ವಿವೋ ವೈ91, ವಿವೋ ವೈ91ಐ ಇದೀಗ ಭಾರತದಲ್ಲಿ ಅಗ್ಗ
ಭಾರತದಲ್ಲಿ ವಿವೋ ವೈ91 ಮತ್ತು ವಿವೋ ವೈ91ಐ ಎರಡೂ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಇಳಿಮುಖವಾಗಿದೆ. ಇದೀಗ ಎರಡೂ ಫೋನ್ ಗಳ ಬೆಲೆ 1,500 ರುಪಾಯಿ ಕಡಿಮೆಯಾಗಿದೆ. ಅಂದರೆ ಕ್ರಮವಾಗಿ 6,990 ಮತ್ತು 84900 ರುಪಾಯಿ ಬೆಲೆಗೆ ಈ ಎರಡೂ ಫೋನ್ ಗಳು ಲಭ್ಯವಾಗುತ್ತದೆ.

ವಿವೋ ವೈ91 ಫೋನಿನ ಪ್ರಮುಖ ವೈಶಿಷ್ಟ್ಯತೆಯೆಂದರೆ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್, ವಾಟರ್ ಡ್ರಾಪ್ ಸ್ಟೈಲಿನ ನಾಚ್. 6.22 ಇಂಚಿನ HD+ ಡಿಸ್ಪ್ಲೇ ಮತ್ತು ಮೀಡಿಯಾಟೆಕ್ ಹೆಲಿಯೋ ಪಿ22 ಸಾಕೆಟ್ ವ್ಯವಸ್ಥೆಯನ್ನು ಇದು ಹೊಂದಿದೆ.
ವಿವೋ ವೈ91ಐ ಫೋನಿನ ಬಗ್ಗೆ ಹೇಳುವುದಾದರೆ ಇದರಲ್ಲಿ 6.22 ಇಂಚಿನ HD+ ಡಿಸ್ಪ್ಲೇ ಮತ್ತು ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 ಸಾಕೆಟ್ ವ್ಯವಸ್ಥೆ ಇರಲಿದೆ.

ಭಾರತದಲ್ಲಿ ವಿವೋ ವೈ91, ವಿವೋ ವೈ91ಐ ಬೆಲೆ:
ವಿವೋ ವೈ91 2ಜಿಬಿ+32ಜಿಬಿ ಮಾಡೆಲ್ ನ ಬೆಲೆ ಈ ಮೊದಲು ಭಾರತದಲ್ಲಿ 8,990 ರುಪಾಯಿ ಆಗಿತ್ತು. ಆದರೆ ಸದ್ಯ 8,490 ರುಪಾಯಿ ಬೆಲೆಗೆ ಸಿಗುತ್ತದೆ.ಅಂದರೆ ಈ ಫೋನಿನ ಬೆಲೆಯಲ್ಲಿ 500 ರುಪಾಯಿ ಇಳಿಕೆಯಾಗಿದೆ. ಆನ್ ಲೈನ್ ಸೈಟ್ ಗಳಲ್ಲಿ ಇದುವರೆಗೂ ಈ ಬೆಲೆಯನ್ನು ನಮೂದಿಸಲಾಗಿಲ್ಲ ಆದರೆ ಸದ್ಯದಲ್ಲೇ ಹೊಸ ಬೆಲೆ ಆನ್ ಲೈನ್ ಸ್ಟೋರ್ ಗಳಲ್ಲಿ ಅಪ್ ಡೇಟ್ ಆಗಲಿದ್ದು ಅಮೇಜಾನ್.ಇನ್, ಫ್ಲಿಪ್ ಕಾರ್ಟ್, ಪೇಟಿಎಂ, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಬೇರೆಬೇರೆ ಆಫ್ ಲೈನ್ ಸ್ಟೋರ್ ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಆಫ್ ಲೈನ್ ಸ್ಟೋರ್ ಗಳಲ್ಲೂ ಕೂಡ ಈ ಬೆಲೆ ಇಳಿಕೆ ಆಗಿದೆ ಎಂಬುದನ್ನು ಮುಂಬೈ ಮೂಲಕ ರಿಟೈಲರ್ ಆಗಿರುವ ಮಹೇಶ್ ಟೆಲಿಕಾಂ ಖಾತ್ರಿಗೊಳಿಸಿದೆ.ವಿವೋ ಕೂಡ ಅಧಿಕೃತವಾಗಿ ತನ್ನ 360 ಗೆಡ್ಜೆಟ್ಸ್ ಗಳ ಬೆಲೆಯಲ್ಲಿ ಇಳಿಕೆ ಮಾಡಿರುವ ಬಗ್ಗೆ ತಿಳಿಸಿದೆ. ಇನ್ನು 3ಜಿಬಿ+32ಜಿಬಿ ಮಾಡೆಲ್ ನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. 8,990 ರುಪಾಯಿ ಬೆಲೆಗೆ ನೀವಿದನ್ನು ಖರೀದಿಸಬೇಕಾಗುತ್ತದೆ.

ವಿವೋ ವೈ91ಐ 2ಜಿಬಿ RAM + 32GB ಮಾಡೆಲ್ ನ ಬೆಲೆ ಭಾರತದಲ್ಲಿ 6,990 ರುಪಾಯಿ ಆಗಿದೆ.ಈ ಮೊದಲು ಈ ಫೋನಿನ ಬೆಲೆ 7,490 ರುಪಾಯಿ ಆಗಿತ್ತು. ಆಫ್ ಲೈನ್ ಚಾನಲ್ ಗಳಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಇದೀಗ ಅಮೇಜಾನ್.ಇನ್ ಮತ್ತು ವಿವೋ.ಕಾಮ್ ಗಳಲ್ಲೂ ಖರೀದಿಸುವುದಕ್ಕೆ ಅವಕಾಶವಿದೆ.ಆದರೆ 2ಜಿಬಿ+16ಜಿಬಿ ಮಾಡೆಲ್ ನ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ವಿವೋ ವೈ91ಐ ವೈಶಿಷ್ಟ್ಯತೆಗಳು:
ಡುಯಲ್ ಸಿಮ್(ನ್ಯಾನೋ) ವಿವೋ ವೈ91ಐ ಆಂಡ್ರಾಯ್ಡ್ 8.10 ಓರಿಯೋ ದಲ್ಲಿ ರನ್ ಆಗುತ್ತದೆ ಜೊತೆಗೆ ಫನ್ ಟಚ್ ಓಎಸ್ 4.5 ಮೇಲಿಂದ ಇರುತ್ತದೆ. 6.22-ಇಂಚಿನ HD+ (1520x720 ಪಿಕ್ಸಲ್ಸ್) ಇನ್-ಸೆಲ್ ಡಿಸ್ಪ್ಲೇ ಜೊತೆಗೆ 19:9 ಆಸ್ಪೆಕ್ಟ್ ಅನುಪಾತವಿರುತ್ತದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762R) ಸಾಕೆಟ್ ವ್ಯವಸ್ಥೆ ಇರಲಿದ್ದು 2ಜಿಬಿ RAMನೊಂದಿಗೆ ಪೇರ್ ಆಗಿರುತ್ತದೆ.
ಫೋಟೋ ಮತ್ತು ವೀಡಿಯೋ ಸೌಲಭ್ಯಕ್ಕಾಗಿ ವಿವೋ ವೈ91ಐ ನಲ್ಲಿ ಸ್ಪೋರ್ಟ್ 13-ಮೆಗಾಪಿಕ್ಸಲ್ ಕ್ಯಾಮರಾ ಸೆನ್ಸರ್ ಹಿಂಭಾಗದಲ್ಲಿದ್ದು f/2.2 ಲೆನ್ಸ್ ಮತ್ತು LED ಫ್ಲ್ಯಾಶ್ ವ್ಯವಸ್ಥೆ ಇರಲಿದೆ. 5 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾವು ಮುಂಭಾದಲ್ಲಿದ್ದು ಅದು f/1.8 ಲೆನ್ಸ್ ವ್ಯವಸ್ಥೆಯನ್ನು ಹೊಂದಿದೆ. ವಿವೋ ವೈ91ಐ 16ಜಿಬಿ/ 32ಜಿಬಿ ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆ ಹೊಂದಿರುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೂ ಕೂಡ ಅವಕಾಶವಿದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ 4G LTE, ವೈ-ಫೈ, ಬ್ಲೂಟೂತ್, ವಿ5.0 GPS/ A-GPS,ಎಫ್ಎಂ ರೇಡಿಯೋ, ಮೈಕ್ರೋ ಯುಎಸ್ ಬಿ ಮತ್ತು 3.5ಎಂಎಂ ಹೆಡ್ ಫೋನ್ ಜ್ಯಾಕ್ ಇರಲಿದೆ. ಸೆನ್ಸರ್ ನಲ್ಲಿ ಎಕ್ಸಲೆರೋಮೀಟರ್, ಆಂಬಿಯಂಟ್ ಲೈಟ್, ಗೈರೋಸ್ಕೋಮ್(ವರ್ಚುವಲ್),ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ವ್ಯವಸ್ಥೆ ಇರುತ್ತದೆ. ವೈ91ಐ ನಲ್ಲಿ ವಿವೋ 4,030mAh ಬ್ಯಾಟರಿ ವ್ಯವಸ್ಥೆಯನ್ನು ನೀಡಿದೆ.

ವಿವೋ ವೈ91 ವೈಶಿಷ್ಟ್ಯತೆಗಳು :
ವಿವೋ ವೈ91 3ಜಿಬಿ RAM ವೇರಿಯಂಟ್ ಆಂಡ್ರಾಯ್ಡ್ 8.1 ಓರಿಯೋ ಜೊತೆಗೆ ಫನ್ ಟಚ್ ಓಎಸ್ 4.5 ನಲ್ಲಿ ರನ್ ಆಗುತ್ತದೆ. ಇದರಲ್ಲಿ 6.22-ಇಂಚಿನ HD+ (720x1520 ಪಿಕ್ಸಲ್ಸ್) ಹಾಲೋ ಫುಲ್ ವ್ಯೂ ಡಿಸ್ಪ್ಲೇ ಜೊತೆಗೆ ಡ್ಯೂಡ್ರಾಪ್ ನಾಚ್ ಇದೆ. 88.6% ಸ್ಕ್ರೀನ್ ಟು ಬಾಡಿ ಅನುಪಾತವಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 ಸಾಕೆಟ್ ವ್ಯವಸ್ಥೆ ಜೊತೆಗೆ ಪವರ್ ವಿಆರ್ಜಿಇ320 GPU ಮತ್ತು 3ಜಿಬಿ RAM ಇದೆ.
ಆಪ್ಟಿಕ್ಸ್ ಗಳ ಬಗ್ಗೆ ಹೇಳುವುದಾದರೆ ವಿವೋ ವೈ91 ಸ್ಪೋರ್ಟ್ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿದ್ದು 13 ಮೆಗಾಪಿಕ್ಸಲ್ ಪ್ರೈಮರಿ ಸೆನ್ಸರ್ ಜೊತೆಗೆ f/2.2 ಲೆನ್ಸ್ ಮತ್ತು 2 ಮೆಗಾಪಿಕ್ಸಲ್ ನ ಸೆಕೆಂಡರಿ ಸೆನ್ಸರ್ ಜೊತೆಗೆ f/2.4 ಲೆನ್ಸ್ ವ್ಯವಸ್ಥೆ ಇದೆ. 8-ಮೆಗಾಪಿಕ್ಸಲ್ ಸೆನ್ಸರ್ ವ್ಯವಸ್ಥೆಯು ಮುಂಭಾಗದಲ್ಲಿದ್ದು ಜೊತೆಗೆ f/1.8 ಲೆನ್ಸ್ ಇದ್ದು ಸೆಲ್ಫೀ ತೆಗೆದುಕೊಳ್ಳಲು ಅನುಕೂಲಕರವಾಗಿದೆ.
ಸ್ಟೋರೇಜ್ ವಿಚಾರಕ್ಕೆ ಬಂದರೆ ವಿವೋ ವೈ91 ನಲ್ಲಿ 3ಜಿಬಿ 3ಜಿಬಿ RAM ವೇರಿಯಂಟ್ ನಲ್ಲಿ 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರುತ್ತದೆ. ಅದನ್ನು ನೀವು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ. ಕನೆಕ್ಟಿವಿಟಿ ವಿಚಾರದಲ್ಲಿ ಫೋನಿನಲ್ಲಿ 4G,ವೈಫೈ, ಬ್ಲೂಟೂತ್ ವಿ5.0, GPS/ A-GPS, ಮೈಕ್ರೋ-USB ಪೋರ್ಟ್ ಜೊತೆಗೆ USB OTGಗೆ ಬೆಂಬಲ ಮತ್ತು ಎಫ್ಎಂ ರೇಡಿಯೋಇರುತ್ತದೆ. ಬಿಲ್ಟ್ ಇನ್ ಸೆನ್ಸರ್ ನಲ್ಲಿ ಎಕ್ಸಲೆರೋಮೀಟರ್, ಆಂಬಿಯಂಟ್ ಲೈಟ್ ಸೆನ್ಸರ್, ಫಿಂಗರ್ ಪ್ರಿಂಟ್ ಸೆನ್ಸರ್ ,ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಇರುತ್ತದೆ. ವಿವೋ ವೈ91ನಲ್ಲಿ 4,030mAh ಬ್ಯಾಟರಿ ವ್ಯವಸ್ಥೆ ಇರುತ್ತದೆ.


Click it and Unblock the Notifications








