Vivo Y300+ ಬೆಲೆ ಸೋರಿಕೆ! 50MP ಕ್ಯಾಮೆರಾ.. ದೊಡ್ಡ ಬ್ಯಾಟರಿ.. ಬಿಡುಗಡೆ ಯಾವಾಗ?
ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ ವಿವೋ (Vivo) ಶೀಘ್ರದಲ್ಲೇ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಮೊಬೈಲ್ ವಿವೋ Y300 ಪ್ಲಸ್ (Vivo Y300+) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮೂಲಕ ಕಂಪನಿಯು ತನ್ನ 'Y' ಸರಣಿಯನ್ನು ಭಾರತದಲ್ಲಿ ವಿಸ್ತರಿಸಲಿದೆ. ಇತ್ತೀಚೆಗೆ ಈ ಫೋನಿನ ಭಾರತೀಯ ಮಾರುಕಟ್ಟೆ ಬೆಲೆ ಮತ್ತು ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಟಿಪ್‌ಸ್ಟರ್‌ನಿಂದ ಪ್ರಮುಖ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಬನ್ನಿ, ಮುಂಬರುವ ವಿವೋ ಫೋನಿನ ಬೆಲೆ ಎಷ್ಟಿರಲಿದೆ? ಮತ್ತು ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ? ಎನ್ನುವುದನ್ನು ತಿಳಿಯೋಣ.
ಕಂಪನಿಯು ವಿವೋ Y300 ಪ್ಲಸ್ ಮೊಬೈಲ್ ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ. ಇದು ಬೆಲೆಗೆ ತಕ್ಕಂತೆ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈ ಮೊಬೈಲ್ 6.78 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ. ಜೊತೆಗೆ, ಇದು ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುವ ಸಾಧ್ಯತೆಯಿದೆ. ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿರಬಹುದು. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5000mAh ಬ್ಯಾಟರಿ ಇರಲಿದೆ.

ವಿವೋ Y300 ಪ್ಲಸ್ ಫೋನಿನನ ಬೆಲೆ (ಸೋರಿಕೆ)
ಮುಂಬರುವ ವಿವೋ Y300 ಪ್ಲಸ್ ಫೋನಿನ ವಿವರಗಳನ್ನು ಟಿಪ್‌ಸ್ಟರ್ ಅಭಿಷೇಕ್ ಯಾದವ್ ತನ್ನ ಎಕ್ಸ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಸೋರಿಕೆಯ ಪ್ರಕಾರ, ವಿವೋ Y300 ಪ್ಲಸ್ ಭಾರತದಲ್ಲಿ 23,999 ರೂ.ಗಳ ಬೆಲೆಗೆ ಬಿಡುಗಡೆಯಾಗಲಿದೆ. ಇದು 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಇತರ ರೂಪಾಂತರಗಳು ಸಹ ಇರುವ ಸಾಧ್ಯತೆಯಿದೆ.
ವಿವೋ Y300 ಪ್ಲಸ್ ಫೋನಿನ ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ಕಂಪನಿಯು ವಿವೋ Y300 ಪ್ಲಸ್ ಮೊಬೈಲ್ ಅನ್ನು 6.78 ಇಂಚಿನ OLED ಡಿಸ್ಪ್ಲೇಯೊಂದಿಗೆ ಪರಿಚಯಿಸಲಿದೆ. ಇದು ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಟಿಪ್‌ಸ್ಟರ್ ಪೋಸ್ಟ್ ಪ್ರಕಾರ ಮುಂಬರುವ ವಿವೋ Y300 ಪ್ಲಸ್ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಅನ್ನು ಹೊಂದಿರಲಿದೆ. ಈ ಪ್ರೊಸೆಸರ್ ತುಂಬಾ ಹಳೆಯದು. ಈ ಫೋನಿನಲ್ಲಿ ವಿವೋ ಅಭಿಮಾನಿಗಳಿಗೆ ಇಷ್ಟವಾಗುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.
ಈ ಸುದ್ದಿ ಓದಿದ್ದೀರಾ?: itel: ಅಗ್ಗದ ಫೋನ್ ಬಿಡುಗಡೆ: ದೊಡ್ಡ ಡಿಸ್ಪ್ಲೇ.. ಬಿಗ್ ಬ್ಯಾಟರಿ.. ಕೇವಲ 7,000 ರೂ.!
ಸ್ಟೋರೇಜ್ ಆಯ್ಕೆಗಳು
ವರದಿಯ ಪ್ರಕಾರ, ವಿವೋ Y300 ಪ್ಲಸ್ ಮೊಬೈಲ್ ಅನ್ನು 8 GB RAM ಮತ್ತು 128 GB ವರೆಗಿನ ಆಂತರಿಕ ಸ್ಟೋರೇಜ್‌ನೊಂದಿಗೆ ಬಿಡುಗಡೆ ಮಾಡಲಾಗುವುದು.
ಕ್ಯಾಮೆರಾ ರಚನೆ
ಮುಂಬರುವ ವಿವೋ Y300 ಪ್ಲಸ್ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಯಿದೆ ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿರಲಿದೆ. ಜೊತೆಗೆ, 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಅನ್ನು ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್ ವಿವರ
ವಿವೋ Y300 ಪ್ಲಸ್ ಮೊಬೈಲ್ ಅನ್ನು 5000mAh ಸಾಮರ್ಥ್ಯ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಇದನ್ನು ವೇಗವಾಗಿ ಚಾರ್ಕ್ ಮಾಡಲು, ಇದು 44W ಚಾರ್ಜಿಂಗ್ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ.
ಇತರೆ ವೈಶಿಷ್ಟ್ಯಗಳು
ವಿವೋ Y300 ಪ್ಲಸ್ ಮೊಬೈಲ್ 7.57 ಎಂಎಂ ಮತ್ತು 7.49 ಎಂಎಂ ದಪ್ಪ, 183 ಗ್ರಾಂ ಮತ್ತು 172 ಗ್ರಾಂ ತೂಕ ಹೊಂದಿರುವ ಸಾಧ್ಯತೆಯಿದೆ. ಇದು ಬುಹುಶಃ ಎರಡು ವಿಭಿನ್ನ ಬ್ಯಾಕ್ ಪ್ಯಾನೆಲ್‌ಗಳಲ್ಲಿ ಬರಬಹುದು. ಇದು ಧೂಳು ಮತ್ತು ನೀರಿನ ರಕ್ಷಣೆಯ IP54 ರೇಟಿಂಗ್, ಫಿಂಗರ್‌ಪ್ರಿಂಟ್ ಸೆನ್ಸಾರ್, 5G, 4G, ವೈ ಫೈ, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.


Click it and Unblock the Notifications








