Home
ಮೊಬೈಲ್

ಅಬ್ಬರಿಸಲು ಬಂತು vivo Y300 ಫೋನ್; 6500mAh ಬ್ಯಾಟರಿ.. 512GB ಸ್ಟೋರೇಜ್.. ಕೇವಲ 16,000 ರೂ.!

ವಿವೋ ಸದ್ದಿಲ್ಲದೆ ಹೊಸ ಸೊಗಸಾದ ಫೋನನ್ನು ಬಿಡುಗಡೆ ಮಾಡಿದೆ. ಇದು ವಿವೋ Y300 (vivo Y300) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ವಿವೋ ಸಂಸ್ಥೆಯು ಇದನ್ನು ತನ್ನ 'Y' ಸರಣಿಯಲ್ಲಿ ಪರಿಚಯಿಸಿದೆ. 16 ಸಾವಿರ ರೂ.ಗಳ ಬಜೆಟ್‌ನಲ್ಲಿ ಹೊಸ ಫೋನ್‌ ಖರೀದಿಸುವವರಿಗೆ, ಇದು ಉತ್ತಮ ಆಯ್ಕೆಯಾಗಿದೆ. ಇದು ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆ ಮತ್ತು IP64 ರೇಟಿಂಗ್ ಹೊಂದಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ Y300 ಸ್ಮಾರ್ಟ್‌ಫೋನ್‌ ನಾಲ್ಕು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.77 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 12GB RAM + 512GB ಸ್ಟೋರೇಜ್, 6500mAh ದೊಡ್ಡ ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

vivo Y300 ಫೋನ್ ಲಾಂಚ್; 6500mAh ಬ್ಯಾಟರಿ.. 512GB ಸ್ಟೋರೇಜ್.. ಬೆಲೆ ಎಷ್ಟು?

ವಿವೋ Y300 ಫೋನಿನ ಬೆಲೆ

8GB + 128GB ಸ್ಟೋರೇಜ್ ಬೆಲೆ = 16,290 ರೂ.
8GB + 256GB ಸ್ಟೋರೇಜ್ ಬೆಲೆ = 18,620 ರೂ.
12GB + 256GB ಸ್ಟೋರೇಜ್ ಬೆಲೆ = 20,950 ರೂ.
12GB + 512GB ಸ್ಟೋರೇಜ್ ಬೆಲೆ = 23,285 ರೂ.

ವಿವೋ Y300 ಫೋನನ್ನು 16,290 ರೂ. (1399 ಯುವಾನ್) ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಮೊಬೈಲ್ ಚೀನಾದಲ್ಲಿ ಕಪ್ಪು, ಬಿಳಿ ಮತ್ತು ಹಸಿರು ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಇದು 199.9 ಗ್ರಾಂ ತೂಕ ಹೊಂದಿದೆ.

ವಿವೋ Y300 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ Y300 ಮೊಬೈಲ್ 6.77 ಇಂಚಿನ ಪೂರ್ಣ ಹೆಚ್‌ಡಿ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2392 x 1080 ಪಿಕ್ಸೆಲ್‌ ರೆಸಲ್ಯೂಶನ್, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಇದು ಡೈಮಂಡ್ ಶೀಲ್ಡ್ ಗಾಜಿನ ರಕ್ಷಣೆ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ನೂತನ ವಿವೋ Y300 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಇದು 6nm ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಇದು ಗ್ರಾಫಿಕ್ಸ್‌ಗಾಗಿ, ಆರ್ಮ್ ಮಾಲಿ G57 MC2 ಜಿಪಿಯು ಹೊಂದಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ ಓರಿಜಿನ್ ಓಎಸ್‌ 5 ನೊಂದಿಗೆ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ವಿವೋ Y300 ಫೋನ್ 8GB ಮತ್ತು 12GB RAM ಹೊಂದಿದೆ. ಫೋನಿನಲ್ಲಿ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

vivo Y300 ಫೋನ್ ಲಾಂಚ್; 6500mAh ಬ್ಯಾಟರಿ.. 512GB ಸ್ಟೋರೇಜ್.. ಬೆಲೆ ಎಷ್ಟು?

ಕ್ಯಾಮೆರಾ ಸೆಟಪ್

ಹೊಸ ವಿವೋ Y300 ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ,ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಬ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌

ವಿವೋ Y300 ಸ್ಮಾರ್ಟ್‌ಫೋನ್ 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ವಿವೋ Y300 ಮೊಬೈಲ್ ನೀರು ಮತ್ತು ಧೂಳಿನ (ಸ್ಪ್ಲಾಶ್) ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ಯುಎಸ್‌ಬಿ ಟೈಪ್ ಸಿ, ಆಡಿಯೋ, ಮೂರು ಸ್ಪೀಕರ್ ಮ್ಯಾಟ್ರಿಕ್ಸ್, 3D ಪನೋರಮಿಕ್ ಆಡಿಯೋ, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
vivo Y300 with 6500mAh battery Launched: Price, Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+