Vivo Y18t vs Tecno Pop 9 5G: ಇದಕ್ಕಿಂತ ಅದ್ಭುತ ಫೋನ್ಗಳಿಲ್ಲ.. ಕೇವಲ 9,499 ರೂ.! ಯಾವುದು ಬೆಸ್ಟ್?
Vivo Y18t vs Tecno Pop 9 5G: ವಿವೋ (Vivo) ಇತ್ತೀಚೆಗೆ ಹೊಸ ವಿವೋ Y18t ( Vivo Y18t) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಟೆಕ್ನೋ ಕಂಪನಿಯ ಟೆಕ್ನೋ ಪಾಪ್ 9 5G (Tecno Pop 9 5G) ಮೊಬೈಲ್‌ಗೆ ಭಾರೀ ಪೈಪೋಟಿ ನೀಡುತ್ತಿದೆ. ವಿಶೇಷವೆಂದರೆ, ಈ ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆ 10 ಸಾವಿರ ರೂ.ಗಿಂತ ಕಡಿಮೆ ಇದೆ. ಈ ಲೇಖನದಲ್ಲಿ, ನೀವು ಯಾವ ಫೋನ್ ಖರೀದಿಸಬಹುದು ಮತ್ತು ಎರಡರಲ್ಲಿ ಯಾವುದು ಬೆಸ್ಟ್? ಎನ್ನುವುದನ್ನು ತಿಳಿಸಲಾಗಿದೆ.
ವಿವೋ Y18t ಫೋನಿನ 4GB RAM + 128GB ಸ್ಟೋರೇಜ್ ಬೆಲೆ ಕೇವಲ 9,499 ರೂ. ಆಗಿದೆ. ನೀವು, ಜೆಮ್ ಗ್ರೀನ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣದಲ್ಲಿ ಖರೀದಿಸಬಹುದು. ಟೆಕ್ನೋ ಪಾಪ್ 9 5G ಫೋನ್ 4GB RAM + 64GB ಮತ್ತು 4GB RAM + 128GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ನೀವು, 4GB RAM + 64GB ರೂಪಾಂತರವನ್ನು ಕೇವಲ 9,499 ರೂ.ಗೆ ಖರೀದಿಸಬಹುದು. ಈ ಫೋನ್ ಮಿಡ್‌ನೈಟ್ ಶಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್ ಬಣ್ಣದಲ್ಲಿ ಲಭ್ಯವಿದೆ.

ವಿವೋ Y18t vs ಟೆಕ್ನೋ ಪಾಪ್ 9 5G: ಹೇಗಿವೆ ಫೀಚರ್ಸ್?
ಡಿಸ್ಪ್ಲೇ ವಿವರ
ವಿವೋ Y18t ಮೊಬೈಲ್ 6.56 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 720x1612 ಪಿಕ್ಸೆಲ್ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 840 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಟೆಕ್ನೋ ಪಾಪ್ 9 5G ಮೊಬೈಲ್ 6.67 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು ಹೆಚ್‌ಡಿ ರೆಸಲ್ಯೂಶನ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ Y18t ಫೋನ್ ಯುನಿಸಾಕ್ T612 ಪ್ರೊಸೆಸರ್ ಹೊಂದಿದೆ. ಇದು 4GB RAM ಮತ್ತು 8GB ವಿಸ್ತೃತ RAM ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ ಸ್ಟೋರೇಜ್ ಹೆಚ್ಚಿಸಬಹುದು. ಟೆಕ್ನೋ ಪಾಪ್ 9 5G ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 14 ನೊಂದಿಗೆ ಕೆಲಸ ಮಾಡುತ್ತದೆ. ಫೋನಿನಲ್ಲಿ 4GB RAM ಮತ್ತು 128GB ಸ್ಟೋರೇಜ್ ಆಯ್ಕೆ ಲಭ್ಯವಿದೆ. 4GB RAM ಮತ್ತು 8GB ವಿಸ್ತೃತ RAM ಹೊಂದಿದೆ.

ಕ್ಯಾಮೆರಾ ಸೆಟಪ್
ವಿವೋ Y18t ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 0.08 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ ಮತ್ತು ರಿಂಗ್ ಎಲ್ಇಡಿ ಲೈಟ್‌ನೊಂದಿಗೆ ಬರುತ್ತದೆ. ಫೋನಿನಲ್ಲಿ IMX 582 ಎಐ (AI) ತಂತ್ರಜ್ಞಾನದೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ Y18t ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಟೆಕ್ನೋ ಪಾಪ್ 9 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು
ವಿವೋ Y18t ಮೊಬೈಲ್ ಸೈಟ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.2, ಎಫ್‌ಎಂ ರೇಡಿಯೋ, ಜಿಪಿಎಸ್, ವೈ-ಫೈ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಟೆಕ್ನೋ ಪಾಪ್ 9 5G ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಹೊಂದಿದೆ. ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಡ್ಯುಯಲ್ ಸಿಮ್ 5G, ವೈ-ಫೈ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








