ಭಾರತದ ಮಾರುಕಟ್ಟೆಗೆ Vivo Y58 5G ಎಂಟ್ರಿ: ಅಗ್ಗದ ಬೆಲೆ, ಕಣ್ಣು ಕುಕ್ಕುವ ಫೀಚರ್ಸ್!
ವಿವೋ (Vivo) ಈಗಷ್ಟೇ ಭಾರತದಲ್ಲಿ ತನ್ನ ಬಹುನಿರೀಕ್ಷಿತ 'Y' ಸರಣಿಯ Vivo Y58 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಭರವಸೆ ನೀಡಿದಂತೆ, ಈ ಫೋನ್ ಸ್ನಾಪ್‌ಡ್ರಾಗನ್ 4 Gen 2 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 8GB RAM ಜೊತೆಗೆ 8GB ಹೆಚ್ಚುವರಿ ವರ್ಚುವಲ್ RAM ಅನ್ನು ಪಡೆದಿದೆ. ಇದು 6.72 ಇಂಚಿನ FHD+ 120Hz LCD ಡಿಸ್ಲ್ಪೇ ಮತ್ತು 1024 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಮೊಬೈಲ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ? ಬೆಲೆ ಎಷ್ಟು? ಅನ್ನೋದನ್ನು ತಿಳಿಯೋಣ ಬನ್ನಿ.
ವಿವೋ ಸ್ಮಾರ್ಟ್‌ಫೋನ್‌ಗಳು ತನ್ನ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿದೆ. ಮೊಬೈಲ್ ಪ್ರಿಯರು ವಿವೋ ಸರಣಿಯ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುತ್ತಾರೆ. ಇದೀಗ, Vivo 'Y' ಸರಣಿಯ ನೂತನ vivo Y58 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಈ ಸ್ಮಾರ್ಟ್‌ಫೋನ್ 50 MP ಮುಖ್ಯ ಕ್ಯಾಮೆರಾ ಮತ್ತು 2MP ಬೊಕೆ ಕ್ಯಾಮೆರಾ, ಸ್ಮಾರ್ಟ್ ಡೈನಾಮಿಕ್ ಲೈಟ್, AI ಪೋರ್ಟ್ರೇಟ್ ಜೊತೆಗೆ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದಿದೆ. ಈ ಬ್ಯಾಟರಿ ನಾಲ್ಕು ವರ್ಷಗಳ ಬಾಳಿಕೆ ಬರಲಿದೆ ಎಂದು ಕಂಪನಿ ಭರವಸೆ ನೀಡಿದೆ. ಮತ್ತು 24 dimension ಭದ್ರತಾ ರಕ್ಷಣೆಯೊಂದಿಗೆ ಬರುತ್ತದೆ.
ಕಣ್ಣು ಕುಕ್ಕುವ ಫೀಚರ್ಸ್!
- ಡಿಸ್‌ಪ್ಲೇ: 6.72 ಇಂಚಿನ (2408×1080 ಪಿಕ್ಸೆಲ್‌ಗಳು) 120Hz ರಿಫ್ರೆಶ್ ರೇಟ್‌ನೊಂದಿಗೆ ಪೂರ್ಣ HD+ LCD ಸ್ಕ್ರೀನ್, 1024 nits ಗರಿಷ್ಠ ಬ್ರೈಟ್‌ನೆಸ್, 83% NTSC ಕಲರ್ ಗ್ಯಾಮಟ್
- ಪ್ರೊಸೆಸರ್: ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 Gen 2 4nm ಮೊಬೈಲ್ ಪ್ಲಾಟ್‌ಫಾರ್ಮ್ (2.2 GHz x 2 A78-ಆಧಾರಿತ +2GHz x 6 A55-ಆಧಾರಿತ Kryo CPUಗಳು) ಜೊತೆಗೆ Adreno 613 GPU. Funtouch OS 14 ಜೊತೆಗೆ Android 14
- ಸ್ಟೋರೇಜ್: 8GB LPDDR4x RAM, 128GB (UFS 2.2) ಸ್ಟೋರೇಜ್, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
- ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)
- ಕ್ಯಾಮೆರಾ: 50MP (f/1.8 ದ್ಯುತಿರಂಧ್ರದೊಂದಿಗೆ) ಹಿಂಭಾಗದ ಕ್ಯಾಮರಾ, 2MP (f/2.4 ದ್ಯುತಿರಂಧ್ರದೊಂದಿಗೆ) ಪೋರ್ಟ್ರೇಟ್ ಕ್ಯಾಮೆರಾ, LED ಫ್ಲ್ಯಾಷ್
