ಲಗ್ಗೆ ಇಡಲಿದೆ ವಿವೋ Y200 5G ಫೋನ್..ಫುಲ್ ಜಬರ್ದಸ್ತ್ ಫೀಚರ್ಸ್!
ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ ಸಂಸ್ಥೆಯು ಈಗಾಗಲೇ ಹಲವು ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದೀಗ ವಿವೋ ಸಂಸ್ಥೆಯು ನೂತನವಾಗಿ ವಿವೋ Y200 5G (Vivo Y200 5G) ಫೋನ್ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಫೋನಿನ ಫೀಚರ್ಸ್ ಬಗ್ಗೆ ಹಾಗೂ ಫೋನಿನ ಬೆಲೆಯ ಬಗ್ಗೆ ಕೆಲವು ಮಾಹಿತಿಗಳು ಲೀಕ್ ಆಗಿದ್ದು, ಮೊಬೈಲ್ ಪ್ರಿಯರಲ್ಲಿ ಅಧಿಕ ಕುತೂಹಲ ಮೂಡಿಸಿದೆ.
ಹೌದು, ವಿವೋ ಸಂಸ್ಥೆಯು ಇದೀಗ Y ಸರಣಿಯಲ್ಲಿ ನೂತನವಾಗಿ ಮೊಬೈಲ್ ಅನ್ನು ಲಾಂಚ್ ಮಾಡಲು ತಯಾರಾಗಿದ್ದು, ಅದುವೇ ವಿವೋ Y200 5G ಆಗಿದೆ. ಅಂದಹಾಗೆ ಇದು ವಿವೋ Y100 ಫೋನಿನ ಮುಂದುವರಿದ ಭಾಗವಾಗಿದೆ. ಈ ಫೋನ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ವಿವೋ ಸಂಸ್ಥೆಯು ಎಕ್ಸ್ ಮೂಲಕ ತಿಳಿಸಿದೆ. ಇದರ ಬೆಲೆಯು ಮೀಡ್ ರೇಂಜ್‌ನಲ್ಲಿ ಇರುವ ಬಗ್ಗೆ ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಬರಲಿರುವ ನೂತನ ವಿವೋ Y200 ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದ್ದು, 64 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರಲಿದೆ. ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4 Gen 1 SoC ಪ್ರೊಸೆಸರ್ ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗಾದರೆ ಇನ್ನುಳಿದಂತೆ ವಿವೋ Y200 ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ವಿವೋ Y200 ಫೋನ್ ಡಿಸ್‌ಪ್ಲೇ
ಈ ಫೋನ್ 6.67 ಇಂಚಿನ AMOLED ಡಿಸ್ಪ್ಲೇ, ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಪಡೆದಿರಲಿದೆ. ಹಾಗೆಯೇ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4 Gen 1 SoC ಪ್ರೊಸೆಸರ್ ಪಡೆದಿರಲಿದ್ದು, ಜೊತೆಗೆ ಅಡ್ರಿನೊ 619 GPU ಸಪೋರ್ಟ್ ಪಡೆದಿರಲಿದೆ.
ಮೆಮೊರಿ ಆಯ್ಕೆಯ ಮಾಹಿತಿ
ಅಲ್ಲದೇ ವಿವೋ Y200 ಫೋನ್ 8GB RAM 128GB ಸ್ಟೋರೇಜ್ ವೇರಿಯಂಟ್ ಸಪೋರ್ಟ್ ಪಡೆದಿದ್ದು, ಇದರೊಂದಿಗೆ ಈ ಫೋನ್ 8GB ವರ್ಚುವಲ್ RAM ಕೂಡಾ ಬೆಂಬಲಿತವಾಗಿದೆ. ಇದರೊಂದಿಗೆ ಆಂಡ್ರಾಯ್ಡ್ 13 (Android 13) ಓಎಸ್ ಜೊತೆಗೆ Funtouch OS 13 ಸಪೋರ್ಟ್ ಸಹ ಇರಲಿದೆ ಎಂದು ಹೇಳಲಾಗ್ತಿದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ
ಈ ಫೋನ್ 64 ಮೆಗಾ ಪಿಕ್ಸಲ್ ಕ್ಯಾಮೆರಾ ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದ್ದು, 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ರಚನೆ ಪಡೆದಿರಲಿದೆ. ಹಾಗೆಯೇ 4800mAh ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಪಡೆದಿರಲಿದ್ದು, ಜೊತೆಗೆ 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ವಿವೋ Y100 ಫೋನಿನ ಫೀಚರ್ಸ್
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್ 13 (Android 13) ಓಎಸ್ ಜೊತೆಗೆ Funtouch OS 13 ಸಪೋರ್ಟ್ ಸಹ ಇದ್ದು, 8GB RAM ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ 6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಹಾಗೆಯೇ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯು 440 ಪಿಕ್ಸೆಲ್ ಆಗಿದೆ.
ವಿವೋ Y100 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, 64 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ 8 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ತೃತೀಯ ಲೆನ್ಸ್ ಅನ್ನು ಒಳಗೊಂಡಿದೆ.


Click it and Unblock the Notifications








