Subscribe to Gizbot

ಕಡಿಮೆ ಬೆಲೆಗೆ 3ಜಿ ವೊಡಾಫೋನ್ ಸ್ಮಾರ್ಟ್ ಮೊಬೈಲ್

Posted By: Super
ಕಡಿಮೆ ಬೆಲೆಗೆ 3ಜಿ ವೊಡಾಫೋನ್ ಸ್ಮಾರ್ಟ್ ಮೊಬೈಲ್
 

ವೊಡಾಫೋನ್ ಸಂಪರ್ಕವನ್ನು ಒದಗಿಸುವುದಷ್ಟೇ ಅಲ್ಲದೆ, ತನ್ನದೇ ಹೆಸರಿನಲ್ಲಿ ಅನೇಕ ಮೊಬೈಲ್ ಗಳನ್ನೂ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೆ ನೂತನ ಆಂಡ್ರಾಯ್ಡ್ ಬೆಂಬಲಿತ ಫೋನನ್ನು ಹೊರತರುವುದಾಗಿ ಕಂಪನಿ ಘೋಷಿಸಿದೆ. ವೊಡಾಫೋನ್ ಸ್ಮಾರ್ಟ್ ಎಂಬ ಈ ಫೋನ್ ತಕ್ಕ ಬೆಲೆಗೆ ಅತ್ಯುತ್ತಮ ಆಯ್ಕೆಗಳನ್ನು ಪಡೆಯಲು ಬಯಸುವವರಿಗೆಂದೇ ಹೊರಬರಲಿದೆ.

ಈ ಮೊಬೈಲ್ 3ಜಿ ಬೆಂಬಲಿತವಾಗಿರುವುದರಿಂದ ವೊಡಾಫೋನ್ ನ 3G HSPA ನೆಟ್ ವರ್ಕ್ ಸಾಧ್ಯವಿದೆ. ಇದರಿಂದ ತುಂಬಾ ವೇಗದ ಇಂಟರ್ನೆಟ್ ಸೌಲಭ್ಯವನ್ನು ಬಳಕೆದಾರರು ಪಡೆಯಬಹುದು. ಮೊಬೈಲಿನ ಅತ್ಯುತ್ತಮ ಕಾರ್ಯ ವೈಖರಿಗೆ ಕ್ವಾಲ್ಕಂ ಸ್ನಾಪ್ ಡ್ರಾಗನ್ S1 ಪ್ರೊಸೆಸರ್ ಪಡೆದುಕೊಂಡಿದೆ. 2.2.1 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲಿನಲ್ಲಿ ಇನ್ನೂ ಅನೇಕ ಆಯ್ಕೆಗಳಿವೆ.

ವೊಡಾಫೋನ್ ಸ್ಮಾರ್ಟ್ ವಿಶೇಷತೆ:

* 3ಜಿ ಬೆಂಬಲಿತ

* 2.8 ಇಂಚಿನ ಡಿಸ್ಪ್ಲೇ

* ಟಚ್ ಸ್ಕ್ರೀನ್ ಡಿಸ್ಪ್ಲೇ

* 2 ಮೆಗಾ ಪಿಕ್ಸಲ್ ಕ್ಯಾಮೆರಾ

* 2 ಜಿಬಿ ಮೆಮೊರಿ ಕಾರ್ಡ್

* 32 ಜಿಬಿವರೆಗು ಮೆಮೊರಿ ವಿಸ್ತರಣೆಗೆ ಅವಕಾಶ

* ಮೀಡಿಯ ಪ್ಲೇಯರ್, ಎಫ್ ಎಂ

ತಂತ್ರಜ್ಞಾನ ಬಯಸುವ ಯುವಜನರಿಗೆಂದೇ ವಿಶೇಷವಾಗಿ ರೂಪಿಸಲಾಗಿರುವ ಈ ಫೋನ್ ತುಂಬಾ ಸ್ಟೈಲಿಶ್ ಆಗಿದೆ. ಈ ಮೊಬೈಲಿನ ಮೀಡಿಯಾ ಪ್ಲೇಯರ್ MP4 ಮತ್ತು 3GP ಫೈಲ್ ಗಳನ್ನು ಬೆಂಬಲಿಸುತ್ತದೆ. ಸಾಮಾಜಿಕ ತಾಣಗಳ ಆಯ್ಕೆಯೂ ಇದರಲ್ಲಿದೆ.

5,000 ರುಗೆ ಈ 3ಜಿ ವೊಡಾಫೋನ್ ಸ್ಮಾರ್ಟ್ ನಿಮಗೆ ಲಭ್ಯವಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot