Home
ಮೊಬೈಲ್

ಕ್ರಿಸ್ಮಸ್ ಗಿಫ್ಟ್: ಸದ್ದಿಲ್ಲದೆ Vivo Y29 5G ಲಾಂಚ್.. ಕೇವಲ 12,999 ರೂ.! ವಿಶೇಷತೆಗಳೇನು?

ವಿವೋ ತನ್ನ ಗ್ರಾಹಕರಿಗೆ ಕ್ರಿಸ್ಮಸ್‌ ಉಡುಗೊರೆ ನೀಡಿದೆ. ಸದ್ದಿಲ್ಲದೆ ಹೊಸ 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೌದು, ಕಂಪನಿಯು ವಿವೋ Y29 5G (Vivo Y29 5G) ಅನ್ನು ಅಧೀಕೃತವಾಗಿ ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು 'Y' ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಕಂಪನಿಯ ವೆಬ್‌ಸೈಟ್‌ನಲ್ಲಿ ಇನ್ನೂ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ನೀವು, ಆಫ್‌ಲೈನ್‌ನಲ್ಲಿ ಮಾತ್ರ ಈ ಫೋನನ್ನು ಖರೀದಿಸಬಹುದು. ಬನ್ನಿ, ಈ ಹೊಸ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ Y29 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನಲ್ಲಿ 6.88 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 256GB ಸ್ಟೋರೇಜ್ ಮತ್ತು 44W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನ್ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಕಂಪನಿಯು 1,500 ರೂ. ಡಿಸ್ಕೌಂಟ್ ನೀಡುತ್ತಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಸದ್ದಿಲ್ಲದೆ Vivo Y29 5G ಲಾಂಚ್.. ಕೇವಲ 12,999 ರೂ.! ವಿಶೇಷತೆಗಳೇನು?

ವಿವೋ Y29 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ Y29 5G ಸ್ಮಾರ್ಟ್‌ಫೋನ್‌ 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಸ್ಟೈಲ್‌ನ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ Y29 5G ಫೋನನ್ನು ಮೀಡಿಯಾಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. Oppo A80 5G, Infinix Hot 50 5G, Tecno Spark 30 5G, Realme 13 5G ಮತ್ತು Samsung Galaxy A16 5G ಫೋನ್‌ಗಳಲ್ಲಿ ಸಹ ಈ ಪ್ರೊಸೆಸರ್ ಇದೆ.

ಕ್ಯಾಮೆರಾ ಸೆಟಪ್

ವಿವೋ Y29 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಎಐ (AI) ಲೆನ್ಸ್‌ನೊಂದಿಗೆ ದ್ವಿತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್‌ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಸದ್ದಿಲ್ಲದೆ Vivo Y29 5G ಲಾಂಚ್.. ಕೇವಲ 12,999 ರೂ.! ವಿಶೇಷತೆಗಳೇನು?

ಬ್ಯಾಟರಿ ಮತ್ತು ಚಾರ್ಜಿಂಗ್

ಮುಂಬರುವ ವಿವೋ Y29 5G ಫೋನ್ 5500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ವಿವೋ Y29 5G ಫೋನ್ ಶಾಕ್ ರೆಸಿಸ್ಟೆಂಟ್ ಫೋನ್ ಆಗಿದ್ದು, ನೆಲದ ಮೇಲೆ ಬಿದ್ದರೂ ಹಾನಿಯಾಗುವುದಿಲ್ಲ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಯುಎಸ್‌ಬಿ ಟೈಪ್ ಸಿ, ಡ್ಯುಯಲ್ ಸಿಮ್ 5G, 4G VoLTE, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ವಿವೋ Y29 5G ಬೆಲೆ

ವಿವೋ Y29 5G ಫೋನ್ ನಾಲ್ಕು ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.ಈ ಫೋನಿನ 4GB RAM + 128GB ಸ್ಟೋರೇಜ್ ರೂಪಾಂತರವನ್ನು 13,999 ರೂ.ಗೆ ಬಿಡುಗಡೆ ಮಾಡಲಾಗಿದೆ. 6GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 15,499 ರೂ. ಇದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಈ ಎರಡೂ ರೂಪಾಂತರಗಳನ್ನು ಖರೀದಿಸಿದರೆ, 1000 ರೂ. ಕ್ಯಾಶ್‌ಬ್ಯಾಕ್ ಲಭ್ಯವಿದೆ.

ವಿವೋ Y29 5G ಫೋನಿನ8GB RAM + 128GB ಸ್ಟೋರೇಜ್ ಮಾದರಿಯನ್ನು 16,999 ರೂ.ಗೆ ಪರಿಚಯಿಸಲಾಗಿದೆ. ಹಾಗೆಯೇ 8GB RAM + 256GB ಸ್ಟೋರೇಜ್ ಆಯ್ಕೆಯು 18,999 ರೂ.ಗೆ ಲಭ್ಯವಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಈ ಫೋನ್‌ ಕೊಂಡರೆ, ಕಂಪನಿಯು 1500 ರೂ. ಕ್ಯಾಶ್‌ಬ್ಯಾಕ್ ನೀಡುತ್ತದೆ.

Best Mobiles in India

English summary
Vivo Y29 5G with 50MP camera launched in india at price Rs.13,999: know Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+