ಕಡಿಮೆ ಬೆಲೆಗೆ Vivo Y39 5G ಲಾಂಚ್; 6500mAh ಬ್ಯಾಟರಿ.. 50MP ಕ್ಯಾಮೆರಾ.. ಸೇಲ್ ಯಾವಾಗ?
ವಿವೋ ತನ್ನ ಅಭಿಮಾನಿಗಳಿಗಾಗಿ ಹೊಸ 5G ಫೋನನ್ನು ಬಿಡುಗಡೆ ಮಾಡಿದೆ. ಇದನ್ನು 22,000 ರೂ.ಗಳ ಬಜೆಟ್ ವಿಭಾಗದಲ್ಲಿ ಪರಿಚಯಿಸಲಾಗಿದೆ. ಹೌದು, ಹೊಸ ವಿವೋ Y39 5G (Vivo Y39 5G) ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಸ್ಟೈಲಿಶ್ ಲುಕ್ ಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನ ಡಿಸ್ಪ್ಲೇ ವಿಡಿಯೋ ಸ್ಟ್ರೀಮಿಂಗ್ ಮತ್ತು ಗೇಮಿಂಗ್‌ಗೆ ಉತ್ತಮವಾಗಿದೆ. ಬನ್ನಿ, ವಿವೋ Y39 5G ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ವಿವೋ Y39 5G ಮೊಬೈಲ್ ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.68 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM, 6500mAh ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ Y39 5G ಸ್ಲಿಮ್ ಮತ್ತು ಸ್ಟೈಲಿಶ್ ಸ್ಮಾರ್ಟ್‌ಫೋನ್ ಆಗಿದೆ. ಇದು 165.7 x 76.3 x 8.09 ಎಂಎಂ ಅಳತೆ ಹೊಂದಿದೆ. ಈ ಮೊಬೈಲ್ ಸುಮಾರು 205 ಗ್ರಾಂ ತೂಕದೊಂದಿಗೆ ಬರುತ್ತದೆ. ಇದು ಹಗುರವಾಗಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ವಿವೋ Y39 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ Y39 5G ಫೋನ್ 6.68 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 1608 x 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಬೆಂಬಲ ಹೊಂದಿದೆ. ಮೊದಲೇ ಹೇಳಿದಂತೆ ಈ ಡಿಸ್ಪ್ಲೇ ವಿಡಿಯೋ ಸ್ಟ್ರೀಮಿಂಗ್ ಮತ್ತು ಗೇಮಿಂಗ್‌ಗೆ ಉತ್ತಮವಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ Y39 5G ಮೊಬೈಲ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಪ್ರೊಸೆಸರ್ ಉತ್ತಮ ಬ್ಯಾಟರಿ ಬ್ಯಾಕಪ್, ವೇಗದ ಕಾರ್ಯಕ್ಷಮತೆ ಮತ್ತು ಬಹುಕಾರ್ಯಕ್ಕೆ ಹೆಸರುವಾಸಿಯಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಆಪ್‌ಗಳು ಮತ್ತು ಡೇಟಾ ಸಂಗ್ರಹಿಸಲು ಹೆಚ್ಚು ಸ್ಥಳಾವಕಾಶ ಒದಗಿಸುತ್ತದೆ.
ಕ್ಯಾಮೆರಾ ಸೆಟಪ್
ವಿವೋ Y39 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಇದಲ್ಲದೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ Y39 5G ಫೋನ್ 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ನೀವು ಕೇವಲ 83 ನಿಮಿಷಗಳಲ್ಲಿ ಈ ಫೋನನ್ನು ಶೇ.1 ರಿಂದ ಶೇ.100 ರಷ್ಟು ಚಾರ್ಜ್ ಮಾಡಬಹುದು. ಒಂದೇ ಚಾರ್ಜ್‌ನಲ್ಲಿ ಇಡೀ ದಿನ ಬಾಳಿಕೆ ಬರುತ್ತದೆ.
ಇತರೆ ವೈಶಿಷ್ಟ್ಯಗಳು
ವಿವೋ Y39 5G ಮೊಬೈಲ್ ಸೈಡ್ ಮೌಂಟೆಡ್ ಕೆಪ್ಯಾಸಿಟಿವ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಇದು ಧೂಳು, ಸ್ಪ್ಲಾಶ್ ಮತ್ತು ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಹೊಂದಿದೆ. ಜೊತೆಗೆ ವರ್ಚುವಲ್ RAM ಬೆಂಬಲ, ವೈ-ಫೈ, ಬ್ಲೂಟೂತ್ 5.1, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.
ವಿವೋ Y39 5G ಬೆಲೆ
ವಿವೋ Y39 5G ಫೋನ್ ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ನೀವು 8GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಖರೀದಿಸಬಹುದು. ಇದರ ಬೆಲೆ 22,000 ರೂ. ಆಗಿದೆ. ಇದು ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಓಷನ್ ಬ್ಲೂ ಮತ್ತು ಗ್ಯಾಲಕ್ಸಿ ಪರ್ಪಲ್ ಬಣ್ಣದ ಆಯ್ಕೆಯಲ್ಲಿ ಬರುತ್ತದೆ.


Click it and Unblock the Notifications








