ಭಾರತದಲ್ಲಿ Vivo Y51 Pro 5G ಬಿಡುಗಡೆ: 7,200mAh ಬ್ಯಾಟರಿ, ಕೈಗೆಟುಕುವ ಬೆಲೆ!
ಭಾರತದಲ್ಲಿ Vivo ಕಂಪೆನಿಯು ತನ್ನ ಹೊಸ Y-ಸೀರಿಸ್ ಸ್ಮಾರ್ಟ್‌ಫೋನ್ Vivo Y51 Pro 5G ಅನ್ನು ಬುಧವಾರದಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶದಲ್ಲಿ ಮಧ್ಯಮ ಬೆಲೆಯ ವಿಭಾಗದಲ್ಲಿ ಸ್ಪರ್ಧೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಹೊಸ ಫೋನ್ ಸದ್ದಿಲ್ಲದಂತೆ ಬಿಡುಗಡೆಯಾಗಿದ್ದು, 7,200mAh ದೊಡ್ಡ ಬ್ಯಾಟರಿ, 4nm ಆಕ್ಟಾ-ಕೋರ್ ಪ್ರೊಸೆಸರ್, 5G ಸಂಪರ್ಕ ಮತ್ತು ವೇಗವಾದ ಚಾರ್ಜಿಂಗ್ ಬೆಂಬಲದಂತಹ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಹಾಗಾದರೆ, ಹೊಸ Vivo Y51 Pro 5G ಫೋನ್ ಹೇಗಿದೆ?, ಬೆಲೆ ಎಷ್ಟು ಹಾಗೂ ಸಂಪೂರ್ಣ ಫಿಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Vivo Y51 Pro 5G : ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Vivo Y51 Pro 5G ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಗೊಂಡಿದೆ. ಇದರ 8GB RAM ಮತ್ತು 128GB ಸ್ಟೋರೇಜ್‌ನ ಮೂಲ ಮಾದರಿಯ ಬೆಲೆ ರೂ. 24,999 ಆಗಿದ್ದರೆ, ಸ್ವಲ್ಪ ಹೆಚ್ಚು 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮಾದರಿಯ ಬೆಲೆ ರೂ. 27,999 ಕ್ಕೆ ನಿಗದಿಯಾಗಿದೆ. ಆದರೆ, ಕಂಪನಿಯು ಗ್ರಾಹಕರಿಗಾಗಿ ವಿಶೇಷ ಆಫರ್ ಕೂಡ ನೀಡಿದ್ದು, ಮಾರ್ಚ್ 16ರೊಳಗೆ ಈ ಫೋನ್ ಖರೀದಿಸಿದವರಿಗೆ ರೂ. 2,500 ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದೆ. ಈ ಸ್ಮಾರ್ಟ್‌ಫೋನ್ ಮಾರ್ಚ್ 11ರಿಂದ Flipkart ಹಾಗೂ Vivo ಇಂಡಿಯಾ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಿದೆ ಮತ್ತು Festive Red ಮತ್ತು Noble Gold ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತದೆ.
Vivo Y51 Pro 5G : ಪ್ರಮುಖ ವೈಶಿಷ್ಟ್ಯಗಳು
ಫೀಚರ್‌ಗಳ ವಿಚಾರಕ್ಕೆ ಬಂದರೆ, Vivo Y51 Pro 5G ಫೋನ್‌ನಲ್ಲಿ 6.75 ಇಂಚಿನ LCD ಡಿಸ್ಪ್ಲೇ ಇದ್ದು, 720×1570 ಪಿಕ್ಸೆಲ್ ರೆಸಲ್ಯೂಷನ್ ಮತ್ತು ಗರಿಷ್ಠ 120Hz ರಿಫ್ರೆಶ್ ರೇಟ್ ನೀಡುತ್ತದೆ. ಜೊತೆಗೆ 83 ಶೇಕಡಾ NTSC ಕಲರ್ ಕವರೇಜ್ ನೀಡಲಾಗಿದೆ. ಹಿಂಭಾಗದಲ್ಲಿ ಕಾಂಪೋಸಿಟ್ ಪ್ಲಾಸ್ಟಿಕ್ ಬ್ಯಾಕ್ ಪ್ಯಾನೆಲ್ ನೀಡಲಾಗಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಹಾಗೂ IP69 ರೇಟಿಂಗ್ ಕೂಡ ಇರುವುದಾಗಿ ಕಂಪನಿ ತಿಳಿಸಿದೆ.

ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್‌ಫೋನ್‌ಗೆ 4nm ಆಧಾರಿತ MediaTek Dimensity 7360-Turbo ಆಕ್ಟಾ-ಕೋರ್ ಪ್ರೊಸೆಸರ್ ನೀಡಲಾಗಿದೆ. ಈ ಚಿಪ್‌ಸೆಟ್‌ನಲ್ಲಿ ನಾಲ್ಕು ಪರ್ಫಾರ್ಮೆನ್ಸ್ ಕೋರ್‌ಗಳು ಗರಿಷ್ಠ 2.5GHz ವೇಗದಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಇನ್ನೂ ನಾಲ್ಕು ಎಫಿಶಿಯನ್ಸಿ ಕೋರ್‌ಗಳು 2.0GHz ವೇಗದಲ್ಲಿ ಕೆಲಸ ಮಾಡುತ್ತವೆ. ಫೋನ್‌ನಲ್ಲಿ 8GB LPDDR4x RAM ಮತ್ತು ಗರಿಷ್ಠ 256GB UFS 3.1 ಸ್ಟೋರೇಜ್ ವ್ಯವಸ್ಥೆ ನೀಡಲಾಗಿದೆ, ಇದು ವೇಗವಾದ ಮತ್ತು ಉತ್ತಮ ಮಲ್ಟಿಟಾಸ್ಕಿಂಗ್ ಅನುಭವವನ್ನು ಒದಗಿಸುತ್ತದೆ ಎನ್ನಲಾಗಿದೆ.
ಫೋಟೋಗ್ರಫಿ ವಿಭಾಗದಲ್ಲಿ Vivo Y51 Pro 5G ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ f/2.0 ಅಪರ್ಚರ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು f/2.4 ಅಪರ್ಚರ್‌ನೊಂದಿಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಮುಂಭಾಗದಲ್ಲಿ f/2.05 ಅಪರ್ಚರ್‌ನ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 4K ರೆಸಲ್ಯೂಷನ್ ವಿಡಿಯೋ ರೆಕಾರ್ಡಿಂಗ್ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.
ಬ್ಯಾಟರಿ ವಿಚಾರದಲ್ಲಿ ಈ ಫೋನ್ ವಿಶೇಷವಾಗಿದ್ದು, 7,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಇದಕ್ಕೆ 44W ವೈರ್‌ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಆಂಡ್ರಾಯ್ಡ್ 16 ಆಧಾರಿತ ಒರಿಜಿನ್ OS 6 ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, Bluetooth 5.4, USB Type-C ಪೋರ್ಟ್ ಮತ್ತು GPS ಸೇರಿದಂತೆ BeiDou, GLONASS, Galileo ಹಾಗೂ QZSS ನ್ಯಾವಿಗೇಶನ್ ವ್ಯವಸ್ಥೆಗಳ ಬೆಂಬಲ ನೀಡಲಾಗಿದೆ.
ಇದಲ್ಲದೆ, ಫೋನ್‌ನಲ್ಲಿ accelerometer, ambient light sensor, proximity sensor, e-compass ಮತ್ತು gyroscope ಸೇರಿದಂತೆ ಹಲವು ಸೆನ್ಸರ್‌ಗಳು ಸೇರಿವೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗಿದೆ. ಗಾತ್ರದ ದೃಷ್ಟಿಯಿಂದ ಈ ಸ್ಮಾರ್ಟ್‌ಫೋನ್ 166.6 × 78.4 × 8.39 ಮಿಮೀ ಅಳತೆಯಿದ್ದು, ತೂಕ ಸುಮಾರು 219 ಗ್ರಾಂ ಆಗಿದೆ. ಒಟ್ಟಾರೆಯಾಗಿ, ದೊಡ್ಡ ಬ್ಯಾಟರಿ, 120Hz ಡಿಸ್ಪ್ಲೇ ಮತ್ತು 5G ಬೆಂಬಲದಂತಹ ವೈಶಿಷ್ಟ್ಯಗಳೊಂದಿಗೆ Vivo Y51 Pro 5G ಮಧ್ಯಮ ಬೆಲೆಯ ವಿಭಾಗದಲ್ಲಿ ಗಮನ ಸೆಳೆಯುವ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ.


Click it and Unblock the Notifications








