Home
ಮೊಬೈಲ್

ಕೇವಲ 12,999 ರೂ.! 256GB ಸ್ಟೋರೇಜ್.. 5500mAh ಬ್ಯಾಟರಿ.. ಬಿಡುಗಡೆಗೂ ಮೊದಲೇ Vivo Y29 5G ಬೆಲೆ ಲೀಕ್

ವಿವೋ ಶೀಘ್ರದಲ್ಲೇ ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲಿದೆ. ಇದು ಕಡಿಮೆ ಬಜೆಟ್‌ನ 5G ಫೋನ್ ಆಗಿರಲಿದೆ. ಹೌದು, ಕಂಪನಿಯು ವಿವೋ Y29 5G (Vivo Y29 5G) ಫೋನನ್ನು ಪರಿಚಯಿಸಲು ಸಿದ್ಧವಾಗಿದೆ. ಇದು ಕೆಲವೇ ದಿನಗಳಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬಿಡುಗಡೆಗೆ ಮುಂಚೆಯೇ, ವಿವೋ Y29 5G ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳು ಬಹಿರಂಗವಾಗಿವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿವೋ Y29 5G ಮೊಬೈಲ್ ನಾಲ್ಕು ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಇದು ಕೇವಲ 14 ಸಾವಿರ ರೂ. ಬಜೆಟ್‌ನಲ್ಲಿ ಖರೀದಿಗೆ ಲಭ್ಯವಿರಲಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.88 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ, 5500mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

Vivo Y29 5G ಬೆಲೆ ಲೀಕ್; 256GB ಸ್ಟೋರೇಜ್.. 5500mAh ಬ್ಯಾಟರಿ.. ಯಾವಾಗ ಲಾಂಚ್?

ವಿವೋ Y29 5G ಬೆಲೆ (ಸೋರಿಕೆ)

4GB RAM + 128GB ಸ್ಟೋರೇಜ್ = 13,999 ರೂ.
6GB RAM + 128GB ಸ್ಟೋರೇಜ್ = 15,499 ರೂ.
8GB RAM + 128GB ಸ್ಟೋರೇಜ್ = 16,999 ರೂ.
8GB RAM + 256GB ಸ್ಟೋರೇಜ್ = 18,999 ರೂ.

ವಿವೋ Y29 5G ಫೋನ್ ಮೂರು RAM ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ 4GB RAM ಮತ್ತು 6GB RAM ವೇರಿಯಂಟ್ 128GB ಸ್ಟೋರೇಜ್‌ ಹೊಂದಿರುತ್ತದೆ. ಇದರ ಬೆಲೆ ಕ್ರಮವಾಗಿ 13,999 ರೂ. ಮತ್ತು 15,499 ರೂ.ಗೆ ಲಭ್ಯವಿರಲಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ 1,000 ರೂ. ಕ್ಯಾಶ್‌ಬ್ಯಾಕ್ ಸಹ ಸಿಗುತ್ತದೆ. 8GB RAM ರೂಪಾಂತರವು 128GB ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಇದು 16,999 ರೂ. ಮತ್ತು 18,999 ರೂ. ಬೆಲೆ ಹೊಂದಿರುತ್ತದೆ. ನೀವು 1,500 ರೂ. ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು.

ವಿವೋ Y29 5G ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ವಿವೋ Y29 5G ಫೋನ್ 6.88 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಪಂಚ್ ಹೋಲ್ ಸ್ಟೈಲ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 90Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ Y29 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. Oppo A80 5G, Infinix Hot 50 5G, Tecno Spark 30 5G, Realme 13 5G ಮತ್ತು Samsung Galaxy A16 5G ಫೋನ್‌ಗಳು ಸಹ ಈ ಪ್ರೊಸೆಸರ್ ಹೊಂದಿವೆ.

ಕ್ಯಾಮೆರಾ ಸೆಟಪ್

ವಿವೋ Y29 5G ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಜೊತೆಗೆ ಎಐ (AI) ಲೆನ್ಸ್‌ನೊಂದಿಗೆ ದ್ವಿತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮುಂಬರುವ ವಿವೋ Y29 5G ಮೊಬೈಲ್ 5500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ವಿವೋ Y29 5G ಫೋನ್ ನೆಲದ ಮೇಲೆ ಬಿದ್ದರೂ ಹಾನಿಯಾಗುವುದಿಲ್ಲ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಯುಎಸ್‌ಬಿ ಟೈಪ್ ಸಿ, ಡ್ಯುಯಲ್ ಸಿಮ್ 5G, 4G VoLTE, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Vivo Y29 5G Price Leaked Ahead Of Launch: Check Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+