Home
ಮೊಬೈಲ್

Vivo: ಎರಡು ಸೊಗಸಾದ 5G ಫೋನ್ ಲಾಂಚ್; 7300mAh ಬ್ಯಾಟರಿ.. 512GB ಸ್ಟೋರೇಜ್.. ಬೆಲೆ, ವಿಶೇಷತೆಗಳೇನು?

ವಿವೋ ಕಂಪನಿಯು ಇಂದು ಎರಡು ಹೊಚ್ಚ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ತನ್ನ 'Y' ಸರಣಿಯಲ್ಲಿ ಪರಿಚಯಿಸಿದೆ. ಹೌದು, ಬಹುನಿರೀಕ್ಷಿತ ವಿವೋ Y300t 5G (Vivo Y300t 5G) ಮತ್ತು ವಿವೋ Y300 ಪ್ರೊ+ (Vivo Y300 Pro+) ಸ್ಮಾರ್ಟ್‌ಫೋನ್ ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಎರಡೂ ಮೊಬೈಲ್‌ಗಳನ್ನು ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಉತ್ತಮ ವಿನ್ಯಾಸದೊಂದಿಗೆ ರಿಲೀಸ್ ಮಾಡಲಾಗಿದೆ. ಬನ್ನಿ, ಈ ಫೋನ್‌ಗಳ ಬೆಲೆ, ವಿಶೇಷತೆಗಳು ಮತ್ತು ಇನ್ನಿತರ ಮಾಹಿತಿಗಳನ್ನು ತಿಳಿಯೋಣ.

ವಿವೋ Y300 ಪ್ರೊ+ ಮೊಬೈಲ್ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಫೋನ್ 7300mAh ಸಾಮರ್ಥ್ಯದ ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಹೊಂದಿದೆ. ವಿವೋ Y300t ಫೋನ್ 6500mAh ಬ್ಯಾಟರಿ ಹೊಂದಿದೆ. ವಿವೋ Y300t ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಒಳಗೊಂಡಿದೆ. ವಿವೋ Y300 ಪ್ರೊ+ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್ ಹೊಂದಿದೆ. ವಿವೋ Y300t ಮೊಬೈಲ್ 6.72 ಮತ್ತು ವಿವೋ Y300 ಪ್ರೊ+ ಸ್ಮಾರ್ಟ್‌ಫೋನ್ 6.77 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.

ಎರಡು ಹೊಸ Vivo ಫೋನ್ ಲಾಂಚ್; 7300mAh ಬ್ಯಾಟರಿ, 512GB ಸ್ಟೋರೇಜ್; ಬೆಲೆ ನೋಡಿ

ವಿವೋ Y300t ಬೆಲೆ

ವಿವೋ Y300t ಫೋನ್ ನಾಲ್ಕು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 14,325 ರೂ. ಆಗಿದೆ. 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 15,514 ರೂ. ಇದೆ. ಹಾಗೆಯೇ 12GB RAM + 256GB ಸ್ಟೋರೇಜ್ ಮಾದರಿಯು 17,891 ರೂ.ಗೆ ಬಿಡುಗಡೆಯಾಗಿದೆ. ಇನ್ನು 12GB RAM + 512GB ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 20,268 ರೂ. ಆಗಿದೆ. ಈ ವಿವೋ Y300t ಫೋನ್ ರಾಕ್ ವೈಟ್, ಓಷನ್ ಬ್ಲೂ ಮತ್ತು ಬ್ಲ್ಯಾಕ್ ಕಾಫಿ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ವಿವೋ Y300t 5G ವೈಶಿಷ್ಟ್ಯಗಳು

ವಿವೋ Y300t 5G ಮೊಬೈಲ್ 6.72 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿರಲಿದೆ. ಈ ಸ್ಕ್ರೀನ್ 2400 x 1080 ಪಿಕ್ಸೆಲ್ ರೆಸಲ್ಯೂಶನ್‌ ಬೆಂಬಲ ಹೊಂದಿರಲಿದೆ. ಇದರೊಂದಿಗೆ 120Hz ರಿಫ್ರೆಶ್ ದರ ಮತ್ತು 1,050 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿರುತ್ತದೆ. ಈ ವಿವೋ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ OriginOS 5 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ.

ವಿವೋ Y300t 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಯಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ಈ ಫೋನ್ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಒಳಗೊಂಡಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ವಿವೋ Y300t 5G ಮೊಬೈಲ್ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿರಲಿದೆ. ಈ ವಿವೋ Y300t 5G ಫೋನ್ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಫೋನ್‌ನಲ್ಲಿ 6,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.

