ಕೇವಲ 12,885 ರೂ.! 6000mAh ಬ್ಯಾಟರಿ.. 50MP ಕ್ಯಾಮೆರಾ.. ಸದ್ದಿಲ್ಲದೆ ಹೊಸ Vivo ಫೋನ್ ಲಾಂಚ್
ವಿವೋ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಸದ್ದಿಲ್ಲದೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಹೌದು, ಕಂಪನಿಯು ತನ್ನ ವಿವೋ Y200+ (Vivo Y200+) ಫೋನನ್ನು ಅಧಿಕೃತವಾಗಿ ರಿಲೀಸ್ ಮಾಡಿದೆ. ಇದನ್ನು ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಮೊಬೈಲ್ ಸ್ಟೈಲಿಶ್ ಲುಕ್ ಮತ್ತು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. ಮೊಬೈಲ್ ಪ್ರಿಯರ ಗಮನ ಸೆಳೆಯುತ್ತಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ವಿವೋ Y200+ ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ 6.68 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 12GB RAM + 512GB ಸ್ಟೋರೇಜ್ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ವಿವೋ Y200+ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ Y200+ ಸ್ಮಾರ್ಟ್‌ಫೋನ್ 6.68 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 720 × 1608 ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ Y200+ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಮಲ್ಟಿ ಟಾಸ್ಕ್, ಕ್ಯಾಶುಯಲ್ ಗೇಮಿಂಗ್ ಮತ್ತು ದಿನನಿತ್ಯದ ಕಾರ್ಯಗಳಿಗೆ ಉತ್ತಮವಾಗಿದೆ. ಇದು Funtouch ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೊನ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ. ನೀವು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಹ ವಿಸ್ತರಿಸಬಹುದು.
ಕ್ಯಾಮೆರಾ ಸೆಟಪ್
ವಿವೋ Y200+ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ನೈಟ್ ಮೋಡ್‌ನ ಸಹಾಯದಿಂದ ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಫೋಟೋ ಕ್ಲಿಕ್ಕಿಸಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್, 5 ಮೆಗಾಪಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ Y200+ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕೇವಲ 36 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದಾಗಿದೆ.
ಇತರೆ ವೈಶಿಷ್ಟ್ಯಗಳು
ವಿವೋ Y200+ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, 4G, ವೈಫೈ, ಬ್ಲೂಟೂತ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಪೀಕರ್‌ಗಳು 300% ವರೆಗೆ ಅಲ್ಟ್ರಾ ಹೈ ವಾಲ್ಯೂಮ್ ಹೊಂದಿದೆ.
ವಿವೋ Y200+ ಬೆಲೆ ಮತ್ತು ಲಭ್ಯತೆ
ವಿವೋ Y200+ ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಮೂರು ಆಕರ್ಷಕ ಬಣ್ಣಗಳಲ್ಲಿ ಮಾರಾಟವಾಗಲಿದೆ. ನೀವು, ಏಪ್ರಿಕಾಟ್ ಸೀ, ಸ್ಕೈ ಸಿಟಿ ಮತ್ತು ಮಿಡ್ನೈಟ್ ಬ್ಲ್ಯಾಕ್ ಬಣ್ಣದಲ್ಲಿ ಖರೀದಿಸಬಹುದು. ಫೋನಿನ 8GB + 256GB ಸ್ಟೋರೇಜ್ ರೂಪಾಂತರವು 12,885 ರೂ.ಗೆ ಬಿಡುಗಡೆಯಾಗಿದೆ. 12GB + 256GB ಸ್ಟೊರೇಜ್ ಆಯ್ಕೆಯ ಬೆಲೆ 15,230 ರೂ. ಆಗಿದೆ. ಇನ್ನು 12GB + 512GB ಸ್ಟೋರೇಜ್ ವೇರಿಯಂಟ್ 17,575 ರೂ.ಗೆ ಬಿಡುಗಡೆಯಾಗಿದೆ. ಪ್ರಸ್ತುತ, ಈ ಮೊಬೈಲ್ ಚೀನಾದಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಈ ಫೋನನ್ನು ಶೀಘ್ರದಲ್ಲೇ ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿ ಬಿಡುಗಡೆ ಮಾಡಲಾಗುವುದು.


Click it and Unblock the Notifications








