ಮಾರುಕಟ್ಟೆಗೆ ಬಂದಿದೆ ನೀರಿನಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್...!
ಕ್ಯೋಸೆರಾ ಕಂಪನಿಯೂ ಮೊಟ್ಟ ಮೊದಲ ತೊಳೆಯಬಹುದಾದ ಸ್ಮಾರ್ಟ್‌ಪೋನನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ rafre ಎಂದು ನಾಮಕರಣ ಮಾಡಿದೆ.
ಜಪಾನ್ ಮೂಲದ ಸ್ಮಾರ್ಟ್‌ಪೋನ್ ತಯಾರಕ ಕಂಪನಿ ಕ್ಯೋಸೆರಾ, ಸ್ಮಾರ್ಟ್‌ಪೋನ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಬಿಸಿ ನೀರು ಹಾಕಿ ತೊಳೆಯಲು ಸಾಧ್ಯವಿರುವ ಸ್ಮಾರ್ಟ್‌ಪೋನ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಓದಿರಿ: ಬ್ಲಾಕ್‌ಬೆರಿಯಿಂದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ
ಸದ್ಯದ ಸ್ಮಾರ್ಟ್‌ಪೋನ್ ಗಳು ತೊಟ್ಟು ನೀರು ಬಿದ್ದರು ಹಾಳಾಗುವ ಸಾಧ್ಯತೆ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಪೋನ್ ಗಳು ಮಾತ್ರ ವಾಟರ್ ಪ್ರೂಫ್ ಆಗಿದ್ದವು. ಈ ಸಂದರ್ಭದಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬಂದಿರುವುದು ಉತ್ತಮ ಸಂಗತಿಯಾಗಿದೆ.

ಈ ಪೋನನ್ನು ತೊಳೆಯಬಹುದು ಈ ಪೋನನ್ನು:
ಕ್ಯೋಸೆರಾ ಕಂಪನಿಯೂ ಮೊಟ್ಟ ಮೊದಲ ತೊಳೆಯಬಹುದಾದ ಸ್ಮಾರ್ಟ್‌ಪೋನನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ rafre ಎಂದು ನಾಮಕರಣ ಮಾಡಿದೆ. ಈ ಪೋನನ್ನು ನೀರಿನಲ್ಲಿ ತೊಳೆಯಬಹುದಾಗಿದ್ದು, ಬಿಸಿ ನೀರನ್ನು ಬಳಸಿಯೂ ವಾಷ್ ಮಾಡಬಹುದಾಗಿದೆ. ಇದರಿಂದ ಪೋನ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗಿದೆ.

ಒದ್ದೆ ಕೈನಲ್ಲೂ ಬಳಸಬಹುದು:
ಸಾಮಾನ್ಯ ಸ್ಮಾರ್ಟ್‌ಪೋನುಗಳ ಪರದೆಯನ್ನು ಒದ್ದೆ ಕೈನಿಂದ ಬಳಸಲು ಸಾಧ್ಯವಿಲ್ಲ ಆದರೆ ರಫ್ರಿ ಸ್ಮಾರ್ಟ್‌ಪೋನನ್ನು ಒದ್ದೆ ಕೈಯಿಂದಲೂ ಬಳಸಬಹುದಾಗಿದೆ. ಅಲ್ಲದೇ ಕೈಗೆ ಗ್ಲೌಸ್ ಧರಿಸಿಯೂ ಈ ಸ್ಮಾರ್ಟ್‌ಪೋನನ್ನು ಬಳಸಬಹುದಾಗಿದೆ.

ಮೂರು ಬಣ್ಣದಲ್ಲಿ ಲಭ್ಯ:
2017 ಮಾರ್ಚ್ ವೇಳೆಗೆ ಈ ಪೋನು ಜಪಾನ್ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಪಿಲೇ ಪಿಂಕ್, ಕ್ಲಿಯರ್ ವೈಟ್ ಮತ್ತು ಲೈಟ್ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ.

ಆಂಡ್ರಾಯ್ಡ್ 7.0 ನಲ್ಲಿ ಕಾರ್ಯನಿರ್ವಹಣೆ:
ಈ ರಫ್ರಿ ಸ್ಮಾರ್ಟ್‌ಪೋನು ಆಂಡ್ರಾಯ್ಡ್ 7.0 ನಲ್ಲಿ ಕಾರ್ಯನಿರ್ವಹಿಸಲಿದ್ದು, ಹಿಂಭಾಗದಲ್ಲಿ 13MP ಕ್ಯಾಮೆರಾ ಹೊಂದಿದ್ದು, 2GB RAM ಮತ್ತು 16GB ಇಂಟರ್ನಲ್ ಮೆಮೊರಿ ಈ ಪೋನಿನಲ್ಲಿದ್ದು, 3,000mAh ಬ್ಯಾಟರಿ ಸಹ ಇದೆ.


Click it and Unblock the Notifications








