Home
ಮೊಬೈಲ್

ಕೇವಲ ₹10,999 ರೂ.ಗೆ ಹೊಸ Vivo 5G ಸ್ಮಾರ್ಟ್‌ಫೋನ್ ಬಿಡುಗಡೆ!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೊಂದು ಬಜೆಟ್ ಬೆಲೆಯ 5G ಸ್ಮಾರ್ಟ್‌ಫೋನ್ ಸದ್ದಿಲ್ಲದಂತೆ ಕಾಣಿಸಿಕೊಂಡಿದೆ. ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ತನ್ನ ಹೊಸ 'Vivo Y19s 5G' ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ ಫೋನ್ 6,000mAh ದೊಡ್ಡ ಬ್ಯಾಟರಿ, 90Hz ರಿಫ್ರೆಶ್ ರೇಟ್‌ ಡಿಸ್‌ಪ್ಲೇ ಮತ್ತು 6nm ತಂತ್ರಜ್ಞಾನದಲ್ಲಿನ MediaTek Dimensity 6300 ಚಿಪ್‌ ವೈಶಿಷ್ಟ್ಯಗಳೊಂದಿಗೆ ಕೇವಲ ₹10,999 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಗೊಂಡಿದೆ. ಹಾಗಾದರೆ, ಹೊಸ Vivo Y19s 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

'Vivo Y19s 5G : ಪ್ರಮುಖ ವೈಶಿಷ್ಟ್ಯಗಳು
ಹೊಸ Vivo Y19s 5G ಫೋನ್ ಡಿಸ್ಪ್ಲೇ‌ನಲ್ಲಿ ಟೀರ್ಡ್ರಾಪ್ ನಾಚ್ ವಿನ್ಯಾಸದಲ್ಲಿರುವ ಸೆಲ್ಫಿ ಕ್ಯಾಮೆರಾ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಸರಳ ವಿನ್ಯಾಸವನ್ನು ಹೊಂದಿದೆಯಾದರೂ ಸಹ ಬಜೆಟ್ ಸೆಗ್ಮೆಂಟ್‌ನಲ್ಲಿ ನೋಡಲು ಆಕರ್ಷಕವಾಗಿದೆ. ಡಿಸ್‌ಪ್ಲೇ ವಿಭಾಗದಲ್ಲಿ, ಇದು 6.74 ಇಂಚಿನ HD+ LCD ಡಿಸ್ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ಮತ್ತು 700 ನಿಟ್ಸ್ ಪೀಕ್ ಬ್ರೈಟ್‌ನೆಸ್ ಒದಗಿಸುತ್ತದೆ.

ಕಾರ್ಯಕ್ಷಮತೆಗಾಗಿ, ಈ ಫೋನ್ 6GB ವರೆಗೆ LPDDR4X RAM ಹಾಗೂ 128GB ವರೆಗೆ ಸ್ಟೋರೇಜ್ ಜೊತೆಗೆ ಸಂಯೋಜಿಸಲಾದ 6nm ತಂತ್ರಜ್ಞಾನದಲ್ಲಿ ನಿರ್ಮಿತವಾಗಿರುವ MediaTek Dimensity 6300 ಚಿಪ್‌ಸೆಟ್ ಹೊಂದಿದೆ.ಜೊತೆಗೆ, 2TB ವರೆಗೆ ಮೈಕ್ರೋSD ಕಾರ್ಡ್‌ ವಿಸ್ತರಣೆಯ ಆಯ್ಕೆಯೂ ಇದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ Android 15 ಆಧಾರಿತ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕೇವಲ ₹10,999 ರೂ.ಗೆ ಹೊಸ Vivo 5G ಸ್ಮಾರ್ಟ್‌ಫೋನ್ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ, ಮೊದಲೇ ಹೇಳಿದಂತೆ ಈ Vivo Y19s 5G ಪೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ 13MP ಪ್ರಾಥಮಿಕ ಸೆನ್ಸರ್ ಮತ್ತು 0.8MP ಸೇಕಂಡರಿ ಲೆನ್ಸ್ ಇವೆ. ಸೆಲ್ಫಿಗಳಿಗಾಗಿಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಗ್ರಾಹಕರಿಗೆ ಫೋಟೋ ಮೋಡ್‌ಗಳಲ್ಲಿ Night Mode, Portrait, Slo-mo, ಮತ್ತು Time-lapse ಮುಂತಾದ ವೈಶಿಷ್ಟ್ಯಗಳು ದೊರೆಯುತ್ತವೆ ಎಂದು ತಿಳಿಸಲಾಗಿದೆ.

