಡಲು ಸಹಾಯ ಮಾಡಲು ವಿಸ್ತೃತ ಆಪ್ಟಿಕಲ್ ಜೂಮ್ ಅನ್ನು ಸಕ್ರಿಯಗೊಳಿಸುತ್ತದೆ. ಕಿಟ್ ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿರುವ ಮೀಸಲಾದ ಟೆಲಿಕನ್ವರ್ಟರ್ ಮೋಡ್‌ನೊಂದಿಗೆ ಹೊಂದಿಕೊಳ್ಳುತ್ತದೆ, ಇದು NFC ಸಪೋರ್ಟ್ ಇರುವುದರಿಂದ ಫೋನ್‌ಗೆ ಲೆನ್ಸ್ ಅನ್ನು ಜೋಡಿಸಿದ ಕ್ಷಣದಲ್ಲೇ ಅದನ್ನು ಗುರುತುಸಿ ಸ್ವಯಂ ಚಾಲಿತವಾಗಿ ಟೆಲಿಫೋಟೋ ಮೋಡ್ ಸಕ್ರಿಯಗೊಳ್ಳುತ್ತದೆ.

Vivo X300 ಸರಣಿ: ಇಲ್ಲಿಯವರೆಗೂ ನಾವು ತಿಳಿದಿರುವುದು
ಭಾರತದಲ್ಲಿ Vivo X300 ಸರಣಿಯ ಎರಡೂ ಪೋನ್‌ಗಳು 3nm MediaTek Dimensity 9500 ಚಿಪ್‌ಸೆಟ್‌ನಿಂದ ಚಾಲಿತವಾಗಲಿವೆ. ಈ ಫೋನ್‌ಗಳಲ್ಲಿ Pro Imaging VS1 ಮತ್ತು V3+ ಎಂಬ ಇಮೇಜಿಂಗ್ ಚಿಪ್‌ಗಳನ್ನು ಸೇರಿಸಲಾಗಿದ್ದು, ಇದರಿಂದ ಫೋಟೋಗ್ರಫಿ, ವೀಡಿಯೊ ಮತ್ತು ನೈಟ್ ಮೋಡ್ ಕಾರ್ಯಕ್ಷಮತೆ ಗಣನೀಯವಾಗಿ ಹೆಚ್ಚುವ ನಿರೀಕ್ಷೆಯಿದೆ. ಇನ್ನು ಈ ಎರಡೂ ಫೋನ್‌ಗಳು Android 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸಲಿವೆ.

ಕ್ಯಾಮೆರಾ ವಿಭಾಗದಲ್ಲಿ, Vivo X300 Pro Zeiss-ಟ್ಯೂನ್ ಮಾಡಿದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಸಜ್ಜುಗೊಂಡಿದೆ ಎಂದು ದೃಢಪಡಿಸಲಾಗಿದೆ. ಇದು 50-ಮೆಗಾಪಿಕ್ಸೆಲ್ (f/1.57) ಸೋನಿ LYT-828 ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ (f/2.0) Samsung JN1 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 200-ಮೆಗಾಪಿಕ್ಸೆಲ್ (f/2.67) HPB APO ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ (f/2.0) Samsung JN1 ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎಂದು ಟೀಸ್ ಮಾಡಲಾಗಿದೆ.

ಇತ್ತ ಸ್ಟ್ಯಾಂಡರ್ಡ್ Vivo X300 ಮಾದರಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 200-ಮೆಗಾಪಿಕ್ಸೆಲ್ (f/1.68) HPB ಮುಖ್ಯ ಕ್ಯಾಮೆರಾ, OIS ಹೊಂದಿರುವ 50-ಮೆಗಾಪಿಕ್ಸೆಲ್ (f/2.57) Sony LYT-602 ಟೆಲಿಫೋಟೋ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ (f/2.0) Samsung JN1 ಅಲ್ಟ್ರಾವೈಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಕೂಡ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ (f/2.0) Samsung JN1 ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿರಲಿದೆ.

ಈ ಬಾರಿ Vivo ತನ್ನ X300 ಸರಣಿಯೊಂದಿಗೆ ಭಾರತದಲ್ಲಿ ಪ್ರೀಮಿಯಂ ಕ್ಯಾಮೆರಾ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯು ನಿರೀಕ್ಷೆಯಿದೆ. ಡಿಸೆಂಬರ್ 2 ರಂದು ಬೆಲೆ ಮತ್ತು ಇತರ ವೈಶಿಷ್ಟ್ಯಗಳು ಬಹಿರಂಗವಾಗಲಿದ್ದು, ದೇಶದ ಫ್ಲಾಗ್‌ಷಿಪ್ ಫೋನ್ ವಿಭಾಗದಲ್ಲಿ ದೊಡ್ಡ ಸ್ಪರ್ಧೆಯು ಎದುರಾಗಬಹುದು.!

Best Mobiles in India

English summary
The Vivo X300 series will launch in India tomorrow at 12 PM. Tipster Sanju Chaudhary claims the Vivo X300 (12GB+256GB) model may start at ₹75,999. and, Launch Offers Tipped.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+