Home
ಮೊಬೈಲ್

ವಿಶ್ವದ ಮೊದಲ 10GB RAM ಮತ್ತು 512GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್!!

10GB RAM ಹಾಗೂ 512GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಈ ವರ್ಷ ವಿವೋ ಕಂಪೆನಿ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.!!

By Bhaskar N J

ಚೀನಾದ ಪ್ರಮುಖ ಮೊಬೈಲ್ ತಯಾರಿಕ ಕಂಪೆನಿ 'ವಿವೋ' ವಿಶ್ವ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಲು ಮುಂದಾಗಿದೆ.!! 10GB RAM ಹಾಗೂ 512GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಈ ವರ್ಷ ವಿವೋ ಕಂಪೆನಿ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.!!

ಚೀನಾದ ಪ್ರಮುಖ ಟೆಕ್‌ಸೈಟ್ "ವಿಬೋ" ಈ ಬಗ್ಗೆ ಮಾಹಿತಿ ನೀಡಿದ್ದು, 4K OLED ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 845 SoC ಹಾಗೂ 10GB RAM ಹಾಗೂ 512GB ಆಂತರಿಕ ಮೆಮೊರಿ ಹಾಗೂ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಆಯ್ಕೆ ಹೊಂದಿರುವ ವಿವೋ ಕಂಪೆನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ತನ್ನ ರಿಪೋರ್ಟ್‌ನಲ್ಲಿ ಹೇಳಿದೆ.!!

ವಿಶ್ವದ ಮೊದಲ 10GB RAM ಮತ್ತು 512GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್!!

ಇದೇ ಮೊದಲ ಬಾರಿಗೆ ವಿವೋ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಇಷ್ಟೆಲ್ಲಾ ಹೈ ಎಂಡ್ ಫೀಚರ್ಸ್‌ಗಳನ್ನು ಅಳವಡಿಸಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಹಾಗಾದರೆ, ಇಷ್ಟೆಲ್ಲಾ ಫೀಚರ್ ಹೊಂದಿರುವ ಆ ಸ್ಮಾರ್ಟ್‌ಫೋನ್ ಯಾವುದು?ಫೋನ್ ಬೆಲೆ ಎಷ್ಟು? ವಿಶ್ವ ಮೊಬೈಲ್ ಮಾರುಕಟ್ಟೆಗೆ ಶಾಕ್ ಆಗಿರುವುದೇಕೆ? ಎಂಬುದನ್ನು ಮುಂದೆ ತಿಳಿಯಿರಿ.!!

ವಿವೋ ಎಕ್ಟ್ ಪ್ಲೇ7 ಸ್ಮಾರ್ಟ್‌ಫೋನ್!!

ವಿವೋ ಎಕ್ಟ್ ಪ್ಲೇ7 ಸ್ಮಾರ್ಟ್‌ಫೋನ್!!

10GB RAM ಹಾಗೂ 512GB ಆಂತರಿಕ ಮೆಮೊರಿ ಮೂಲಕ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ವಿಶ್ವದ ಮೊದಲು ಸ್ಮಾರ್ಟ್‌ಫೋನ್ "ವಿವೋ ಎಕ್ಸ್ ಪ್ಲೇ7" ಆಗಿರಲಿದೆ.! 5G ವೇಗಕ್ಕೆ ಸರಿಸಾಟಿಯಾಗುವಂತಹ ಕಾರ್ಯನಿರ್ವಹಣೆ ಈ ಫೋನಿನಲ್ಲಿ ಸಿಗಲಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ.!!

ಮೊಬೈಲ್ ಮಾರುಕಟ್ಟೆಗೆ ಶಾಕ್!!

ಮೊಬೈಲ್ ಮಾರುಕಟ್ಟೆಗೆ ಶಾಕ್!!

ಕೇವಲ ಕ್ಯಾಮೆರಾಗೆ ಹೆಚ್ಚು ಒತ್ತು ನೀಡುತ್ತಿದ್ದ ವಿವೋ ಮೊಬೈಲ್ ಕಂಪೆನಿ ಇದೇ ಮೊದಲ ಬಾರಿ ಎಲ್ಲಾ ಹೈ ಎಂಡ್ ಫೀಚರ್ಸ್‌ಗಳನ್ನು ಅಳವಡಿಸಿರುವ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದವಾಗಿದೆ. ಒನ್‌ಪ್ಲಸ್ ಹಾಗೂ ಇತರ ದಿಗ್ಗಜ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬರುತ್ತಿರುವ ಈ ಫೋನ್ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿದೆ.!!

