Home
ಮೊಬೈಲ್

ಭಾರತದಲ್ಲಿ ಐಫೋನ್ Xs ಮತ್ತು Xs ಮ್ಯಾಕ್ಸ್ ಲಭ್ಯ..? ಲಕ್ಷಕ್ಕೆ ಬೆಲೆನೆ ಇಲ್ಲ..!

ಜಾಗತಿಕ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಲಾಂಚ್ ಆಗಿರುವ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಸೆಪ್ಟೆಂಬರ್ 28 ರಿಂದ ಭಾರತೀಯ ಮಾರಾಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಪ್ರೀ ಬುಕಿಂಗ್ ಆರಂಭವಾಗಿದೆ. ಜಿಯೋ ಮತ್ತು ಏರ್‌ಟೆಲ್‌ ನಲ್ಲಿ ಲಭ್ಯವಿದೆ.

ಭಾರತದಲ್ಲಿ ಐಫೋನ್ Xs ಮತ್ತು Xs ಮ್ಯಾಕ್ಸ್ ಲಭ್ಯ..? ಲಕ್ಷಕ್ಕೆ ಬೆಲೆನೆ ಇಲ್ಲ..!

ದೇಶಿಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋ ಮಾರುಕಟ್ಟೆಯಲ್ಲಿ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಮಾಡುತ್ತಿದೆ. ಇದಲ್ಲದೇ ಬಳಕೆದಾರರಿಗೆ ಹೊಸ ಮಾದರಿಯ ಪ್ಲಾನ್‌ಗಳನ್ನು ನೀಡುತ್ತಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವುಗಳ ಕುರಿತು ಮಾಹಿತಿಯೂ ಮುಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಐಫೋನ್ Xs 5.8 ಇಂಚಿನ OLED ಡಿಸ್ಪ್ಲೇ ಹೊಂದಿದ್ದರೆ ಐಫೋನ್ Xs ಮ್ಯಾಕ್ಸ್ ಸ್ವಲ್ಪ ದೊಡ್ಡದಾಗ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದಲ್ಲದೇ ನೋಚ್ ಡಿಸ್‌ಪ್ಲೇ ವಿನ್ಯಾಸವನ್ನು ಈ ಎರಡು ಫೋನ್‌ಗಳಲ್ಲಿ ಕಾಣಬಹುದಾಗಿದೆ. ಈ ಎರಡು ಫೋನ್‌ಗಳಲ್ಲಿ ನೂತನ A12 ಬಯೋನಿಕ್ ಚಿಪ್ ಸೆಟ್ ಅನ್ನು ಅಳವಡಿಸಲಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ಗಳಲ್ಲಿ ಡುಯಲ್ ಲೆನ್ಸ್ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. 12MP + 12MP ಕ್ಯಾಮರಾವನ್ನು ಈ ಎರಡು ಫೋನ್‌ಗಳ ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಉತ್ತಮ ಸೆಲ್ಫೀ ಕ್ಲಿಕಿಸಲು 7 MP ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ.

ಮೂರು ಆವೃತ್ತಿಯಲ್ಲಿ:

ಮೂರು ಆವೃತ್ತಿಯಲ್ಲಿ:

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ 64 GB, 256 GB ಮತ್ತು 512 GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಎರಡೂ ಫೋನ್ ಗಳು ಮೊದಲ ಬಾರಿಗೆ ಡುಯಲ್ ಸಿಮ್ ಗೆ ಬೆಂಬಲ ನೀಡುತ್ತದೆ.

eSIM ಗಳು:

eSIM ಗಳು:

ಕೇವಲ ಒಂದೇ ಒಂದು ಫಿಸಿಕಲ್ ಸಿಮ್ ಸ್ಲಾಟ್ ಇರುತ್ತದೆ. ಎರಡನೇ ಸಿಮ್ eSIM ಆಗಿದೆ. eSIM ಕಾಣದೇ ಕಾರ್ಯನಿರ್ವಹಿಸಲದೆ. ಭಾರತದಲ್ಲಿ eSIMಗಳಿಗೆ ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋಗಳು ಮಾತ್ರ ಬೆಂಬಲ ನೀಡುತ್ತದೆ.

ವೆಬ್‌ಸೈಟಿನಲ್ಲಿ :

ವೆಬ್‌ಸೈಟಿನಲ್ಲಿ :

ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ವೆಬ್ ಸೈಟ್ ನಲ್ಲಿ ಈಗಾಗಲೇ ಪ್ರೀಬುಕ್ಕಿಂಗ್ ಆರ್ಡರ್ ಗಳು ಆರಂಭವಾಗಿದೆ. ಸಂಪೂರ್ಣ ಮೊತ್ತವನ್ನು ಪಾವತಿಸಿದರೆ ನಿಮ್ಮ ಬೇಕಾದ ಮಾಡೆಲ್ ನಿಮ್ಮ ಕೈಸೇರಲಿದೆ. ಜೊತೆಗೆ EMI ಆಯ್ಕೆಯೂ ಲಭ್ಯವಿದೆ.

ಬೆಲೆ:

ಬೆಲೆ:

ಐಫೋನ್ Xs ಮ್ಯಾಕ್ಸ್ 64 GB ರೂ.1,09,900ಕ್ಕೆ, 256 GB ರೂ.1,24,900 ಮತ್ತು 512 GB ರೂ.1,44,900ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಐಫೋನ್ Xs 64 GB ರೂ.99,900ಕ್ಕೆ, 256 GB ರೂ.1,14,900 ಮತ್ತು 512 GB ರೂ.1,34,900ಕ್ಕೆ ದೊರೆಯುತ್ತಿದೆ.

Best Mobiles in India

English summary
Want to Buy an iPhone XS or iPhone XS Max?, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+