Home
ಮೊಬೈಲ್

Vivo Y39 5G ಬೆಲೆ ಲೀಕ್! 6500mAh ಬ್ಯಾಟರಿ.. 50MP ಡ್ಯುಯಲ್ ಕ್ಯಾಮೆರಾ.. ಬಂಪರ್ ಆಫರ್ ಘೋಷಣೆ, ಸೇಲ್ ಯಾವಾಗ?

ವಿವೋ ಕಳೆದ ತಿಂಗಳು ವಿವೋ Y39 5G (Vivo Y39 5G) ಫೋನನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದನ್ನು ಮಧ್ಯಮ ಬಜೆಟ್ ವಿಭಾಗದಲ್ಲಿ ಪರಿಚಯಿಸಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿಯು ಅದಕೃತ ಮಾಹಿತಿ ಘೋಷಿಸುವ ಮೊದಲೇ, ವಿವೋ Y39 5G ಮೊಬೈಲ್‌ನ ಬೆಲೆ, ಮಾರಾಟ ದಿನಾಂಕ, ಆಫರ್ ಮತ್ತು ವಿಶೇಷತೆಗಳು ಬಹಿರಂಗವಾಗಿವೆ. ಈ ವಿವೋ 5G ಸ್ಮಾರ್ಟ್‌ಫೋನ್ ಯಾವ ಬೆಲೆ ಹೊಂದಿರುತ್ತದೆ ಮತ್ತು ಯಾವಾಗ ಖರೀದಿಗೆ ಲಭ್ಯವಿರುತ್ತದೆ ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿವೋ Y39 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್‌ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.68 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 8GB RAM, 256GB ಸ್ಟೋರೇಜ್, 6500mAh ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಸ್ಲಿಮ್ ಮತ್ತು ಸ್ಟೈಲಿಶ್ ಸ್ಮಾರ್ಟ್‌ಫೋನ್ ಆಗಿದೆ.

Vivo Y39 5G ಬೆಲೆ ಲೀಕ್! 6500mAh ಬ್ಯಾಟರಿ ಖಚಿತ.. ಬಂಪರ್ ಆಫರ್, ಸೇಲ್ ಯಾವಾಗ?

ವಿವೋ Y39 5G ಬೆಲೆ ಮತ್ತು ಆಫರ್

ವಿವೋ Y39 5G ಮೊಬೈಲ್ 8GB RAM ನೊಂದಿಗೆ ಭಾರತದಲ್ಲಿ ಮಾರಾಟವಾಗಲಿದೆ. ಈ ಫೋನಿನ 128GB ಸ್ಟೋರೇಜ್ ರೂಪಾಂತರವನ್ನು 16,999 ರೂ.ಗೆ ಮತ್ತು 256GB ಸ್ಟೋರೇಜ್ ರೂಪಾಂತರವನ್ನು 18,999 ರೂ.ಗೆ ಖರೀದಿಸಬಹುದು. ಈ ಎರಡೂ ರೂಪಾಂತರಗಳ MRP ಬೆಲೆ 21,999 ರೂ. ಮತ್ತು 23,999 ರೂ. ಆಗಿದೆ. ಈ ವಿವೋ ಫೋನ್ ಮಾರ್ಚ್ 25 ರಿಂದ ಮಾರಾಟ ಪ್ರಾರಂಭಿಸಲಿದೆ. ಅಂದರೆ ಈ ಸ್ಮಾರ್ಟ್‌ಫೋನ್ ನಾಳೆ ಖರೀದಿಗೆ ಲಭ್ಯವಿರುತ್ತದೆ.

ನೀವು ನೇರಳೆ ಮತ್ತು ನೀಲಿ ಬಣ್ಣಗಳಲ್ಲಿ ಈ ವಿವೋ 5G ಫೋನನ್ನು ಖರೀದಿಸಬಹುದು. ಕಂಪನಿಯು ವಿವೋ Y39 5G ಫೋನಿನ ​​ಮೊದಲ ಮಾರಾಟದ ಪ್ರಯುಕ್ತ, 1500 ರೂ.ಗಳ ಕ್ಯಾಶ್‌ಬ್ಯಾಕ್ ನೀಡುತ್ತದೆ. ಎಸ್‌ಬಿಐ, ಬ್ಯಾಂಕ್ ಆಫರ್ ಬರೋಡಾ, ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಯೆಸ್ ಬ್ಯಾಂಕ್, ಡಿಬಿಎಸ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಗ್ರಾಹಕರು ಈ ಕ್ಯಾಶ್‌ಬ್ಯಾಕ್ ರಿಯಾಯಿತಿಯ ಲಾಭ ಪಡೆಯಬಹುದು.

Take a Poll

ವಿವೋ Y39 5G ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ ವಿವರ

ವಿವೋ Y39 5G ಮೊಬೈಲ್ 6.68 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1608 x 720 ಪಿಕ್ಸೆಲ್‌ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ ಇದು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಡಿಸ್ಪ್ಲೇ ವಿಡಿಯೋ ಸ್ಟ್ರೀಮಿಂಗ್ ಮತ್ತು ಗೇಮಿಂಗ್‌ಗೆ ಉತ್ತಮವಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ Y39 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4 ಜೆನ್ 2 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 8GB RAM, 128GB ಮತ್ತು 256GB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್

ವಿವೋ Y39 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ Y39 5G ಮೊಬೈಲ್ 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಕೇವಲ 83 ನಿಮಿಷಗಳಲ್ಲಿ ಈ ಫೋನನ್ನು ಶೇ.100 ರಷ್ಟು ಚಾರ್ಜ್ ಮಾಡಬಹುದು.

ಇತರೆ ವೈಶಿಷ್ಟ್ಯಗಳು

ವಿವೋ Y39 5G ಸ್ಮಾರ್ಟ್‌ಫೋನ್ ಸೈಡ್ ಮೌಂಟೆಡ್ ಕೆಪ್ಯಾಸಿಟಿವ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಹೊಂದಿದೆ. ಇದು ಧೂಳು, ಸ್ಪ್ಲಾಶ್ ಮತ್ತು ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಹೊಂದಿದೆ. ಜೊತೆಗೆ ವರ್ಚುವಲ್ RAM ಬೆಂಬಲ, ವೈ-ಫೈ, ಬ್ಲೂಟೂತ್ 5.1, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.

Best Mobiles in India

English summary
Vivo Y39 5G with 6500mAh battery price in india, sale date, offers and specifications leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+