ಈ ಫೋನ್‌ನ ಪ್ರಮುಖ ಹೈಲೈಟ್ ಎಂದರೆ ಬ್ಯಾಟರಿ ಸಾಮರ್ಥ್ಯ 6,000mAh ಬ್ಯಾಟರಿ ಹೊಂದಿರುವ ಈ ಫೋನ್ 15W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.ಸಂಪರ್ಕ ಆಯ್ಕೆಗಳಲ್ಲಿ 5G, Bluetooth 5.4, Dual-band Wi-Fi, USB Type-C, ಮತ್ತು GPS, GLONASS, Galileo ಮುಂತಾದ ವೈಶಿಷ್ಟ್ಯಗಳು ಸೇರಿವೆ.ಸುರಕ್ಷತೆಯ ದೃಷ್ಟಿಯಿಂದ side-mounted ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ರಕ್ಷಣೆಗೆ IP64 ಧೂಳು ಮತ್ತು ನೀರಿನ ಸಿಂಚನ ನಿರೋಧಕತೆ ಕೂಡ ಇದೆ.

Vivo Y19s 5G: ಬೆಲೆ ಎಷ್ಟು?

ದೇಶದಲ್ಲಿ Vivo Y19s 5G ಸ್ಮಾರ್ಟ್‌ಫೋನ್ ಬೆಲೆ 4GB/64GB ಮಾದರಿಗೆ 10,999 ರೂ.ಗಳಿಂದ ಆರಂಭವಾಗಿದೆ. ಮತ್ತು ಇದರ 4GB/128GB ಮಾದರಿಯು 11,999 ರೂ. ಮತ್ತು ಇದರ 6GB/128GB ಆವೃತ್ತಿಯ 13,499 ರೂ.ಬೆಲೆ ಹೊಂದಿದೆ. ಗ್ರಾಹಕರು Majestic Green ಮತ್ತು Titanium Silver ಎರಡು ಬಣ್ಣಗಳಲ್ಲಿ ಫೋನ್ ಅನ್ನು ಖರೀದಿಸಬಹುದು. ಪ್ರಸ್ತುತ ಅಧಿಕೃತ Vivo ವೆಬ್‌ಸೈಟ್‌ನಲ್ಲಷ್ಟೇ ಕಾಣಿಸಿಕೊಂಡಿರುವ ಈ ಪೋನ್ ಶಿಘ್ರದಲ್ಲೇ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಬರಲಿದೆ. ಒಟ್ಟಾರೆಯಾಗಿ, ದೊಡ್ಡ ಬ್ಯಾಟರಿ, ಆಧುನಿಕ ವಿನ್ಯಾಸ ಹಾಗೂ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ದೇಶದಲ್ಲಿ Vivo Y19s 5G ಒಂದು ಪರ್ಫೆಕ್ಟ್ ಬಜೆಟ್ 5G ಸ್ಮಾರ್ಟ್‌ಫೋನ್ ಆಗುವ ನಿರೀಕ್ಷೆ ಮೂಡಿಸಿದೆ. ಈ ಫೋನ್ ಬಳಕೆಯ ನಂತರ ಈ ಬಗ್ಗೆ ನಿರ್ಧರಿಸೊಣ. ಅಲ್ಲವೆ?

Best Mobiles in India

English summary
Vivo has officially launched its new 'Vivo Y19s 5G' model, which features a 6,000mAh large battery, 90Hz refresh rate display and MediaTek Dimensity 6300 chip on 6nm technology at a starting price of just ₹10,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+