ವಿವೋ ವೈ81 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ..!

|

ಭಾರತದ ನಂಬರ್ 3 ನೇ ಸ್ಥಾನದಲ್ಲಿರುವ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಅಂದರೆ ವಿವೋ. ಇದೀಗ ವಿವೋ ಸಂಸ್ಥೆ ತನ್ನ ಪಬ್ಲಿಸಿಟಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಬಯಸಿದಂತೆ ಕಾಣುತ್ತಿದೆ. ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಿದಂತಿದೆ. ಹೌದು ವಿವೋ ವೈ81 ಫೋನಿನ ಬೆಲೆಯನ್ನು ಇಳಿಕೆ ಮಾಡಿ ಮಾರುಕಟ್ಟೆಯಲ್ಲಿರುವ ಹಲವಾರು ಇತರೆ ಕಂಪೆನಿ ಫೋನ್ ಗಳ ಜೊತೆಗೆ ಸ್ಪರ್ಧೆಗೆ ನಿಲ್ಲುತ್ತಿದೆ.

ವಿವೋ ವೈ81 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ..!

ವಿವೋ ಫೋನ್ ಗಳು ಒಂದಾದ ಮೇಲೊಂದರಂತೆ ಬಿಡುಗಡೆಗೊಳ್ಳುತ್ತಿದೆ ಮತ್ತು ಅದರ ಬೆಲೆಯನ್ನು ಭಾರತದಲ್ಲಿ ಕಡಿತಗೊಳಿಸಿ ಆಕರ್ಷಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ವಿವೋ ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ.ನೂತನವಾಗಿ ಬಿಡುಗಡೆಗೊಂಡಿದ್ದ ವಿವೋ ವೈ81 ಫೋನಿನ ಬೆಲೆಯನ್ನು ಈಗ ಕಡಿಮೆಗೊಳಿಸಲಾಗಿದೆ.

ಮೂಲ ಬೆಲೆ 12,990 ರೂ.

ಮೂಲ ಬೆಲೆ 12,990 ರೂ.

ಅಗಸ್ಟ್ ನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಂಡಿದ್ದಾಗ ಈ ಫೋನಿನ ಬೆಲೆ 12,990 ರುಪಾಯಿಗಳಾಗಿತ್ತು. ಇದೀಗ 1000 ರುಪಾಯಿ ರಿಯಾಯಿತಿಯನ್ನು ನೀಡಲಾಗಿದ್ದು ನೇರವಾಗಿ ಕಂಪೆನಿಯೇ ಇಳಿಕೆ ಮಾಡಿದ ಬೆಲೆ ಇದಾಗಿರುತ್ತದೆ ಮತ್ತು 11,990 ರುಪಾಯಿಗೆ ವಿವೋ ವೈ81 ಫೋನನ್ನು ಖರೀದಿಸುವ ಅವಕಾಶ ಗ್ರಾಹಕರಿಗಿದೆ.

ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ

ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ

ಬೆಲೆ ಕಡಿಮೆಯಾದ ನಂತರ ಈ ವಿವೋ ಫೋನ್ ಮಾರ್ಕೆಟ್ ನಲ್ಲಿರುವ ಇತರೆ ಕೆಲವು ಫೋನ್ ಗಳಾದ ಶಿಯೋಮಿ ರೆಡ್ಮಿ ನೋಟ್ 5, ಹಾನರ್ 9ಎನ್, ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ಮತ್ತು ರಿಯಲ್ ಮಿ2 ಗಳ ಜೊತೆಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಇದಿಷ್ಟೇ ಅಲ್ಲದೆ ಅಮೇಜಾನ್ ಇಂಡಿಯಾ ಮತ್ತು ವಿವೋ ಅಧಿಕೃತ ಸೈಟ್ ಗಳಲ್ಲಿ ರಿಯಾಯಿತಿ ಬೆಲೆಯಲ್ಲಿ ವಿವೋ ಫೋನ್ ಈಗ ಮಾರಾಟಕ್ಕೆ ಲಭ್ಯವಿದೆ.

