Home
ಮೊಬೈಲ್

Vivo X300 vs OnePlus 15: ಯಾವ ಫ್ಲಾಗ್‌ಶಿಪ್ ಬೆಸ್ಟ್?..ಇಲ್ಲಿದೆ ಸರಳ ಹೋಲಿಕೆ!

ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆ ಮತ್ತೊಮ್ಮೆ ಗಮನಸೆಳೆದಿದೆ. Vivo ತನ್ನ ಹೊಸ Vivo X300 ಸರಣಿಯನ್ನು ಇತ್ತೀಚಿಗಷ್ಟೇ ದೇಶದಲ್ಲಿ ಬಿಡುಗಡೆ ಮಾಡುತ್ತಿದ್ದಂತೆಯೇ, ಇದು ನೇರವಾಗಿ OnePlus 15 ಜೊತೆ ಸ್ಪರ್ಧೆಯಲ್ಲಿದೆ. ಈ ಎರಡೂ ಮಾದರಿಗಳು ನವೀಕೃತ 3nm ಚಿಪ್‌ಸೆಟ್‌, ಪ್ರಬಲ ಕ್ಯಾಮೆರಾ ಸಾಮರ್ಥ್ಯ ಮತ್ತು ಹೈ-ಎಂಡ್ ಅನುಭವವನ್ನು ಬಯಸುವ ಬಳಕೆದಾರರನ್ನು ಗುರಿಯಾಗಿಸಿಕೊಂಡಿವೆ. ಹಾಗಾದರೆ, Vivo X300 ಮತ್ತು OnePlus 15 ಫೋನ್‌ಗಳಲ್ಲಿ ಉತ್ತಮ ಫ್ಲ್ಯಾಗ್‌ಶಿಪ್ ಆಯ್ಕೆ ಯಾವುದು? ಎಂಬುದನ್ನು ನೋಡೋಣ. ಇಲ್ಲಿ ಮುಖ್ಯ ಅಂಶಗಳನ್ನು ಸರಳವಾಗಿ ಹೋಲಿಸಲಾಗಿದೆ.

Vivo X300 vs OnePlus 15: ಭಾರತದಲ್ಲಿನ ಬೆಲೆ ಮತ್ತು ಲಭ್ಯತೆ
Vivo X300 ಬೆಲೆ ₹75,999 ರಿಂದ ಆರಂಭವಾಗುತ್ತದೆ, ಮತ್ತು ₹85,999 ವರೆಗೆ ಲಭ್ಯವಿದೆ. ದೇಶದಲ್ಲಿ ಈ ಫೋನ್ ಮಾರಾಟವು ಇದೇ ಡಿಸೆಂಬರ್ 10ರಿಂದ ಆರಂಭವಾಗುತ್ತದೆ.
OnePlus 15 ಸ್ವಲ್ಪ ಕಡಿಮೆ ಬೆಲೆಯಾಗಿ ₹72,999 ರಿಂದ ಪ್ರಾರಂಭವಾಗಿ, ₹79,999 ವರೆಗೆ ಲಭ್ಯ. OnePlus ಆನ್‌ಲೈನ್ ಸ್ಟೋರ್ ಹಾಗೂ Amazon ನಲ್ಲಿ ಖರೀದಿಸಬಹುದು.
ಈ ಎರಡೂ ಫೋನ್‌ಗಳ ಮೇಲೆ ಸಾಕಷ್ಟು ಬಿಡುಗಡೆ ಕೊಡುಗೆಗಳನ್ನು ಸಹ ಒದಗಿಸಲಾಗಿತ್ತು. ಆದರೆ, ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

ವಿನ್ಯಾಸ ಮತ್ತು ಡಿಸ್ಪ್ಲೇ: ಗಾತ್ರ vs ಅನುಕೂಲತೆ
Vivo X300 ಫೋನ್ OnePlus 15 ಗಿಂತಲೂ ಹೆಚ್ಚು ಕಾಂಪ್ಯಾಕ್ಟ್ ಆಗಿದೆ. ಇದು 6.31 ಇಂಚಿನ AMOLED ಸ್ಕ್ರೀನ್, 120Hz ರಿಫ್ರೆಶ್ ರೇಟ್ ಮತ್ತು HDR ಬೆಂಬಲದಿಂದ ದಿನನಿತ್ಯ ಬಳಕೆಯಲ್ಲಿ ಇದರ ಸ್ಕ್ರೀನ್ ತುಂಬಾ ಜೀವಂತವಾಗಿ ಕಾಣುತ್ತದೆ. ಸುಮಾರು 190 ಗ್ರಾಂ ತೂಕದಿಂದ ಇದು ಹಿಡಿದಿಡಲು ಸುಲಭವಾದ ಫೋನ್ ಆಗಿದೆ.

ಮತ್ತೊಂದೆಡೆ, OnePlus 15 ದೊಡ್ಡ 6.78 ಇಂಚಿನ QHD+ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಗರಿಷ್ಠ 165Hz ರಿಫ್ರೆಶ್ ದರ ಮತ್ತು 1Hz ವರೆಗೆ ವ್ಯತ್ಯಾಸಗೊಳ್ಳುವ ತಂತ್ರಜ್ಞಾನವು ಗೇಮಿಂಗ್ ಮತ್ತು ಮೀಡಿಯಾ ವೀಕ್ಷಣೆಗೆ ಇದನ್ನು ಉತ್ತಮ ಆಯ್ಕೆಯಾಗಿ ಮಾಡುತ್ತದೆ. ಆದರೆ 215 ಗ್ರಾಂ ತೂಕದಿಂದ ಇದು ಸ್ವಲ್ಪ ಭಾರವಾಗಿದೆ.

ಕಾರ್ಯಕ್ಷಮತೆ: MediaTek vs Qualcomm
Vivo X300 ನಲ್ಲಿ MediaTek Dimensity 9500 3nm ಚಿಪ್‌ಸೆಟ್ ಇದ್ದು, 16GB RAM ಮತ್ತು 512GB ಸ್ಟೋರೇಜ್ ಆಯ್ಕೆಗಳಿವೆ. ಇಮೇಜಿಂಗ್ ಕ್ಷೇತ್ರದಲ್ಲಿ Vivo ಯ VS1 ಮತ್ತು V3+ ಚಿಪ್‌ಗಳು ಕ್ಯಾಮೆರಾ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ. OriginOS 6 (Android 16) ನೊಂದಿಗೆ ಸ್ಮೂತ್ ಬಳಕೆದಾರ ಅನುಭವವನ್ನು ನೀಡುತ್ತದೆ.

OnePlus 15 Qualcomm Snapdragon 8 Elite Gen 5 ಚಿಪ್‌ಸೆಟ್ ಮತ್ತು Adreno 840 GPU ಬಳಸುತ್ತದೆ. ಗೇಮಿಂಗ್ ಅಥವಾ ಭಾರವಾದ ಟಾಸ್ಕ್‌ಗಳಲ್ಲಿ ಉಷ್ಣತೆಯನ್ನು ನಿಯಂತ್ರಿಸಲು 3D ವೇಪರ್ ಚೇಂಬರ್ ಮತ್ತು Cryo-Velocity ಕೂಲಿಂಗ್ ಸಿಸ್ಟಂ ಸೇರಿಸಲಾಗಿದೆ. OxygenOS 16 ಇದರ ಅನುಭವವನ್ನು ಮತ್ತಷ್ಟು ವೇಗಗೊಳಿಸುತ್ತದೆ.

Vivo X300 vs OnePlus 15: ಯಾವ ಫ್ಲಾಗ್‌ಶಿಪ್ ಬೆಸ್ಟ್?..ಇಲ್ಲಿದೆ ಸರಳ ಹೋಲಿಕೆ!

ಕ್ಯಾಮೆರಾ ವಿಭಾಗ: ಫೋಟೋ ಪ್ರಿಯರು vs ವಿಡಿಯೋ ಕ್ರಿಯೇಟರ್‌ಗಳು
Vivo X300 ಕ್ಯಾಮೆರಾ ಕಲಾಕೃತಿಯಂತಿದೆ.
200MP ಮುಖ್ಯ ಸೆನ್ಸರ್ (OIS)
50MP ಅಲ್ಟ್ರಾವೈಡ್
50MP ಟೆಲಿಫೋಟೋ (3x ಆಪ್ಟಿಕಲ್ ಜೂಮ್)
Zeiss ಸಹಕರಿಸಿದ ಟ್ಯೂನಿಂಗ್ ಮತ್ತು 50MP ಫ್ರಂಟ್ ಕ್ಯಾಮೆರಾ ಫೋಟೋಗ್ರಫಿ ಪ್ರಿಯರಿಗೆ ವೃತ್ತಿಪರ ಮಟ್ಟದ ಅನುಭವ ನೀಡುತ್ತದೆ.

OnePlus 15 ಹೆಚ್ಚು ವಿಡಿಯೋ ಸಾಮರ್ಥ್ಯಕ್ಕೆ ಒತ್ತು ನೀಡುತ್ತದೆ.
50MP Sony IMX906 ಮುಖ್ಯ ಕ್ಯಾಮೆರಾ
3.5x ಆಪ್ಟಿಕಲ್ ಜೂಮ್ ಟೆಲಿಫೋಟೋ
50MP ಅಲ್ಟ್ರಾವೈಡ್
8K 30fps ಮತ್ತು 4K 120fps ವಿಡಿಯೋ ಬೆಂಬಲ
ವಿಡಿಯೋಗಳನ್ನು ಹೆಚ್ಚಿನ ಫ್ರೇಮ್‌ರೇಟ್‌ನಲ್ಲಿ ಶೂಟ್ ಮಾಡಲು ಬಯಸುವವರಿಗೆ OnePlus 15 ಉತ್ತಮ.

ಬ್ಯಾಟರಿ ಮತ್ತು ಚಾರ್ಜಿಂಗ್: ದೀರ್ಘಾವಧಿ ಬಳಕೆ ಯಾರಿಗೆ?
Vivo X300 ನಲ್ಲಿ 6,040mAh ಬ್ಯಾಟರಿ ಇದೆ. ಇದು 90W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ದೈನಂದಿನ ಬಳಕೆಗೆ ಸಾಕಷ್ಟಾಗುತ್ತದೆ.
OnePlus 15 7,300mAh ಸಿಲಿಕಾನ್-ಕಾರ್ಬನ್ ಬ್ಯಾಟರಿ 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ನ್ನು ಬೆಂಬಲಿಸುತ್ತದೆ.
ಈ ವಿಭಾಗದಲ್ಲಿ ಸ್ಪಷ್ಟವಾದ ಮುನ್ನಡೆ. ಇದು ಸುಮಾರು 39 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುವ ಸಾಮರ್ಥ್ಯ ಇದಕ್ಕೆ ಮತ್ತೊಂದು ದೊಡ್ಡ ಪ್ಲಸ್.

ಕನೆಕ್ಟಿವಿಟಿ ಮತ್ತು ಬಲಿಷ್ಠತೆ
ಎರಡೂ ಫೋನ್‌ಗಳು 5G, Wi-Fi, Bluetooth 6, NFC ಮತ್ತು GPS ಹೊಂದಿವೆ.
Vivo X300: ಧೂಳು ಮತ್ತು ನೀರಿನಿಂದ ರಕ್ಷಣೆಗೆ IP68 + IP69 ರೇಟಿಂಗ್
OnePlus 15: ಧೂಳು ಮತ್ತು ನೀರಿನಿಂದ ರಕ್ಷಣೆಗೆ IP66 + IP68 + IP69 + IP69Kರೇಟಿಂಗ್
OnePlus 15 ಹೆಚ್ಚು ಕಠಿಣ ಪರಿಸ್ಥಿತಿಗಳಿಗೆ ತಾಳುವಂತೆ ನಿರ್ಮಿಸಲಾಗಿದೆ.

ಅಂತಿಮ ತೀರ್ಮಾನ: ನಿಮ್ಮ ಬಳಕೆ ಶೈಲಿ ಮುಖ್ಯವಾಗುತ್ತದೆ.
ನಿಮಗೆ ಫೋಟೋಗ್ರಫಿ ಮತ್ತು ಕಾಂಪ್ಯಾಕ್ಟ್ ವಿನ್ಯಾಸ ಮುಖ್ಯವಾಗಿದ್ದರೆ: Vivo X300 ನಿಮ್ಮ ಮೊದಲ ಆಯ್ಕೆಯಾಗಬಹುದು.
ಗೇಮಿಂಗ್, ದೊಡ್ಡ ಡಿಸ್ಪ್ಲೇ, ಉತ್ತಮ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್ ಮುಖ್ಯವಾದರೆ: OnePlus 15 ಸ್ಪಷ್ಟ ಆಯ್ಕೆ.

ಈ ಎರಡೂ ಸ್ಮಾರ್ಟ್‌ಫೋನ್‌ಗಳು ತಮ್ಮದೇ ಆದ ಕ್ಷೇತ್ರದಲ್ಲಿ ಶ್ರೇಷ್ಠ. ನಿಮ್ಮ ಬಳಕೆ ಶೈಲಿ ಮತ್ತು ಬಜೆಟ್ ಆಧರಿಸಿ ಯಾವುದು 'ಪರಫೆಕ್ಟ್ ಫಿಟ್' ಆಗುತ್ತದೆ ಎಂಬುದನ್ನು ಆರಿಸಿಕೊಳ್ಳಬಹುದು. ಇವುಗಳಲ್ಲಿ ನಿಮ್ಮ ಆಯ್ಕೆಯ ಫೋನ್ ಯಾವುದು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
As Vivo recently launched its new Vivo X300 series in the country, it is directly competing with the OnePlus 15. Both these models are aimed at users who want an updated 3nm chipset, powerful camera capabilities, and a high-end experience. So, which is the better flagship option between the Vivo X300 and the OnePlus 15 phones?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+