ವಿವೊ ಕಂಪೆನಿಗೆ ಪುನರ್ಜನ್ಮ ನೀಡಲಿದೆಯೇ 12,999 ರೂ.ಗಳ 'ವಿವೋ ವೈ 83'!!

|

ಇತ್ತೀಚೆಗೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸೊರಗಿರುವ ವಿವೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಮತ್ತೊಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದು ಸೇರ್ಪಡೆಯಾಗಿದೆ. ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ 'ವಿವೋ ವೈ 83' ಸ್ಮಾರ್ಟ್‌ಫೋನಿನ ನೂತನ ವೆರಿಯಂಟ್ ಫೋನ್ ಒಂದು ಭಾರತಕ್ಕೆ ಕಡಿಮೆ ಬೆಲೆಯಲ್ಲಿ ಮತ್ತೆ ಕಾಲಿಟ್ಟಿದೆ.

ಹೌದು, ವಿವೊ ಕಂಪೆನಿ ಬಜೆಟ್ ಸ್ಮಾರ್ಟ್‌ಫೋನ್ 'ವಿವೋ ವೈ83' ಇದೀಗ ನೂತನ ವೆರೆಯಂಟ್‌ನಲ್ಲಿ ಕೇವಲ 12,999 ರೂ.ಗಳಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಐಫೋನ್ x ಹೋಲುವಂತಹ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿರುವ ಈ ನೂತನ ಸ್ಮಾರ್ಟ್‌ಫೋನ್ ವಿವೊ ಆನ್ಲೈನ್ ಸ್ಟೋರ್, ಫ್ಲಿಫ್‌ಕಾರ್ಟ್, ಅಮೇಜಾನ್‌ ಡಾಟ್ ಕಾಮ್‌ಗಳಲ್ಲಿ ಲಭ್ಯವಿದೆ.

ವಿವೊ ಕಂಪೆನಿಗೆ ಪುನರ್ಜನ್ಮ ನೀಡಲಿದೆಯೇ 12,999 ರೂ.ಗಳ 'ವಿವೋ ವೈ 83'!!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ6, ಒಪ್ಪೋ ಎಫ್5, ಶಿಯೋಮಿ ರೆಡ್ಮಿ ವೈ2 ಮತ್ತು ಹಾನರ್ 7ಎಕ್ಸ್ ಸ್ಮಾರ್ಟ್‌ಫೋನ್‌ಗಳಿಗೆ ಈ ನೂತನ ವಿವೋ ವೈ83' ವೆರಿಯಂಟ್ ಸ್ಮಾರ್ಟ್‌ಫೋನ್ ಪ್ರತಿಸ್ಪರ್ಧಿಯಾಗಿದೆ. ಹಾಗಾದರೆ, 12,999 ರೂ. ಬೆಲೆಯ ನೂತನ 'ವಿವೋ ವೈ 83' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬ ಪೂರ್ಣ ಮಾಹಿತಿಗಳನ್ನು ಮುಂದೆ ತಿಳಿಯಿರಿ.

6.22-ಇಂಚಿನ ಹೆಚ್ ಡಿ+ ಡಿಸ್‌ಪ್ಲೇ!

6.22-ಇಂಚಿನ ಹೆಚ್ ಡಿ+ ಡಿಸ್‌ಪ್ಲೇ!

ವಿವೋ ವೈ 83 6.22-ಇಂಚಿನ ಹೆಚ್ ಡಿ+ ಸ್ಕ್ರೀನ್ ಜೊತೆಗೆ 720x1520 ಪಿಕ್ಸಲ್ ರೆಸೊಲ್ಯೂಷನ್ ಮತ್ತು 19:9 ಅನುಪಾತದ ಡಿಸ್ಪ್ಲೇ ಹೊಂದಿದೆ. ಮತ್ತು ಈ ಡಿಸ್ಪ್ಲೇ ಗೋರಿಲ್ಲಾ ಗ್ಲಾಸ್ ನಿಂದ ಸುರಕ್ಷಿತವಾಗಿದೆ. ಆಪಲ್ ಎಕ್ಸ್ ನೋಚ್ ರೀತಿಯ ಡಿಸ್‌ಪ್ಲೇ ಹೊಂದಿರುವ ಈ ಫೋನ್ ವಿಡಿಯೋ ಮತ್ತು ಗೇಮಿಂಗ್ ಪ್ರಿಯರಿಗೆ ಒಂದು ಉತ್ತಮ ಸ್ಮಾರ್ಟ್‌ಫೋನ್ ಆಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಂ ಮೂಲಕ ರನ್ ಆಗಲಿದ್ದು, ಕಂಪೆನಿಯ ಸ್ವಂತ UI ಕಸ್ಟಮೈಸ್ಡ್ ಲೇಯರ್ ಇದ್ದು ಫನ್ ಟಚ್ OS ಕೂಡ ಇದೆ.. 2GHz octa-core MediaTek ಪ್ರೊಸೆಸರ್ 3ಜಿಬಿ RAM ನೊಂದಿಗೆ ಪೇರ್ ಆಗಲಿದೆ. ಇದರಲ್ಲಿ 32ಜಿಬಿ ಇಂಟರ್ನಲ್ ಸ್ಟೋರೇಜ್ ಇದ್ದು 256 ಜಿಬಿವರೆಗೆ ಸ್ಟೋರೇಜ್ ಹಿಗ್ಗಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಫೀಚರ್ಸ್?

ಕ್ಯಾಮೆರಾ ಫೀಚರ್ಸ್?

ವಿವೋ ವೈ83ಯಲ್ಲಿ 13ಎಂಪಿ ಪ್ರೈಮರಿ ಕ್ಯಾಮರಾ ಮತ್ತು f/2.2 ದ್ಯುತಿರಂಧ್ರ ಮತ್ತು LED ಫ್ಲ್ಯಾಶ್ ಇದೆ.ಇನ್ನು 8ಎಂಪಿ ಸೆಲ್ಫಿ ಕ್ಯಾಮರಾ ವಿದ್ದು f/2.2 ದ್ಯುತಿರಂದ್ರವು ಸೆಲ್ಫಿಗೆ ಅನುಕೂಲ ವಾಗುವಂತಿದೆ. ಕಂಪೆನಿ ಹೇಳಿಕೆಯ ಪ್ರಕಾರ ಮುಂಭಾಗದ ಕ್ಯಾಮರಾವು AI ಬ್ಯೂಟಿ ವೈಶಿಷ್ಟ್ಯವನ್ನು ಫೋನನ್ನು ಅನ್ ಲಾಕ್ ಮಾಡಲು ಕೂಡ ಇದನ್ನು ಬಳಕೆ ಮಾಡಬಹುದು.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಡುಯಲ್ ಸಿಮ್ ಗೆ ಸಪೋರ್ಟ್ ಮಾಡುವ ಈ ಸ್ಮಾರ್ಟ್ ಫೋನ್ ಗ್ಲಾಸಿ ಮಿರರ್ ಫಿನಿಶ್ ನ ಹಿಂಭಾಗದ ಪೆನಲ್ ಮತ್ತು ಬೆರಳಚ್ಚು ತಂತ್ರಜ್ಞಾನವನ್ನೂ ಇದು ಒಳಗೊಂಡಿದೆ. 155.21x 75.24 x 7.7mm ಮತ್ತು 3,260 mAh ಬ್ಯಾಟರಿ ಮತ್ತು ಮತ್ತು 4G VoLTE, ವೈಫೈ 8, ಬ್ಲೂಟೂತ್ 5 ಮತ್ತು GPS ಕನೆಕ್ಟಿವಿಟಿ ಆಯ್ಕೆಯೂ ಇದೆ.

ಖರೀದಿಸಲು ಯೋಗ್ಯವೆ?

ಖರೀದಿಸಲು ಯೋಗ್ಯವೆ?

ಭಾರತದಲ್ಲಿ ಬಜೆಟ್ ಪ್ರಿಯರು ಇಷ್ಟಪಡುವ ಎಲ್ಲಾ ಫೀಚರ್ಸ್ ಅನ್ನು ವಿವೋ ವೈ83 ಸ್ಮಾರ್ಟ್‌ಪೋನಿನಲ್ಲಿ 12,999 ರೂ.ಗಳಿಗೆ ನೀಡುವ ಮೂಲಕ ವಿವೊ ಕಂಪೆನಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. 12,999 ರೂ. ಪಾವತಿಸಿದರೂ ಸಹ 3GB RAM ಸ್ಮಾರ್ಟ್‌ಪೋನ್ ಇದಾಗಿದೆ ಎಂಬ ಕೊರತೆಯೊಂದನ್ನು ಬಿಟ್ಟರೆ ಈ ಫೋನ್ ಖರೀದಿಸಲು ಯೋಗ್ಯವಾಗಿದೆ.

Best Mobiles in India

English summary
Vivo Y81 With Display Notch, 3,260mAh Battery Launched in India: Price, Specifications, and Features. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X