ಮೂರನೇ ಅತ್ಯಂತ ದೊಡ್ಡ ಬ್ರಾಂಡ್

ಮೂರನೇ ಅತ್ಯಂತ ದೊಡ್ಡ ಬ್ರಾಂಡ್

ಇತ್ತೀಚೆಗಿನ ವರದಿಯ ಪ್ರಕಾರ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ಅತ್ಯಂತ ದೊಡ್ಡ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ ಮತ್ತು ಈ ಹಂತಕ್ಕೆ ವಿವೋ ಫೋನ್ ತಲುಪಲು ಕಾರಣ ಅದು ಸೇಲ್ ಮಾಡುವ ಮಿಡ್-ರೇಂಜಿನ ಮತ್ತು ಪ್ರೀಮಿಯಂ ಮಿಡ್ ರೇಂಜಿನ ಸ್ಮಾರ್ಟ್ ಫೋನ್ ಗಳಾಗಿದೆ. ಹೀಗೆ ಬೆಲೆ ಕಡಿಮೆ ಮಾಡಿ ವಿವೋ ಫೋನಿನ ಮಾರಾಟ ಅಧಿಕವಾಗಬಹುದು ಆದರೆ ಆ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿನ ಇತರೆ ಫೋನ್ ಗಳ ಸ್ಪರ್ಧೆಯೂ ಕೂಡ ಹೆಚ್ಚಾಗಿಯೇ ಇದೆ.

ವಿವೋ ವೈ81 ವೈಶಿಷ್ಟ್ಯತೆಗಳು

ವಿವೋ ವೈ81 ವೈಶಿಷ್ಟ್ಯತೆಗಳು

ವಿವೋ ವೈ81 ಫೋನಿನ ವೈಶಿಷ್ಟ್ಯತೆಗಳನ್ನು ಪುನಃ ನಿಮಗೆ ನೆನಪಿಸುವುದಾದರೆ ವಿವೋ ವೈ81 6.22 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು ಸ್ಕ್ರೀನಿನ ಮೇಲ್ಬಾಗದಲ್ಲಿ ದೊಡ್ಡ ನಾಚ್ ಇದೆ.ತೆಳುವಾದ ಬೇಝಲ್ ನ್ನು ಬದಿಗಳಲ್ಲಿ ಮತ್ತು ಕೆಳಭಾಗದಲ್ಲಿ ಹೊಂದಿದೆ. ಮಿಡ್ ರೇಂಜ್ ಸ್ಮಾರ್ಟ್ ಫೋನ್ ಆಗಿರುವುದರಿಂದಾಗಿ ಪ್ಲಾಸ್ಟಿಕ್ ಮೇಲ್ಮೈಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯೋ ಟೆಕ್ ಹೇಲಿಯೋ ಪಿ22 ಪ್ರೊಸೆಸರ್ 3ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯೊಂದಿಗೆ ಪೇರ್ ಆಗಿದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸುವುದಾದರೆ 256ಜಿಬಿ ವರೆಗೆ ಇದು ಸಹಕರಿಸುತ್ತದೆ.

ಕ್ಯಾಮೆರಾ

ಕ್ಯಾಮೆರಾ

ಕ್ಯಾಮರಾ ವಿಭಾಗದಕ್ಕೆ ಬಂದರೆ 13ಎಂಪಿ ಪ್ರೈಮರಿ ಕ್ಯಾಮರಾವು ಹಿಂಭಾಗದಲ್ಲಿ f/2.2 ಅಪರ್ಚರ್ ನ್ನು ಹೊಂದಿದೆ ಮತ್ತು PDAF ಕೂಡ ಇದೆ. ಮುಂಭಾಗದಲ್ಲಿ 5ಎಂಪಿ ಸೆಲ್ಫೀ ಕ್ಯಾಮರಾವಿದ್ದು f/2.2 ಅಪರ್ಚರ್ ನ್ನೇ ಹೊಂದಿದೆ. ಕನೆಕ್ಟಿವಿಟಿಯಲ್ಲಿ ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಡುಯಲ್ ಸಿಮ್ ಗೆ ಬೆಂಬಲ ನೀಡುತ್ತದೆ. ಆಂಡ್ರಾಯ್ಡ್ 8.1 ಓರಿಯೋ ನಲ್ಲಿ ರನ್ ಆಗುತ್ತದೆ ಮತ್ತು ಅದರ ಜೊತೆಗೆ ಫನ್ ಟಚ್ ಓಎಸ್ 4.0 ಇದೆ. ಫಿಸಿಕಲ್ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಇದು ಒಳಗೊಂಡಿಲ್ಲ. ಹಾಗಾಗಿ ನೀವು ಡಿವೈಸ್ ಗೆ ಪ್ಯಾಟರ್ನ್ ಇಲ್ಲವೇ ಪಾಸ್ ವರ್ಡ್ ಅನ್ ಲಾಕ್ ನ್ನೇ ಬಳಸಬೇಕಾಗುತ್ತದೆ. 3260mAh ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದೆ.

Best Mobiles in India

English summary
Vivo Y81 gets Rs. 1,000 price cut; available at Rs. 11,990. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X