Home
ಮೊಬೈಲ್

ದಸರಾ ಗಿಫ್ಟ್‌! ಸದ್ದಿಲ್ಲದೆ Vivo Y300 Plus ಫೋನ್ ಬಿಡುಗಡೆ: 32MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು?

ವಿವೋ ಪ್ರಿಯರಿಗೆ ಭರ್ಜರಿ ದಸರಾ ಗಿಫ್ಟ್‌! ಸದ್ದಿಲ್ಲದೆ ಹೊಸ ವಿವೋ ಮೊಬೈಲ್ ಭಾರತದಲ್ಲಿ ಬಿಡುಗಡೆ. ಹೌದು, ವಿವೋ (Vivo) ಕಂಪನಿಯು ಇಂದು ತನ್ನ ನೂತನ ವಿವೋ Y300 ಪ್ಲಸ್ (Vivo Y300 Plus) ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. ಕಂಪನಿಯು ಇದನ್ನು ನೇರವಾಗಿ ಆಫ್‌ಲೈನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಇಂದಿನಿಂದ (ಅಕ್ಟೋಬರ್ 10) ಖರೀದಿಗೆ ಲಭ್ಯವಿದೆ. ನೂತನ ವಿವೋ Y300 ಪ್ಲಸ್ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಕಂಪನಿಯು ವಿವೋ Y300 ಪ್ಲಸ್ 5G ಫೋನನ್ನು 25 ಸಾವಿರ ರೂ. ಒಳಗಿನ ಬಜೆಟ್‌ನಲ್ಲಿ ಪರಿಚಯಿಸಿದೆ. ಈ ಫೋನ್ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ, 8GB RAM + 128GB ಸ್ಟೋರೇಜ್ ಆಯ್ಕೆ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 44W ಫ್ಲ್ಯಾಶ್ ಚಾರ್ಜ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ದಸರಾ ಗಿಫ್ಟ್‌! Vivo Y300 Plus ಲಾಂಚ್: 32MP ಸೆಲ್ಫಿ ಕ್ಯಾಮೆರಾ.. ಬೆಲೆ ನೋಡಿ

ವಿವೋ Y300 ಪ್ಲಸ್ ಫೋನಿನ ಬೆಲೆ

ಕಂಪನಿಯು ವಿವೋ Y300 ಪ್ಲಸ್ 5G ಫೋನನ್ನು ಕೇವಲ ಒಂದೇ ಸ್ಟೋರೇಜ್‌ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಇದು 8GB RAM ಜೊತೆಗೆ 128GB ಸ್ಟೋರೇಜ್‌ ಹೊಂದಿದೆ. ಇದರ ಬೆಲೆ 23,999 ರೂ. ಆಗಿದೆ. ನೀವು, ಈ ಹೊಸ ವಿವೋ ಫೋನನ್ನು ಸಿಲ್ಕ್ ಬ್ಲಾಕ್ ಮತ್ತು ಸಿಲ್ಕ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ವಿವೋ Y300 ಪ್ಲಸ್ ಅನ್ನು ಇಂದಿನಿಂದ (ಅಕ್ಟೋಬರ್ 10) ಮಾರಾಟ ಮಾಡಲಾಗುತ್ತದೆ. ನೀವು, ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳಿಂದ ಖರೀದಿಸಬಹುದು.

ವಿವೋ Y300 ಪ್ಲಸ್ ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ಮಾಹಿತಿ

ವಿವೋ Y300 ಪ್ಲಸ್ ಸ್ಮಾರ್ಟ್‌ಫೋನ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಇದು 120Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುವ 3D ಬಾಗಿದ ಅಮೋಲೆಡ್ ಡಿಸ್ಪ್ಲೇಯಾಗಿದೆ. ಈ ಡಿಸ್ಪ್ಲೇ 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲಿಸುತ್ತದೆ. ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ನೂತನ ವಿವೋ ಫೋನ್ ಆಕ್ಟಾಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಆಗಿದೆ. ಈ ಚಿಪ್‌ಸೆಟ್ ಅನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ.

ಸ್ಟೋರೇಜ್ ಆಯ್ಕೆ

ವಿವೋ Y300 ಪ್ಲಸ್‌ ಮೊಬೈಲ್ 8GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಮೊಬೈಲ್ 8GB ಎಕ್ಸ್‌ಟೆಂಡೆಡ್ RAM ತಂತ್ರಜ್ಞಾನವನ್ನು ಹೊಂದಿದೆ. ಫೋನಿನ 8GB ಭೌತಿಕ RAM ಜೊತೆಗೆ 16GB RAM ನ ಶಕ್ತಿಯನ್ನು ನೀಡುತ್ತದೆ. ಇದು 128GB ಆಂತರಿಕ ಸ್ಟೋರೇಜ್‌ ಹೊಂದಿದ್ದು, ಇದನ್ನು ಮೆಮೊರಿ ಕಾರ್ಡ್ ಮೂಲಕ 1 TB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ವಿವೋ Y300 ಪ್ಲಸ್ ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಹೊಂದಿದೆ. ಇದರಲ್ಲಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ, 2 ಮೆಗಾಪಿಕ್ಸೆಲ್ ಬೋಕಾ ಲೆನ್ಸ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್‌ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಬ್ಯಾಕಪ್‌

ನೂತನ ವಿವೋ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 44W ಫ್ಲ್ಯಾಷ್ ಚಾರ್ಜ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ವಿವೋ Y300 ಪ್ಲಸ್ ಸ್ಮಾರ್ಟ್‌ಫೋನ್ 7.49 ಎಂಎಂ ದಪ್ಪ ಹೊಂದಿದೆ. ಇದು ಸ್ಪ್ಲಾಶ್ ಪ್ರೂಫ್ ಫೋನ್ ಆಗಿದ್ದು, IP54 ರೇಟಿಂಗ್‌ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ ಬ್ಲೂಟೂತ್, ವೈಫೈ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್‌ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Vivo Y300 Plus launched in india: check price, specifications and sale details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+