ಬೆಸ್ಟ್ ಕ್ಯಾಮೆರಾ: ವೈರಲ್ ಆಗಿದೆ 'ಒನ್‌ಪ್ಲಸ್ 6' ನಲ್ಲಿ ಕ್ಲಿಕ್ ಮಾಡಿದ ಮ್ಯಾಗಜೀನ್ ಕವರ್ ಫೋಟೋ..!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ಹುಟ್ಟು ಹಾಕುವ ಸಾಮರ್ಥ್ಯವನ್ನು ತೋರಿಸಿಕೊಟ್ಟಿರುವ, ಒನ್‌ಪ್ಲಸ್ ಶೀಘ್ರವೇ ಲಾಂಚ್ ಮಾಡಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕ್ಯಾಮೆರಾ ಗುಣಮಟ್ಟಕ್ಕೆ ಉದಾಹರಣೆಯೊಂದು ಲಭ್ಯವಾಗಿದೆ. ವಿಶ್ವದ ಬೆಸ್ಟ್ ಕ್ಯಾಮೆರಾ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಳ್ಳಲಿರುವ ಒನ್‌ಪ್ಲಸ್ 6 ನಲ್ಲಿ ಕ್ಲಿಕಿಸಿದ ಖ್ಯಾತ ಮ್ಯಾಗಜೀನ್ ಕವರ್ ಫೋಟೋವೊಂದು ವೈರಲ್ ಆಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲಿರುವ ಕ್ಯಾಮೆರಾಗಳು ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರವೇ ಹಾಕುವಷ್ಟು ಗುಣಮಟ್ಟವನ್ನು ಹೊಂದಿರುತ್ತವೆ. ಆದರೆ ಇವುಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್, ಖ್ಯಾತ ಮ್ಯಾಗ್‌ಜೀನ್ ವೊಂದರ ಕವರ್ ಫೋಟೋವನ್ನು ಕ್ಲಿಕ್ ಮಾಡುವಷ್ಟು ಗುಣಮಟ್ಟವನ್ನು ಹೊಂದುವ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುವ ಮುನ್ನವೇ ಜೋರಾಗಿ ಸದ್ದು ಮಾಡಲು ಸಿದ್ಧತೆ ನಡೆಸಿದೆ.

ಮೊಟ್ಟ ಮೊದಲ ಪ್ರಯತ್ನ:
ಭಾರತದಲ್ಲಿ ಇದೇ ಮೊದಲ ಪ್ರಯತ್ನವಾಗಿದ್ದು, ಸ್ಮಾರ್ಟ್‌ಫೋನ್ ಒಂದರಲ್ಲಿ ಮ್ಯಾಗ್‌ಜೀನ್ ವೊಂದರ ಕವರ್ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಫ್ಯಾಷನ್ ಮತ್ತು ಪೋಟ್‌ರೆಟ್ ಫೋಟೋ ಗ್ರಾಫರ್ ಎರ್ರಿಕೊಸ್ ಆಂಡ್ರೀವ್ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಳಸಿಕೊಂಡು ಖ್ಯಾತ ಫ್ಯಾಷನ್ ಮ್ಯಾಗ್‌ಜೀನ್ ಅದ ವೋಗ್ ಕವರ್ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.
ಆದಿತಿರಾವ್:
ಖ್ಯಾತ ಬಾಲಿವುಡ್ ತಾರೆ ಆದಿತಿ ರಾವ್ ಫ್ಯಾಷನ್ ಮ್ಯಾಗ್‌ಜೀನ್ ವೋಗ್ ಕವರ್ ಪೋಟೋದಲ್ಲಿ ಕಾಣಿಸಿಕೊಂಡಿದ್ದು, ಇವರ ಚಿತ್ರವನ್ನು ಫೋಟೋ ಗ್ರಾಫರ್ ಎರ್ರಿಕೊಸ್ ಆಂಡ್ರೀವ್ ಅವರು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಸೆರೆಹಿಡಿದ್ದಾರೆ ಎನ್ನಲಾಗಿದೆ. ಮೇ ಆವೃತ್ತಿಯ ಮ್ಯಾಗ್‌ಜೀನ್ ಇದಾಗಿದೆ.

ಒನ್‌ಪ್ಲಸ್ ಕ್ಯಾಮೆರಾ ಸಾಮಾರ್ಥ್ಯ:
ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕ್ಯಾಮೆರಾ ಸಾಮರ್ಥ್ಯವನ್ನು ಈ ಪೋಟೋ ಶೂಟ್ ತೋರಿಸುತ್ತಿದ್ದು, DSLR ಕ್ಯಾಮೆರಾಗೂ ಕಡಿಮೆ ಇಲ್ಲದಂತೆ ಫೋಟೋಗಳನ್ನು ಸೆರೆಹಿಡಿದಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಜನಪ್ರಿಯತೆಯನ್ನು ಗಳಿಸಿಕೊಳ್ಳಲು ಇದು ಸಹಾಯ ಮಾಡಲಿದೆ.

ಉತ್ತಮ ಗುಣಮಟ್ಟ:
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕ್ಯಾಮೆರಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದ್ದು, ಈ ಚಿತ್ರದಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಕಾಣಬಹುದಾಗಿ. ಅಲ್ಲದೇ ಶಾರ್ಪ್‌ನೆಸ್ ಹೆಚ್ಚಾಗಿದ್ದು ಫೋಟೋಗಳು ಉತ್ತಮವಾಗಿ ಮೂಡಿಬಂದಿದೆ.

ಕೃತಕ ಬುದ್ದಿಮತ್ತೆ:
ಕೃತಕ ಬುದ್ದಿಮತ್ತೆಯನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಬಳಕೆ ಮಾಡಿಕೊಳ್ಳಲಾಗಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯವನ್ನು ಮಾಡಲಿದೆ. ಇದು ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ನಡುವೆ ಸರಿಯಾದ ಸಂಪರ್ಕವನ್ನು ಸಾಧಿಸಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಫ್ಯಾಷನ್ ಮ್ಯಾಗ್‌ಜೀನ್ ವೋಗ್ ಕವರ್ ಪೋಟೋ ಉತ್ತಮವಾಗಿದೆ.

ವೇಗದ ಪೋನ್ :
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಹಾರ್ಡ್‌ವೇರ್ ಅನ್ನು ಕಾಣಬಹುದಾಗಿದ್ದು, ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ. 8GB RAM ನೊಂದಿಗೆ ದೊರೆಯಲಿದ್ದು, ಜೊತೆಗೆ ಸ್ನಾಪ್‌ಡ್ರಾಗನ್ 845 ಚಿಪ್‌ಸೆಟ್‌ನೊಂದಿಗೆ ಕಾಣಸಿಕೊಳ್ಳಲಿದೆ.


Click it and Unblock the Notifications