ಹೈ ಎಂಡ್ ಸ್ಮಾರ್ಟ್‌ಫೋನ್!!

ಹೈ ಎಂಡ್ ಸ್ಮಾರ್ಟ್‌ಫೋನ್!!

ವಿವೋ ಮೊಬೈಲ್ ಕಂಪೆನಿ ಬಿಡುಗಡೆ ಮಾಡಲಿರುವ "ವಿವೋ ಎಕ್ಸ್ ಪ್ಲೇ7" ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರಲಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಫೀಚರ್ಸ್‌ಗಳು ಕೂಡ ಹೈ ಎಂಡ್ ಫೀಚರ್ಸ್‌ಳಾಗಿದ್ದು, 92.9 ಪರ್ಸೆಂಟ್ ಸ್ಕ್ರೀನ್ ಇರುವ 4K OLED ಡಿಸ್‌ಪ್ಲೇ ಮತ್ತು ಸ್ನ್ಯಾಪ್‌ಡ್ರಾಗನ್ 845 SoC ಚಿಪ್‌ಸೆಟ್ ಎಲ್ಲವೂ ಸ್ಮಾರ್ಟ್‌ಫೋನ್‌ನಲ್ಲಿ ಇರಲಿವೆ.!!

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ಕ್ಯಾಮೆರಾ ಮಾಹಿತಿ ನೀಡಿಲ್ಲ.!!

ಕ್ಯಾಮೆರಾ ಮಾಹಿತಿ ನೀಡಿಲ್ಲ.!!

"ವಿವೋ ಎಕ್ಸ್ ಪ್ಲೇ7" ಸ್ಮಾರ್ಟ್‌ಫೋನಿನ RAM, ಡಿಸ್‌ಪ್ಲೇ ಮತ್ತು ಚಿಪ್‌ಸೆಟ್ ಮಾಹಿತಿ ಮಾಹಿತಿ ಹೊರಬಿದ್ದಿದ್ದರೂ ಸಹ ಈ ವರೆಗೂ ಈ ಫೋನಿನ ಕ್ಯಾಮೆರಾ ಮಾಹಿತಿ ಮಾತ್ರ ವರದಿಯಾಗಿಲ್ಲ.! ಆದರೆ, ನಾಲ್ಕು ಕ್ಯಾಮೆರಾ ಹೊಂದಿರುವ ಈ ಹೈ ಎಂಡ್ ಫೀಚರ್ಸ್ ಫೋನಿನಲ್ಲಿ ಅತ್ಯುತ್ತಮ ಕ್ಯಾಮೆರಾ ನೀಡುವುದರಲ್ಲಿ ಅನುಮಾನವಿಲ್ಲ.!!

ಬೆಲೆ ಎಷ್ಟು ಮತ್ತು ಬಿಡುಗಡೆ ಯಾವಾಗ?

ಬೆಲೆ ಎಷ್ಟು ಮತ್ತು ಬಿಡುಗಡೆ ಯಾವಾಗ?

ಇಷ್ಟೆಲ್ಲಾ ಹೈ ಎಂಡ್ ಫೀಚರ್ಸ್ ಹೊಂದಿರುವ ವಿವೋ ಎಕ್ಸ್ ಪ್ಲೇ7 ಫೋನ್ 500$ (31,800 ರೂ) ಬೆಲೆಯನ್ನು ಹೊಂದಿರಲಿದೆ ಎಂದು ವಿಬೋ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.!! ಅಂದರೆ ಒನ್‌ಪ್ಲಸ್ ಕಂಪೆನಿಗೆ ನೇರಾನೇರ ಸೆಡ್ಡು ಹೊಡೆಯಲು ಬರುತ್ತಿರುವ ಈ ಫೋನ್ ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆಯಂತೆ.!!

Best Mobiles in India

English summary
Vivo Xplay7 Said to Be First Smartphone to Sport 10GB of RAM. Leaks suggest it will be the first phone with RAM in double digits. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+