ವಿವೋ Y300t 5G ಮೊಬೈಲ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ವೇಕ್ ಫೇಶಿಯಲ್ ರೆಕಗ್ನಿಷನ್ ಹೊಂದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಬ್ಲೂಟೂತ್ 5.4 ಮತ್ತು ವೈ-ಫೈ ಬೆಂಬಲ, ಎನ್‌ಎಫ್‌ಸಿ, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಮತ್ತು IP64 ರೇಟಿಂಗ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಎರಡು ಹೊಸ Vivo ಫೋನ್ ಲಾಂಚ್; 7300mAh ಬ್ಯಾಟರಿ, 512GB ಸ್ಟೋರೇಜ್; ಬೆಲೆ ನೋಡಿ

ವಿವೋ Y300 ಪ್ರೊ+ ಬೆಲೆ

ವಿವೋ Y300 ಪ್ರೊ+ ಮೊಬೈಲ್ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿ 8GB RAM + 128GB ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 20,796 ರೂ. ಆಗಿದೆ. 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 23,108 ರೂ. ಇದೆ. 12GB RAM + 256GB ಸ್ಟೋರೇಜ್ ಮಾದರಿಯು 25,420 ರೂ.ಗೆ ಬಿಡುಗಡೆಯಾಗಿದೆ. ಇನ್ನು 12GB RAM + 512GB ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 28,888 ರೂ. ಇದೆ. ಈ ಮೊಬೈಲ್ ಸಿಂಪಲ್ ಬ್ಲಾಕ್, ಸ್ಟಾರ್ ಸಿಲ್ವರ್ ಮತ್ತು ಮೈಕ್ರೋ ಪೌಡರ್ ಬಣ್ಣಗಳಲ್ಲಿ ಬರುತ್ತದೆ.

ವಿವೋ Y300 ಪ್ರೊ+ 5G ವೈಶಿಷ್ಟ್ಯಗಳು

ವಿವೋ Y300 ಪ್ರೊ ಪ್ಲಸ್ 5G ಫೋನ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಇದು ಕ್ವಾಡ್ ಕರ್ವ್ಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2392 x 1080 ಪಿಕ್ಸೆಲ್ ರೆಸಲ್ಯೂಶನ್‌, 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಇದು 5,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಹೊಂದಿರುತ್ತದೆ. ಈ ವಿವೋ 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿರಲಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಇದು 820,000+ AnTuTu ಸ್ಕೋರ್‌ ಪಡೆದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ OriginOS 5 ಓಎಸ್‌ನೊಂದಿಗೆ ಕೆಲಸ ಮಾಡಲಿದೆ. ಈ ಮೊಬೈಲ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ.

ವಿವೋ Y300 ಪ್ರೊ+ 5G ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಆಂಟಿ ಶೇಕ್ ಮುಖ್ಯ ಕ್ಯಾಮೆರಾ ಇದೆ. ಹಾಗೆಯೇ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅಳವಡಿಸಲಾಗಿದೆ. ಈ ವಿವೋ Y300 ಪ್ರೊ+ 5G ಫೋನ್ ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಫೋನ್ 7300mAh ಬ್ಯಾಟರಿ ಹೊಂದಿರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗುತ್ತದೆ.

ವಿವೋ Y300 ಪ್ರೊ+ 5G ಫೋನ್ ಎಐ (AI) ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೆಯೇ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಈ ಫೋನ್ ಐಸ್‌ಫೀಲ್ಡ್ ಕೂಲಿಂಗ್ ಸಿಸ್ಟಮ್, ಡೈಮಂಡ್ ಶೀಲ್ಡ್ ಟೆಂಪರ್ಡ್ ಗ್ಲಾಸ್, ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP6X ರೇಟಿಂಗ್‌ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಪ್ರಸ್ತುತ ಈ ಎರಡು ಹೊಸ ವಿವೋ ಮೊಬೈಲ್‌ಗಳು ಚೀನಾದಲ್ಲಿ ಮಾತ್ರ ಖರೀದಿಗೆ ಲಭ್ಯವಿರುತ್ತವೆ. ಕಂಪನಿಯು ಮೂಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

Best Mobiles in India

English summary
Vivo Y300t and Vivo Y300 Pro+ with mega batteries launched: price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+