- ಸೆಲ್ಫಿ ಶೂಟರ್: 8MP (f/2.05 ದ್ಯುತಿರಂಧ್ರದೊಂದಿಗೆ) ಫ್ರಂಟ್ ಕ್ಯಾಮೆರಾ
- ತೂಕ: 165.70x76x7.99 (ಸುಂದರ್ಬನ್ಸ್ ಗ್ರೀನ್)/ 8.09 (ಹಿಮಾಲಯನ್ ಬ್ಲೂ). ತೂಕ: 199g
- ಕನೆಕ್ಟಿವಿಟಿ ಆಯ್ಕೆಗಳು: 5G SA/NSA (n1/n3/n5/n8/n28B/n40/n77/n78 ಬ್ಯಾಂಡ್‌ಗಳು), ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS/ GLONASS/ ಬೀಡೌ, USB Typeou, USB -ಸಿ
- ಬ್ಯಾಟರಿ: 6000mAh ಬ್ಯಾಟರಿ ಜೊತೆಗೆ 44W ಫಾಸ್ಟ್ ಚಾರ್ಜಿಂಗ್
- ಇತರೆ ಫೀಚರ್ಸ್: 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, ಧೂಳು ಮತ್ತು ನೀರು ನಿರೋಧಕ (IP64), ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್
vivo Y58 5G ಬೆಲೆ ಎಷ್ಟು? ಎಲ್ಲಿ ಖರೀದಿಸಬೇಕು?
vivo Y58 5G ಮೊಬೈಲ್ ಹಿಮಾಲಯನ್ ಬ್ಲೂ (Himalayan Blue) ಮತ್ತು ಸುಂದರಬನ್ಸ್ ಗ್ರೀನ್ (Sundarbans Green) ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್‌ನ 8GB + 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 19,499 ರೂ. ಇದೆ. vivo Y58 5G ಫೋನ್ ಇಂದಿನಿಂದ Flipkart, vivo India e-Store ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಲು ಲಭ್ಯವಿದೆ.

ಮೊದಲ ಸೇಲ್‌ನಲ್ಲೇ ಭರ್ಜರಿ ಆಫರ್
ಇನ್ನೂ vivo Y58 5G ಮೊಬೈಲ್ ಖರೀದಿಯ ಮೇಲೆ ನೀವು ಲಾಂಚ್ ಆಫರ್‌ಗಳನ್ನು ಪಡೆಯಬಹುದು. ಎಸ್‌ಬಿಐ ಕಾರ್ಡ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ ಫಸ್ಟ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕಾರ್ಡ್ ಬಳಿಸಿದರೆ 1,500 ರೂ. ಕ್ಯಾಶ್‌ಬ್ಯಾಕ್ ಸಿಗುತ್ತದೆ. V Shield ಪ್ರೊಟೆಕ್ಷನ್ ಮೇಲಿನ ಕೊಡುಗೆಗಳ ಜೊತೆಗೆ ದಿನಕ್ಕೆ ಕೇವಲ 35 ರೂಪಾಯಿಗಳ ಬೆಲೆಯಲ್ಲಿ vivo Y58 5G ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಒಟ್ಟಾರೆ, ವಿವೋ ಎಲ್ಲಾ ವರ್ಗದ ಜನರಿಗೂ ಅವರವರ ಬಜೆಟ್ ತಕ್ಕನಾದ ಸ್ಮಾರ್ಟ್‌ಫೋನ್‌ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಕೆಲವರಂತು ವಿವೋ ಸಂಸ್ಥೆಯ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಎದುರು ನೋಡುತ್ತಾರೆ. ಇದೀಗ, ವಿವೋ ಪ್ರಿಯರಿಗಾಗಿ ನೂತನ vivo Y58 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಗ್ರಾಹಕರು ಬಜೆಟ್ ಬೆಲೆಯಲ್ಲಿ ಈ ಫೋನ್ ಕೊಳ್ಳಲು ಮುಗಿಬಿದಿದ್ದಾರೆ.


Click it and Unblock the Notifications








