Vivo; ಶೀಘ್ರದಲ್ಲೇ ವಿವೋ Y300 Pro ಸ್ಮಾರ್ಟ್‌ಫೋನ್ ಲಾಂಚ್ !; ಏನಿರಲಿವೆ ನಿರೀಕ್ಷಿತ ಫೀಚರ್ಸ್
ವಿವೋ (Vivo) ಸಂಸ್ಥೆ ವಿಭಿನ್ನ ಶೈಲಿಯ ಉತ್ತಮ ಫೀಚರ್ಸ್ ಹಾಗೂ ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ರ್ಟ್‌ಫೋನ್‌ಗಳನ್ನು (Smartphones) ಪರಿಚಯಿಸುತ್ತಾ ಬಂದಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಯಾಗಿದೆ, ಕೆಲವರಂತು ವಿವೋ ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುವ ಗ್ರಾಹಕರನ್ನು ವಿವೋ ಹೊಂದಿದೆ. ಇದೀಗ ಸಂಸ್ಥೆ ನೂತನ ಸ್ಮಾರ್ಟ್‌ಫೋನ್ ಒಂದನ್ನು ಜಾರಿಗೆ ತರಲು ಸಿದ್ದತೆ ನಡೆಸಿದೆ ಎಂಬ ಅಂಶ ಬೆಳಕಿಗೆ ಬಂದಿದೆ ಹಾಗಿದ್ರೆ ಯಾವುದು ಆ ನೂತನ ಸ್ಮಾರ್ಟ್‌ಫೋನ್ ಫೀಚರ್ಸ್ ಏನಿರಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ವಿವೋ (Vivo) ಸಂಸ್ಥೆ ತನ್ನ ಬಹು ನಿರೀಕ್ಷಿತ ವಿವೋ Y300 Pro 5G ಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಸ್ಮಾರ್ಟ್‌ಫೋನ್ ತಯಾರಕರು ಈಗಾಗಲೇ ವಿವೋ Y200 Pro 5G ಯ ಉತ್ತರಾಧಿಕಾರಿಯಾಗಿ ಈ ಫೋನ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ, ಈ ಸ್ಮಾರ್ಟ್‌ಫೋನ್ ಅನ್ನು ಮೇ ತಿಂಗಳಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಗಿದೆ. ಮುಂಬರಲಿರುವ ವಿವೋ Y300 Pro 5G ಮೊಬೈಲ್‌ನ ಲಾಂಚ್ ಸಮಯ ಅಥವಾ ಫೀಚರ್ಸ್ ಇನ್ನೂ ತಿಳಿದು ಬಂದಿಲ್ಲ. ಆದರೆ ಈ ಹ್ಯಾಂಡ್‌ಸೆಟ್ ಇದೀಗ ಅಸ್ತಿತ್ವದಲ್ಲಿರುವ ಮಾದರಿಗಿಂತ ಹಾರ್ಡ್‌ವೇರ್ ಅಪ್‌ಗ್ರೇಡ್‌ಗಳೊಂದಿಗೆ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

ವಿವೋ Y200 Pro 5G (Vivo Y200 Pro 5G) ಸ್ಮಾರ್ಟ್‌ಫೋನ್ ವಿವೋ V29e ಹ್ಯಾಂಡ್‌ಸೆಟ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಮುಂಬರಲಿರುವ ವಿವೋ Y300 Pro 5G ವಿವೋ V30e ಮರು ಬ್ಯಾಡ್ಜ್ ಆಗಿರುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
ವಿವೋ Y300 Pro 5G (Vivo Y300 Pro 5G) ನಿರೀಕ್ಷಿತ ಲಾಂಚ್ ದಿನಾಂಕ:
Gizmochina ವರದಿಯ ಪ್ರಕಾರ ವಿವೋ Y300 Pro 5G ಮಾದರಿ ಸಂಖ್ಯೆ V2402 ಅನ್ನು ನಿರ್ದಿಷ್ಟಪಡಿಸದ ಡೇಟಾಬೇಸ್‌ನಲ್ಲಿ ಗುರುತಿಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ವಿವೋ Y200 Pro 5G ಮಾದರಿ ಸಂಖ್ಯೆ V2401 ಅನ್ನು ಹೊಂದಿದೆ. ವರದಿಯ ಪ್ರಕಾರ ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಪಟ್ಟಿಯು ನಿರೀಕ್ಷಿತ ಹ್ಯಾಂಡ್‌ಸೆಟ್‌ನ ಯಾವುದೇ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ, ಇದು ಮುಂಬರುವ ತಿಂಗಳುಗಳಲ್ಲಿ ಪ್ರಾರಂಭಗೊಳ್ಳುವ ಸಾಧ್ಯತೆಯಿದೆ.
ವಿವೋ V30e( Vivo V30e) ಫೀಚರ್ಸ್:
ವಿವೋ V30e ಭಾರತದಲ್ಲಿ 4nm Snapdragon 6 Gen 1 SoC, 44W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿ, IP64 ರೇಟಿಂಗ್ ಮತ್ತು ಆಂಡ್ರಾಯ್ಡ್ 14 ಆಧಾರಿತ FuntouchOS 14 ಹೊಂದಿದೆ. ಜೊತೆಗೆ ಇದು 6.78 ಇಂಚಿನ ಫುಲ್ HD+ 3D ಬಾಗಿದ ಡಿಸ್‌ಪ್ಲೇ, 50MP ಡ್ಯುಯಲ್ ಬ್ಯಾಕ್ ಕ್ಯಾಮೆರಾ ಘಟಕ ಮತ್ತು 50MP ಸೆಲ್ಫಿ ಶೂಟರ್ ಹೊಂದಿದೆ. ವಿವೋ V30e ಇದು 8GB + 128GB ವೇರಿಯಂಟ್‌ನ ಬೆಲೆ ಬೆಲೆ 27,999 ರೂ. ಗಳಾಗಿವೆ ಮತ್ತು 8GB + 256GB ವೇರಿಯಂಟ್ 29,999 ರೂ. ಬೆಲೆ ಹೊಂದಿದೆ.
ವಿವೋ Y200 Pro 5G ಫೀಚರ್ಸ್: ವಿವೋ Y200 Pro 5G ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, 64MP ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು 16 MP ಫ್ರಂಟ್ ಕ್ಯಾಮರಾವನ್ನು ಹೊಂದಿದೆ. ಫೋನ್ 6.78 ಇಂಚಿನ 120Hz ಫುಲ್ HD+ ಅಮೋಲ್ಡ್ ಪರದೆಯನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 14 ಆಧಾರಿತ Funtouch OS 14 ನೊಂದಿಗೆ ರವಾನಿಸುತ್ತದೆ.
ಜೊತೆಗೆ ಇದು 44W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದೆ. Vivo Y200 Pro 5G ಯ 8GB + 128GB ವೇರಿಯಂಟ್‌ನ ಬೆಲೆ ಭಾರತದಲ್ಲಿ 24,999 ರೂ.ಗಳಾಗಿವೆ


Click it and Unblock the Notifications








