ಎರಡೂ ಆಂಡ್ರಾಯ್ಡ್ ಗಳ ಪೈಕಿ ನಿಮಗಿಷ್ಟವ್ಯಾವುದು?

Posted By: Staff
ಎರಡೂ ಆಂಡ್ರಾಯ್ಡ್ ಗಳ ಪೈಕಿ ನಿಮಗಿಷ್ಟವ್ಯಾವುದು?
 

ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಮೊಬೈಲ್ ಗಳು ಇತ್ತೀಚೆಗೆ ಹೆಚ್ಚು ಮಾರಾಟವಾಗುತ್ತಿದೆ. ಇದೇ ಅವಕಾಶವನ್ನು ಬಳಸಿಕೊಂಡಿರುವ ವೊಡಾಫೋನ್ ಮತ್ತು ಮೈಕ್ರೊಮ್ಯಾಕ್ಸ್ ಕಂಪನಿ ಗೂಗಲ್ ಆಂಡ್ರಾಯ್ಡ್ ಬೆಂಬಲಿತ  ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ವೊಡಾಫೋನ್ ಸ್ಮಾರ್ಟ್ ಮತ್ತು ಮೈಕ್ರೊಮ್ಯಾಕ್ಸ್ A75 ಎಂಬ ಫೋನ್ ಗಳು ತೆರೆಕಾಣಲು ಸಿದ್ಧಗೊಂಡಿವೆ. ವೊಡಾಫೋನ್ ಸ್ಮಾರ್ಟ್ ಮೊಬೈಲ್ ಗೂಗಲ್ ಆಂಡ್ರಾಯ್ಡ್ v2.2.1 ಆಂಡ್ರಾಯ್ಡ್ ಫ್ರೊಯೊ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಕ್ವಾಲ್ಕಂ ಸ್ನಾಪ್ ಡ್ರಾಗನ್ S1 ಪ್ರೊಸೆಸರ್ ಮತ್ತು ಅಡೆರ್ನೊ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ ಪಡೆದುಕೊಂಡಿದೆ.

ಮೈಕ್ರೊಮ್ಯಾಕ್ಸ್ A75 ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, 650 MHz ಪ್ರೊಸೆಸರ್ ಪಡೆದುಕೊಂಡಿದೆ.

ವೊಡಾಫೋನ್ ಸ್ಮಾರ್ಟ್ ಮೊಬೈಲ್ ವಿಶೇಷತೆ:

* 103.8 x 56.8 x 12.6 ಎಂಎಂ ಸುತ್ತಳತೆ

* 104 ಗ್ರಾಂ ತೂಕ

* 2.8 ಇಂಚಿನ QVGA TFT ಟಚ್ ಸ್ಕ್ರೀನ್ ಡಿಸ್ಪ್ಲೇ

* ಕಾಂಪಾಸ್, ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* 2 ಮೆಗಾ ಪಿಕ್ಸಲ್ ಕ್ಯಾಮೆರಾ

* 150 ಎಂಬಿ ಆಂತರಿಕ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊSD ಕಾರ್ಡ್

* GPRS ಮತ್ತು EDGE ಸಂಪರ್ಕ

* 3ಜಿ ಸಂಪರ್ಕ, 802.11 b/g/n ವೈ-ಫೈ ಬೆಂಬಲಿತ, USB 2.0

* A2DP ಬ್ಲೂಟೂಥ್ v2.1

* ಮೊಬೈಲ್ TV ಅಪ್ಲಿಕೇಶನ್

* ಆಡಿಯೋ ಮತ್ತು ವಿಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸುವ ಮೊಬೈಲ್

Li ion 1200 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 2ಜಿನಲ್ಲಿ 300 ನಿಮಿಷ ಟಾಕ್ ಟೈಂ ಮತ್ತು 3ಜಿನಲ್ಲಿ 270 ನಿಮಿಷ ನೀಡುತ್ತದೆ.

ಮೈಕ್ರೊಮ್ಯಾಕ್ಸ್ A75 ಮೊಬೈಲ್ ವಿಶೇಷತೆ:

* 120 x 63.5 x 10.9 ಎಂಎಂ ಸುತ್ತಳತೆ

* 135.4 ಗ್ರಾಂ ತೂಕ

* ಡ್ಯೂಯಲ್ ಸಿಮ್

* 3.75 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್

* 3.5 ಎಂಎಂ ಆಡಿಯೋ ಜ್ಯಾಕ್

* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊSD ಮೆಮೊರಿ ಕಾರ್ಡ್

* GPRS ಮತ್ತು EDGE ಸಂಪರ್ಕ

* 3ಜಿ ಸಂಪರ್ಕ, DLNA ಮತ್ತು ವೈ-ಫೈ ಹಾಟ್ ಸ್ಪಾಟ್, ವೈ-ಫೈ ಸಂಪರ್ಕ

* 3.15 ಮೆಗಾ ಪಿಕ್ಸಲ್ LED ಫ್ಲಾಶ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್

* ಬ್ಲೂಟೂಥ್ v3.0, ಮೈಕ್ರೊUSB v2.0

* VGA ಸೆಕಂಡರಿ ಕ್ಯಾಮೆರಾ

* ಕಾಂಪಾಸ್, ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* HTML ಮತ್ತು ಅಡಾಬ್ ಫ್ಲಾಶ್ ನ ವೆಬ್ ಬ್ರೌಸರ್

* ಎಫ್ ಎಂ ರೇಡಿಯೋ

* GPS ಜೊತೆ A-GPS ಬೆಂಬಲಿತ

* ಗೂಗಲ್ ಅಪ್ಲಿಕೇಶನ್

Li ion 1300 mAh ಬ್ಯಾಟರಿ ಹೊಂದಿರುವ ಈ ಮ್ಯಾಕ್ಸ್ ಮೊಬೈಲ್ 5 ಗಂಟೆ ಟಾಕ್ ಟೈಂ ನೀಡುತ್ತದೆ.

ಈ ಎಲ್ಲಾ ಹೋಲಿಕೆಗಳನ್ನು ಪರಿಶೀಲಿಸಿದಾಗ ಮ್ಯಾಕ್ಸ್ ಮೊಬೈಲ್ ವೊಡಾಫೋನ್ ಸ್ಮಾರ್ಟ್ ಗಿಂತ ಹೆಚ್ಚು ಆಯ್ಕೆಗಳನ್ನು ಹೊಂದಿದೆ. ವೊಡಾಫೋನ್ ಸ್ಮಾರ್ಟ್ ಮೊಬೈಲ್ ನಲ್ಲಿನ ಮೊಬೈಲ್ ಟಿವಿ ಅಪ್ಲಿಕೇಶನ್ ಪ್ರಯಾಣ ಮಾಡುವಾಗ ಮನರಂಜನೆ ಒದಗಿಸಲಿದೆ. ಎರಡೂ ಮೊಬೈಲ್ ಗಳು ಆಂಡ್ರಾಯ್ಡ್ ಬೆಂಬಲಿತವಾಗಿರುವುದರಿಂದ ಎರಡರ ಕಾರ್ಯ ಕ್ಷಮತೆಯೂ ಉತ್ತಮವಿದೆ ಎನ್ನಬಹುದು.

ವೊಡಾಫೋನ್ ಸ್ಮಾರ್ಟ್ ಮೊಬೈಲ್ ಬೆಲೆ 5,000ರೂ ಆಗಿದ್ದು, ಮೈಕ್ರೊಮ್ಯಾಕ್ಸ್ A75 8,500 ರೂ ಗೆ ದೊರೆಯಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot