ಕೇವಲ 9,800 ರೂ.! 5500mAh ಬ್ಯಾಟರಿ.. 50MP ಕ್ಯಾಮೆರಾ.. ಸದ್ದಿಲ್ಲದೆ ಹೊಸ Vivo Y19s ಫೋನ್ ಲಾಂಚ್
ವಿವೋ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಇದೆ. ಕೇವಲ 9,800 ರೂ.ಗೆ ಹೊಸ ಮೊಬೈಲ್ ಬಿಡುಗಡೆಯಾಗಿದೆ. ಹೌದು, ವಿವೋ (Vivo) ಕಂಪನಿಯು, ಸದ್ದಿಲ್ಲದೆ ವಿವೋ Y19s (Vivo Y19s) ಫೋನನ್ನು ಲೋಕಾರ್ಪಣೆಗೊಳಿಸಿದೆ. ಈ ಮೂಲಕ ತನ್ನ 'Y' ಸರಣಿಯನ್ನು ಮಾರುಕಟ್ಟೆಯಲ್ಲಿ ವಿಸ್ತರಿಸಿದೆ. ನೀವು, 10 ಸಾವಿರ ರೂ. ಗಿಂತ ಕಡಿಮೆ ಬೆಲೆಯಲ್ಲಿ ಹೊಸ ಫೋನ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಬನ್ನಿ, ಹೊಸ ವಿವೋ Y19s ಫೋನಿನ ವಿಶೇಷತೆಗಳನ್ನು ತಿಳಿಯೋಣ.
ನೂತನ ವಿವೋ Y19s ಫೋನ್ ಗ್ಲಾಸಿ ಬ್ಲ್ಯಾಕ್, ಪರ್ಲ್ ಸ್ಲಿವರ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದು ಯುನಿಸೊಕ್ T612 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಇದರಲ್ಲಿ 6GB RAM ಮತ್ತು 125GB ಸ್ಟೋರೇಜ್ ಲಭ್ಯವಿದೆ. ಇದರೊಂದಿಗೆ 6.68 ಇಂಚಿನ ದೊಡ್ಡ ಡಿಸ್ಪ್ಲೇ, 5500mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ವಿವೋ Y19s ಫೋನಿನ ಬೆಲೆ
ಕಂಪನಿಯು ವಿವೋ Y19S ಫೋನನ್ನು ಥೈಲ್ಯಾಂಡ್‌ನಲ್ಲಿ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಪೋನಿನ 4GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 9,800 ರೂ. (3999 THB) ಆಗಿದೆ. 4GB + 128GB ಸ್ಟೋರೇಜ್ ಆಯ್ಕೆಯನ್ನು 10,800 ರೂ.ಗೆ (4399 THB) ಬಿಡುಗಡೆ ಮಾಡಲಾಗಿದೆ. ಫೋನಿನ ಟಾಪ್ ವೇರಿಯಂಟ್ 6GB RAM + 128GB ಸ್ಟೋರೇಜ್ ಬೆಲೆ 12,280 ರೂ. (4999 THB) ಇದೆ.
ವಿವೋ Y19s ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ Y19s ಫೋನ್ 6.68 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 1608 × 720 ಪಿಕ್ಸೆಲ್ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಐ ಪ್ರೊಟೆಕ್ಷನ್ ಮೋಡ್ ವೈಶಿಷ್ಟ್ಯದೊಂದಿಗೆ ಎಲ್‌ಸಿಡಿ ಡಿಸ್ಪ್ಲೇ ಆಗಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ವಿವೋ Y19s ಅನ್ನು ಯುನಿಸೊಕ್ T612 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ 14 ನೊಂದಿಗೆ Funtouch OS 14 ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಹೊಸ ವಿವೋ ಸ್ಮಾರ್ಟ್‌ಫೋನ್ 4GB ಮತ್ತು 6GB RAM ನೊಂದಿಗೆ ಬಿಡುಗಡೆಯಾಗಿದೆ. ಇದು 6GB ವಿಸ್ತರಿಸಬಹುದಾದ RAM ತಂತ್ರಜ್ಞಾನವನ್ನು ಹೊಂದಿದೆ. ಇದು ವರ್ಚುವಲ್ RAM ಮತ್ತು ಭೌತಿಕ RAM ಒಟ್ಟಿಗೆ 12GB RAM (6GB + 6GB) ಶಕ್ತಿಯನ್ನು ನೀಡುತ್ತದೆ.

ಕ್ಯಾಮೆರಾ ಸೆಟಪ್
ವಿವೋ Y19s ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 0.08 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ನೂತನ ಫೋನಿನಲ್ಲಿ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ವಿವೋ Y19s ಮೊಬೈಲ್ ನೀರು ಮತ್ತು ಧೂಳು ನಿರೋಧಕ IP64 ರೇಟಿಂಗ್ ಪಡೆದಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 3.5 ಎಂಎಂ ಜ್ಯಾಕ್ ಹೊಂದಿದೆ. ಜೊತೆಗೆ, ಡ್ಯುಯಲ್ ಸ್ಪೀಕರ್‌ಗಳು ಮತ್ತು 300% ವಾಲ್ಯೂಮ್ ಬೂಸ್ಟ್ ವೈಶಿಷ್ಟ್ಯ ವನ್ನು ಲಭ್ಯವಿದೆ.


Click it and Unblock the Notifications







