Home
ಮೊಬೈಲ್

ಬರೀ 10,499 ಸಾಕು! ಭಾರತದಲ್ಲಿ Vivo Y19 5G ಬಿಡುಗಡೆ.. ಆಫರ್, ವಿಶೇಷತೆಗಳೇನು ಗೊತ್ತಾ?

ವಿವೋ ಮೇ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಉಡುಗೊರೆ ನೀಡಿದೆ. ಕಂಪನಿಯು ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೌದು, ಸದ್ದಿಲ್ಲದೆ ವಿವೋ Y19 5G ಮೊಬೈಲ್ (Vivo Y19 5G) ದೇಶೀಯ ಮಾರುಕಟ್ಟೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದೆ. ಈ ಫೋನ್ ಶಕ್ತಿಯುತ ಪ್ರೊಸೆಸರ್, ಫವರ್ ಫುಲ್ ಬ್ಯಾಟರಿ ಮತ್ತು ಎಐ ಕ್ಯಾಮೆರಾ ಸೇರಿದಂತೆ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ನೂತನ ವಿವೋ Y19 5G ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳು ಇಲ್ಲಿವೆ ನೋಡಿ.

ವಿವೋ Y19 5G ಮೊಬೈಲ್ ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಕಂಪನಿ ತಿಳಿಸಿದೆ. ಈ ಫೋನಿನ ವಿಶೇಷತೆಗಳೆಂದರೆ, ರೇನ್ಬೋ ಕ್ರಿಸ್ಟಲ್ ಟೆಕ್ಸ್ಚರ್ ಫಿನಿಶ್ ಮತ್ತು ಮೆಟಾಲಿಕ್ ಮ್ಯಾಟ್ ವಿನ್ಯಾಸವು ಇದಕ್ಕೆ ಪ್ರೀಮಿಯಂ ಲುಕ್ ನೀಡುತ್ತದೆ. ಈ ಫೋನ್‌ 8.19 ಎಂಎಂ ದಪ್ಪ ಮತ್ತು 199 ಗ್ರಾಂ ತೂಕ ಹೊಂದಿದೆ. ಇದು ನಿಮ್ಮ ಕೈಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಫೋನಿನ ಬ್ಯಾಟರಿ ಗೇಮಿಂಗ್, ವಿಡಿಯೋ ಸ್ಟ್ರೀಮಿಂಗ್ ಮತ್ತು ಸೋಶಿಯಲ್ ಮೀಡಿಯಾ ಬಳಕೆಗಾಗಿ ದೀರ್ಘಕಾಲ ಬಾಳಿಕೆ ಬರುತ್ತದೆ.

ಬರೀ 10,499 ರೂ.! ಭಾರತದಲ್ಲಿ Vivo Y19 5G ಬಿಡುಗಡೆ.. ಆಫರ್, ವಿಶೇಷತೆಗಳೇನು?

ವಿವೋ Y19 5G ವೈಶಿಷ್ಟ್ಯಗಳು

ಡಿಸ್ಪೇ ವಿವರ

ವಿವೋ Y19 5G ಸ್ಮಾರ್ಟ್‌ಫೋನ್ 6.74 ಇಂಚಿನ ಎಚ್‌ಡಿ+ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು TÜV ರೈನ್‌ಲ್ಯಾಂಡ್ ಪ್ರಮಾಣೀಕರಣ ಹೊಂದಿದೆ.

ಪ್ರೊಸೆಸರ್‌ ಸಾಮರ್ಥ್ಯ

ವಿವೋ Y19 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್‌ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 4GB RAM ಮತ್ತು 6GB RAM ನೊಂದಿಗೆ ಬರುತ್ತದೆ. ಇದಕ್ಕೆ ಪೂರಕವಾಗಿದ 64GB ಸ್ಟೋರೇಜ್ ಮತ್ತು 128GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಕ್ಯಾಮೆರಾ ಸೆಟಪ್

ವಿವೋ Y19 5G ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಎಐ (AI) ಆಧಾರಿತ ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಮತ್ತು ಪ್ರೊ ಮೋಡ್ ಬೆಂಬಲಿಸುತ್ತದೆ. ಇದಲ್ಲದೆ, ಎಐ ಎರೇಸ್, ಎಐ ಫೋಟೋ ಎನ್‌ಹಾನ್ಸ್ ಮತ್ತು ಎಐ ಡಾಕ್ಯುಮೆಂಟ್‌ಗಳಂತಹ ಸ್ಮಾರ್ಟ್ ವೈಶಿಷ್ಟ್ಯಗಳು ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ Y19 5G ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸ್ಮಾರ್ಟ್ ಚಾರ್ಜಿಂಗ್ ಎಂಜಿನ್ 2.0 ತಂತ್ರಜ್ಞಾನವನ್ನು ಹೊಂದಿದೆ. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್‌ ಪಡೆದಿದೆ. ಈ ಫೋನ್ ಮಳೆ ಅಥವಾ ತುಂತುರು ಮಳೆಯಿಂದಲೂ ಸುರಕ್ಷಿತವಾಗಿರುತ್ತದೆ. ಇದು ಸ್ವಿಸ್ SGS ಫೈವ್ ಸ್ಟಾರ್ ಡ್ರಾಪ್ ರೆಸಿಸ್ಟೆನ್ಸ್ ಪ್ರಮಾಣೀಕರಣ ಹೊಂದಿದೆ.

ಬರೀ 10,499 ರೂ.! ಭಾರತದಲ್ಲಿ Vivo Y19 5G ಬಿಡುಗಡೆ.. ಆಫರ್, ವಿಶೇಷತೆಗಳೇನು?

ವಿವೋ Y19 5G ಬೆಲೆ

4GB RAM + 64GB ಸ್ಟೋರೇಜ್ = 10,499 ರೂ.
4GB RAM + 128GB ಸ್ಟೋರೇಜ್ = 11,499 ರೂ.
6GB RAM + 128GB ಸ್ಟೋರೇಜ್ = 12,999 ರೂ.

ವಿವೋ Y19 5G ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಬೆಲೆ 10,499 ರೂ. ಆಗಿದೆ. ಈ ಫೋನ್ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ. 6GB + 128GB ಮಾದರಿಯನ್ನು ಶೂನ್ಯ ಡೌನ್ ಪೇಮೆಂಟ್ ಮತ್ತು 3 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯದೊಂದಿಗೆ ಕೊಳ್ಳಬಹುದು. ಈ ಫೋನ್ ಟೈಟಾನಿಯಂ ಸಿಲ್ವರ್ ಮತ್ತು ಮೆಜೆಸ್ಟಿಕ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
Vivo Y19 5G with Dimensity 6300 SoC and 5500mAh battery Launched in India: Check Price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+