Home
ಮೊಬೈಲ್

ಭಾರತದಲ್ಲಿ ಶೀಘ್ರವೇ Vivo Y58 5G ಸ್ಮಾರ್ಟ್‌ಫೋನ್ ಲಾಂಚ್ ! ಫೀಚರ್ಸ್‌ ಲೀಕ್ ?

ತನ್ನ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಲ್ಲಿ ವಿವೋ (Vivo) ಸ್ಮಾರ್ಟ್‌ಫೋನ್‌ಗಳು (Smartphones) ಯಶಸ್ವಿಯಾಗಿವೆ. ಮೊಬೈಲ್ ಮಾರುಕಟ್ಟೆಯಲ್ಲಿ ಈ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಬೇಡಿಕೆ ಇದೆ ಹಾಗೂ ತನ್ನದೇ ಆದ ಗ್ರಾಹಕರ ಬಳಗವನ್ನೇ ಹೊಂದಿವೆ. ಎಲ್ಲಾ ವರ್ಗದ ಜನರಿಗೂ ಅವರವರ ಬಜೆಟ್‌ ತಕ್ಕನಾದ ಸ್ಮಾರ್ಟ್‌ಫೋನ್‌ಗಳನ್ನು ನೀಡುವಲ್ಲಿಯೂ ಈ ಸಂಸ್ಥೆ ಯಶಸ್ವಿಯಾಗಿದೆ. ಕೆಲವರಂತು ಒಪ್ಪೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುವುದನ್ನ ಕಾದು ಖರೀದಿಸುವುದನ್ನು ನೋಡಿದ್ದೇವೆ ಇದೀಗ ಒಪ್ಪೋ ಸಂಸ್ಥೆ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್ ಮಾಡಲಿದೆ ಎಂಬ ಕುರಿತು ವದಂತಿಗಳು ಹರಿದಾಡುತ್ತಿದೆ.

ಹೌದು, Vivo Y58 5G ಸರಣಿಯ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಭಾರತದಲ್ಲಿ ಲಾಂಚ್ ಮಾಡಲಿದೆ ಎಂದು ವದಂತಿಗಳು ಹರಿದಾಡುತ್ತಿವೆ. ಚೀನೀ ಮೂಲದ ಟೆಕ್ ಬ್ರ್ಯಾಂಡ್ ಈ ನೂತನ Y ಸರಣಿಯ ಸ್ಮಾರ್ಟ್‌ಫೋನ್ ಆಗಮನವನ್ನು ಇನ್ನೂ ದೃಢೀಕರಿಸಿಲ್ಲ, ಆದರೆ ಅದಕ್ಕಿಂತ ಮುಂಚಿತವಾಗಿ ಅದರ ಮಾರ್ಕೆಟಿಂಗ್ ಪೋಸ್ಟರ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. Vivo Y58 5G ಇದು 8GB RAM ಜೊತೆಗೆ ಸ್ನಾಪ್‌ಡ್ರಾಗನ್ 4 Gen 2 SoC ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ. ಇದು 50 ಮೆಗಾಪಿಕ್ಸೆಲ್ ಡ್ಯುಯಲ್ ಬ್ಯಾಕ್‌ ಕ್ಯಾಮೆರಾ ಘಟಕ ಮತ್ತು IP64 ರೇಟೆಡ್ ಬಿಲ್ಟ್ ಅನ್ನು ಪಡೆಯಬಹುದು. Vivo Y58 5G 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆ ಇದೆ.

ಭಾರತದಲ್ಲಿ ಶೀಘ್ರವೇ  Vivo Y58 5G ಸ್ಮಾರ್ಟ್‌ಫೋನ್ ಲಾಂಚ್ !

AN ಲೀಕ್ಸ್ (@LeaksAn1) ಅವರು ವಿವೋ ಸಂಸ್ಥೆಯ ಮುಂಬರಲಿರುವ Vivo Y58 5G ಯ ಮಾರ್ಕೆಟಿಂಗ್ ಪ್ರಾಡೆಕ್ಟ್‌ ಅನ್ನು ಎಕ್ಸ್‌ ಮೂಲಕ ಪೋಸ್ಟ್ ಮಾಡಿದ್ದು, ಅದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಬಿಡುಗಡೆಯಾಗಿರುವ ರೆಂಡರ್‌ಗಳು ಸ್ಮಾರ್ಟ್‌ಫೋನ್ ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ತೋರಿಸಿದೆ ಮತ್ತು ಸ್ವಲ್ಪ ಬಾಗಿದ ಅಂಚುಗಳೊಂದಿಗೆ ವೃತ್ತಾಕಾರದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅನ್ನು ಬಹಿರಂಗಪಡಿಸಿದೆ. ಸೆಲ್ಫಿ ಶೂಟರ್ ಅನ್ನು ಇರಿಸಲು ಡಿಸ್ಪ್ಲೇ ಮೇಲೆ ಪಂಚ್‌ ಹೋಲ್ ಕಟೌಟ್ ಅನ್ನು ಒಳಗೊಂಡಿರುವುದು ಕಂಡುಬರುತ್ತದೆ.

Vivo Y58 5G ನಿರೀಕ್ಷಿತ ಫೀಚರ್ಸ್‌:

ಸೋರಿಕೆಯಾದ ಮಾಹಿತಿ ಪ್ರಕಾರ, Vivo Y58 5G ಇದು 6.72 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ 120Hz ಮತ್ತು 1,024nits ಗರಿಷ್ಠ ಬ್ರೈಟ್‌ನೆಸ್‌ನ ರಿಫ್ರೆಶ್ ರೇಟ್‌ ಜೊತೆಗೆ ಬರುವ ನಿರೀಕ್ಷೆ ಇದೆ. ಹುಡ್ (HOOD) ಅಡಿಯಲ್ಲಿ ಹ್ಯಾಂಡ್‌ಸೆಟ್ ಅನ್ನು 8GB RAM ಮತ್ತು 128GB ಸ್ಟೋರೇಜ್‌ ಜೊತೆಗೆ ಬರಲಿದೆ ಹಾಗೂ 1TB ವರೆಗಿನ ವಿಸ್ತರಣೆ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಹಾಗೂ ಸ್ನಾಪ್‌ಡ್ರಾಗನ್ 4 Gen 2 SoC ಮೂಲಕ ಚಾಲಿತಗೊಳಿಸಬಹುದು. ಇದು 8GB ವರೆಗೆ ವಿಸ್ತೃತ RAM ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಕ್ಯಾಮೆರಾ:

ಫೋಟೋಗಳು ಮತ್ತು ವೀಡಿಯೊಗಳಿಗಾಗಿ Vivo Y58 5G ಈ ಮೊಬೈಲ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಶೂಟರ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿರುವ ಸಾಧ್ಯತೆ ಇದೆ. ಇದು 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟ್‌ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಹ್ಯಾಂಡ್‌ಸೆಟ್ ಡ್ಯುಯಲ್ ಸ್ಪೀಕರ್‌ಗಳು ಮತ್ತು ದೃಢೀಕರಣಕ್ಕಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.

ಸೋರಿಕೆಯಾದ ಮಾಹಿತಿಯ ಪ್ರಕಾರ, Vivo Y58 5G ಈ ಸ್ಮಾರ್ಟ್‌ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Rumours are rife that Vivo will launch one of its upcoming Vivo Y58 5G series smartphones in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+