Subscribe to Gizbot

ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?

Written By:

ನಿಮ್ಮ ಫೋನ್ ಆಕಸ್ಮಿಕವಾಗಿ ಎಲ್ಲಿಯಾದರೂ ಬಿದ್ದು ಹೋಗಿದೆಯೇ? ಹೌದು ಎಂಬುದೇ ನಿಮ್ಮ ಉತ್ತರವಾಗಿದೆ ಎಂಬುದು ನಮಗೆ ತಿಳಿದಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್ ಅನ್ನು ಜೀವಿತದ ಅವಧಿಯಲ್ಲಿ ಒಮ್ಮೆಯಾದರೂ ಬೀಳಿಸದೇ ಇರಲಾರರು. ಇದು ಆಕಸ್ಮಿಕವಾಗಿ ಸಂಭವಿಸಿದ್ದಾಗಿರಬಹುದು ಅಥವಾ ಅಜಾಗರೂಕತೆಯಿಂದ ಉಂಟಾಗಿದ್ದಿರಲೂಬಹುದು.

ಫೋನ್‌ಗೆ ಹೀಗಾದ ಸಂದರ್ಭದಲ್ಲಿ ಫೋನ್ ಡಿಸ್‌ಪ್ಲೇಗೆ ಹಾನಿ ಸಂಭವಿಸುವುದು ಖಂಡಿತ. ನಂತರ ಇದರ ರಿಪೇರಿಗಾಗಿ ಸಾಕಷ್ಟು ಹಣವನ್ನೂ ನಾವು ವ್ಯಯಿಸುತ್ತೇವೆ ನಂತರ ಸಂಕಟಪಟ್ಟುಕೊಳ್ಳುತ್ತೇವೆ. ಇನ್ನು ಹೆಚ್ಚು ಬೇಸರದ ಸಂಗತಿ ಅಂದರೆ ಹೆಚ್ಚಿನ ಫೋನ್ ತಯಾರಕರು ಸ್ಮಾರ್ಟ್‌ಫೋನ್‌ನ ಫೀಚರ್‌ಗಳಿಗೆ ಮಹತ್ವ ಕೊಡುತ್ತಾರೆ ಆದರೆ ಡಿಸ್‌ಪ್ಲೇಯ ದೃಢತೆಗೆ ಇವರು ಗಮನ ಹರಿಸುವುದಿಲ್ಲ. ಇದರಿಂದಾಗಿಯೇ ಡಿಸ್‌ಪ್ಲೇಯ ಹಾನಿ ಸಂಭವಿಸುತ್ತಲೇ ಇರುತ್ತಿರುತ್ತದೆ. ಆದರೆ ಅದೃಷ್ಟವೆಂಬಂತೆ ಮೋಟೋರೋಲಾ ಕಂಪೆನಿ ಅತ್ಯದ್ಭುತ ಮೋಟೋ ಎಕ್ಸ್ ಫೋರ್ಸ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದರ ವಿಶೇಷತೆ ಖಂಡಿತ ನಿಮ್ಮನ್ನು ಅದನ್ನು ಖರೀದಿಸುವಂತೆ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಪಾಡು

ಶಾಟರ್ ಪ್ರೂಫ್ ಡಿಸ್‌ಪ್ಲೇ

ಈ ಫೋನ್ ಶಾಟರ್ ಪ್ರೂಫ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದೊಂದು ಅಲ್ಟಿಮೇಟ್ ಸ್ಮಾರ್ಟ್‌ಫೋನ್ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮೋಟೋ ಎಕ್ಸ್ ಸ್ಟೈಲ್‌ನಂತೆಯೇ ಈ ಫೋನ್ ಇದ್ದು, ಪ್ರೊಸೆಸರ್, ಬ್ಯಾಟರಿ ಮತ್ತು ಸ್ಕ್ರೀನ್ ಪ್ರತ್ಯೇಕ ಮಾರ್ಪಾಡುಗಳನ್ನು ಪಡೆದುಕೊಂಡಿದೆ.

ಖ್ಯಾತಿ

ಪ್ರಪಂಚದ ಪ್ರಥಮ ಶಾಟರ್ ಪ್ರೂಫ್ ಡಿಸ್‌ಪ್ಲೇ

ಪ್ರಪಂಚದ ಪ್ರಥಮ ಶಾಟರ್ ಪ್ರೂಫ್ ಡಿಸ್‌ಪ್ಲೇ ಇರುವ ಫೋನ್ ಎಂಬ ಖ್ಯಾತಿಗೆ ಮೋಟೋ ಎಕ್ಸ್ ಫೋರ್ಸ್ ಒಳಗಾಗಿದ್ದು ಡಿಸ್‌ಪ್ಲೇ 5 ಸುರಕ್ಷಾ ವಲಯಗಳನ್ನು ಒಳಗೊಂಡಿದೆ. ಬೆಲೆ ರೂ 49,999 ಆವೃತ್ತಿ 32 ಜಿಬಿ ಆಗಿದೆ. ಕಂಪೆನಿ ತನ್ನ ಮೋಟೋ ಎಕ್ಸ್ ಫೋರ್ಸ್‌ಗಾಗಿ 4 ವರ್ಷದ ವಾರಂಟಿಯನ್ನು ನೀಡಿದ್ದು ಫೋನ್ ಒಡೆಯುವ ಮಾತೇ ಇಲ್ಲ.

ಶಾಟರ್ ಶೀಲ್ಡ್ ತಂತ್ರಜ್ಞಾನ

ಕ್ರ್ಯಾಕ್ ಪ್ರೂಫ್ ಬಿಲ್ಟ್

ಮೋಟೋ ಎಕ್ಸ್ ಫೋರ್ಸ್ ಶಾಟರ್ ಶೀಲ್ಡ್ ತಂತ್ರಜ್ಞಾನ ಡಿಸ್‌ಪ್ಲೇಯೊಂದಿಗೆ ಬಂದಿದೆ. 5.4 ಇಂಚಿನ ಡಿಸ್‌ಪ್ಲೇ ಫೋನ್‌ನಲ್ಲಿದ್ದು, ಐದು ಹಂತಗಳ ಗ್ಲಾಸ್ ಲೇಯರ್ ಅನ್ನು ಡಿವೈಸ್ ಒಳಗೊಂಡಿದೆ ಮತ್ತು ಇದನ್ನು ತುಂಡು ಮಾಡಲು ಸಾಧ್ಯವೇ ಇಲ್ಲ. ದೊಡ್ಡ ಡಿಸ್‌ಪ್ಲೇಯೊಂದಿಗೆ, ಸ್ವಲ್ಪ ಭಾರವೆಂಬ ಭಾವನೆ ನಿಮಗೆ ಬರಬಹುದಾದರೂ 9.2 ಎಮ್‌ಎಮ್ ದಪ್ಪ ಇದರಲ್ಲಿದ್ದು 169 ಗ್ರಾಮ್ ತೂಕವಿದೆ.

ಬಾಲಿಸ್ಟಿಕ್ ನಿಲಾನ್ ಫಿನಿಶ್

ವಿನ್ಯಾಸ

ಇನ್ನು ಫೋನ್ ವಿನ್ಯಾಸ ನೋಡಿದರೆ ತನ್ನ ಇತರ ಮೋಟೋ ಡಿವೈಸ್ ಮಾದರಿಯಲ್ಲಿಯೇ ಇದು ಇದೆ. ಕರ್ವ್ ಡಿಸೈನ್ ಅನ್ನು ಫೋನ್ ಹೊಂದಿದ್ದು ಬಾಲಿಸ್ಟಿಕ್ ನಿಲಾನ್ ಫಿನಿಶ್ ಇದರಲ್ಲಿದೆ ಫೋನ್ ಹಿಂಭಾಗದ ವೋವನ್ ಪ್ಯಾಟ್ರನ್ ಡಿವೈಸ್ ಅನ್ನು ಹಿಡಿದುಕೊಳ್ಳುವಲ್ಲಿ ನೆರವಾಗಲಿದೆ.

ಆಡಿಯೊ ಜಾಕ್ ಮತ್ತು ಸಿಮ್ ಕಾರ್ಡ್ ಟ್ರೆ

ಇತರ ವಿಶೇತೆಗಳು

ಬಲಭಾಗದಲ್ಲಿ ನಿಮಗೆ ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಕಾಣಬಹುದಾಗಿದೆ. ಚಾರ್ಜಿಂಗ್‌ಗಾಗಿ ಮೈಕ್ರೊಯುಎಸ್‌ಬಿ ಪೋರ್ಟ್ ಅನ್ನು ಡಿವೈಸ್ ಒಳಗೊಂಡಿದ್ದು ಮೇಲ್ಭಾಗದಲ್ಲಿ ಡೇಟಾ ಟ್ರಾನ್ಸಫರ್ ಮಾಡುವುದಕ್ಕಾಗಿ ಸೌಲಭ್ಯವನ್ನು ಫೋನ್ ಹೊಂದಿದೆ. ಆಡಿಯೊ ಜಾಕ್ ಮತ್ತು ಸಿಮ್ ಕಾರ್ಡ್ ಟ್ರೆ ಕೂಡ ಇದರಲ್ಲಿದೆ.

ಅಮೋಲೆಡ್ ಡಿಸ್‌ಪ್ಲೇ

ಡಿಸ್‌ಪ್ಲೇ ಹೆಚ್ಚು ಇನ್ನೇನಿದೆ?

ಮೋಟೋ ಎಕ್ಸ್ ಫೋರ್ಸ್ ಡಿಸ್‌ಪ್ಲೇ ಶಾಟರ್ ಫ್ರೂಪ್ ಡಿಸ್‌ಪ್ಲೇಯನ್ನು ಹೊಂದಿದೆ. 5.4 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಇದು ಹೊಂದಿದ್ದು ಅತ್ಯತ್ತಮವಾಗಿದೆ.

ಡಿವೈಸ್ ಪ್ರಧಾನತೆ

ಕಾರ್ಯಕ್ಷಮತೆ

ಕ್ವಾಲ್‌ಕಾಮ್ MSM8894 ಸ್ನ್ಯಾಪ್‌ಡ್ರ್ಯಾಗನ್ 810 ಸಾಕ್ ಅನ್ನು ಡಿವೈಸ್ ಪಡೆದುಕೊಂಡಿದ್ದು, ಓಕ್ಟಾ ಕೋರ್ 2GHz ಸ್ಪೀಡ್ ಇದರಲ್ಲಿದೆ. ಕ್ವಾಡ್ ಕೋರ್ 1.5 ಕೋರ್ಟೆಕ್ಸ್ A53 ಮತ್ತು ಕ್ವಾಡ್ ಕೋರ್ 2GHz Cortex-A57 ಅನ್ನು ಡಿವೈಸ್ ಪಡೆದುಕೊಂಡಿದೆ. 3 ಜಿಬಿ RAM ಡಿವೈಸ್ ಪ್ರಧಾನತೆಯಾಗಿದೆ.

ಆಂಡ್ರಾಯ್ಡ್ 5.1.1 ಲಾಲಿಪಪ್

ಸಾಫ್ಟ್‌ವೇರ್

ಇತರ ಮೋಟೋ ಡಿವೈಸ್‌ಗಳಂತೆ ಫೋನ್ ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್ ಅನ್ನು ಒಳಗೊಂಡಿದೆ. ಅಟೆಂಟೀವ್ ಡಿಸ್‌ಪ್ಲೇ ಫೀಚರ್ ಕೂಡ ಇದರಲ್ಲಿದ್ದು, ಇದು ಸ್ಲೀಪ್ ಮೋಡ್‌ಗೆ ಬೇಗನೇ ಹೋಗುವುದಿಲ್ಲ. ಅತ್ಯಾಧುನಿಕ ಮಾರ್ಶ್ ಮಲ್ಲೊ ಅಪ್‌ಡೇಟ್ 6.0 ವನ್ನು ಡಿವೈಸ್ ಸದ್ಯದಲ್ಲಿಯೇ ಪಡೆದುಕೊಳ್ಳಲಿದೆ.

4 ಕೆ ವೀಡಿಯೊ ರೆಕಾರ್ಡಿಂಗ್

ಕ್ಯಾಮೆರಾ

ಫೋನ್‌ನ ಪ್ರಾಥಮಿಕ ಕ್ಯಾಮೆರಾ 21 ಮೆಗಾಪಿಕ್ಸೆಲ್ ಆಗಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಇದು ಪಡೆದುಕೊಂಡಿದೆ. ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಇದೂ ಕೂಡ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಬಂದಿದೆ. 4 ಕೆ ವೀಡಿಯೊ ರೆಕಾರ್ಡಿಂಗ್ ಮಾಡಲು ಫೋನ್ ಅತ್ಯುತ್ತಮ ಎಂದೆನಿಸಿದೆ.

3760mAh ಬ್ಯಾಟರಿ

ಬ್ಯಾಟರಿ

ಮೋಟೋ ಎಕ್ಸ್ ಫೋರ್ಸ್ 3760mAh ಬ್ಯಾಟರಿಯನ್ನು ಪಡೆದುಕೊಂಡಿದ್ದು ಮೋಟೋ ಎಕ್ಸ್ ವರ್ಗದಲ್ಲೇ ಇದು ಅತಿದೊಡ್ಡ ಬ್ಯಾಟರಿ ಎಂದೆನಿಸಿದೆ. ವೈರ್‌ಲೆಸ್ ಚಾರ್ಜಿಂಗ್‌ಗೆ ಕೂಡ ಡಿವೈಸ್ ಬೆಂಬಲವನ್ನು ನೀಡುತ್ತಿದ್ದು ಟರ್ಬೊ ಚಾರ್ಜಿಂಗ್ ಕೂಡ ಇದರಲ್ಲಿದೆ. ಎರಡು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಫೋನ್ ಹೊಂದಿದೆ.

ರೂ 49,999 - ರೂ 53,999

ಫೋನ್ ಬೆಲೆ

ಮೋಟೋ ಎಕ್ಸ್ ಫೋರ್ಸ್‌ನ 32 ಜಿಬಿ ರೂ 49,999 ಆಗಿದ್ದು 64 ಜಿಬಿ ಆವೃತ್ತಿ 53,999 ಆಗಿದೆ. ನೆಕ್ಸಸ್ 6 ಪಿಗಿಂತ ರೂ 10,000 ಬೆಲೆಯಲ್ಲಿ ಡಿವೈಸ್ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Have you ever accidentally dropped your phone? Your answer will most likely be a YES to this question. Most smartphone users must have at least once dropped their handheld, accidentally or due to carelessness.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot