ಭಾರತಕ್ಕೆ Vivo X300 ಸರಣಿ ಆಗಮನ: ಅಧಿಕೃತ ದಿನಾಂಕ ಪ್ರಕಟ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ತನ್ನ ಮುಂದಿನ ಫ್ಲಾಗ್‌ಶಿಪ್ ಸರಣಿ Vivo X300 ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಕಂಪನಿಯು ಶನಿವಾರ ಅಧಿಕೃತವಾಗಿ ಈ ಘೋಷಣೆಯನ್ನು ಹೊರಡಿಸಿದ್ದು, ಬಹುನಿರೀಕ್ಷಿತ Vivo X300 ಸರಣಿಯಲ್ಲಿ ಸ್ಟಾಂಡರ್ಡ್ Vivo X300 ಮತ್ತು Vivo X300 Pro ಎರಡೂ ಫೋನ್‌ಗಳು ಬಿಡುಗಡೆಯಾಗುವುದು ಖಚಿತವಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಮೊದಲು ಬಿಡುಗಡೆಯಾದ ಈ ಫೋನ್‌ಗಳು ಈಗ ಜಾಗತಿಕ ಮಾರುಕಟ್ಟೆಗಳೊಂದಿಗೆ ಭಾರತಕ್ಕೂ ಬರಲು ಸಜ್ಜಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿಯು ಕಳಕಂಡಂತಿದೆ.
Vivo X300 ಸರಣಿ: ಬಿಡುಗಡೆ ದಿನಾಂಕ ಮತ್ತು ಲಭ್ಯತೆ
ಭಾರತದಲ್ಲಿ Vivo X300 ಸರಣಿಯು ಇದೇ ಡಿಸೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಪರಿಚಯಗೊಳ್ಳಲಿದೆ ಮತ್ತು Amazon ಮತ್ತು Flipkart ಎರಡರಲ್ಲೂ ಮಾರಾಟಕ್ಕೆ ಬರಲಿದೆ. Vivo ಕಂಪನಿಯು ಈ ಬಿಡುಗಡೆಯನ್ನು ಲೈವ್ ಈವೆಂಟ್ ಆಗಿರುತ್ತದೆಯೇ ಅಥವಾ ಸಾಫ್ಟ್ ಲಾಂಚ್ ಆಗಿರುತ್ತದೆಯೇ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಲೈವ್ ಈವೆಂಟ್ ಅನ್ನು Vivo ತನ್ನ ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪ್ರಸಾರ ಮಾಡುವ ಸಾಧ್ಯತೆ ಇದೆ.ವಿಶೇಷ ಏನೆಂದರೆ, ಭಾರತೀಯ ಗ್ರಾಹಕರಿಗಾಗಿ India-exclusive Red Edition ಅನ್ನು ಕೂಡಾ ಕಂಪನಿ ತರುತ್ತಿದೆ.
Vivo X300 ಸರಣಿ: ಎಕ್ಸ್‌ಟೆಂಡರ್ ಕಿಟ್ ಟೀಸರ್
Vivo ಕಂಪನಿಯು X300 ಸರಣಿಗಾಗಿ ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್‌ನ ಆಗಮನವನ್ನು ಸಹ ಟೀಸರ್ ಮಾಡಿದೆ. ಇದು Zeiss 2.35x ಟೆಲಿಕನ್ವರ್ಟರ್ ಲೆನ್ಸ್‌ಗಳನ್ನು ಒಳಗೊಂಡಿದೆ, ಇದು ದೂರದ ವಸ್ತುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಕ್ಯಾಪ್ಚರ್ ಮಾಡಲು ಸಹಾಯ ಮಾಡಲು ವಿಸ್ತೃತ ಆಪ್ಟಿಕಲ್ ಜೂಮ್ ಅನ್ನು ಸಕ್ರಿಯಗೊಳಿಸುತ್ತದೆ. ಕಿಟ್ ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿರುವ ಮೀಸಲಾದ ಟೆಲಿಕನ್ವರ್ಟರ್ ಮೋಡ್‌ನೊಂದಿಗೆ ಹೊಂದಿಕೊಳ್ಳುತ್ತದೆ, ಇದು NFC ಸಪೋರ್ಟ್ ಇರುವುದರಿಂದ ಫೋನ್‌ಗೆ ಲೆನ್ಸ್ ಅನ್ನು ಜೋಡಿಸಿದ ಕ್ಷಣದಲ್ಲೇ ಅದನ್ನು ಗುರುತುಸಿ ಸ್ವಯಂ ಚಾಲಿತವಾಗಿ ಟೆಲಿಫೋಟೋ ಮೋಡ್ ಸಕ್ರಿಯಗೊಳ್ಳುತ್ತದೆ.

Vivo X300 ಸರಣಿ: ಇಲ್ಲಿಯವರೆಗೂ ನಾವು ತಿಳಿದಿರುವುದು
ಭಾರತದಲ್ಲಿ, Vivo X300 ಸರಣಿಯ ಎರಡೂ ಪೋನ್‌ಗಳು 3nm MediaTek Dimensity 9500 ಚಿಪ್‌ಸೆಟ್‌ನಿಂದ ಚಾಲಿತವಾಗಲಿವೆ. ಈ ಫೋನ್‌ಗಳಲ್ಲಿ Pro Imaging VS1 ಮತ್ತು V3+ ಎಂಬ ಇಮೇಜಿಂಗ್ ಚಿಪ್‌ಗಳನ್ನು ಸೇರಿಸಲಾಗಿದ್ದು, ಇದರಿಂದ ಫೋಟೋಗ್ರಫಿ, ವೀಡಿಯೊ ಮತ್ತು ನೈಟ್ ಮೋಡ್ ಕಾರ್ಯಕ್ಷಮತೆ ಗಣನೀಯವಾಗಿ ಹೆಚ್ಚುವ ನಿರೀಕ್ಷೆಯಿದೆ. ಇನ್ನು ಈ ಎರಡೂ ಫೋನ್‌ಗಳು Android 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸಲಿವೆ.
ಕ್ಯಾಮೆರಾ ವಿಭಾಗದಲ್ಲಿ, Vivo X300 Pro Zeiss-ಟ್ಯೂನ್ ಮಾಡಿದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಸಜ್ಜುಗೊಂಡಿದೆ ಎಂದು ದೃಢಪಡಿಸಲಾಗಿದೆ. ಇದು 50-ಮೆಗಾಪಿಕ್ಸೆಲ್ (f/1.57) ಸೋನಿ LYT-828 ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ (f/2.0) Samsung JN1 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 200-ಮೆಗಾಪಿಕ್ಸೆಲ್ (f/2.67) HPB APO ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ (f/2.0) Samsung JN1 ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎಂದು ಟೀಸ್ ಮಾಡಲಾಗಿದೆ.
ಇತ್ತ ಸ್ಟ್ಯಾಂಡರ್ಡ್ Vivo X300 ಮಾದರಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 200-ಮೆಗಾಪಿಕ್ಸೆಲ್ (f/1.68) HPB ಮುಖ್ಯ ಕ್ಯಾಮೆರಾ, OIS ಹೊಂದಿರುವ 50-ಮೆಗಾಪಿಕ್ಸೆಲ್ (f/2.57) Sony LYT-602 ಟೆಲಿಫೋಟೋ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ (f/2.0) Samsung JN1 ಅಲ್ಟ್ರಾವೈಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಕೂಡ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ (f/2.0) Samsung JN1 ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿರಲಿದೆ.
ಈ ಬಾರಿ Vivo ತನ್ನ X300 ಸರಣಿಯೊಂದಿಗೆ ಭಾರತದಲ್ಲಿ ಪ್ರೀಮಿಯಂ ಕ್ಯಾಮೆರಾ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯು ನಿರೀಕ್ಷೆಯಿದೆ. ಡಿಸೆಂಬರ್ 2 ರಂದು ಬೆಲೆ ಮತ್ತು ಇತರ ವೈಶಿಷ್ಟ್ಯಗಳು ಬಹಿರಂಗವಾಗಲಿದ್ದು, ದೇಶದ ಫ್ಲಾಗ್‌ಷಿಪ್ ಫೋನ್ ವಿಭಾಗದಲ್ಲಿ ದೊಡ್ಡ ಸ್ಪರ್ಧೆಯು ಎದುರಾಗಬಹುದು.!


Click it and Unblock the Notifications








