ಲಾವಾ ಐರಿಸ್ X1 ಅನ್‌ಬಾಕ್ಸಿಂಗ್ (ವೀಡಿಯೋ)

Written By:

ಮೇ 2014 ರ ಹಿಂದೆಯೇ, ನಾವು ಹಲವಾರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಲಾಂಚಿಂಗ್‌ನಲ್ಲಿ ಪಾಲುದಾರರಾಗಿದ್ದೇವೆ. ಇದೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಇದ್ದ ಒಂದೇ ವಿಶೇಷತೆಯೆಂದರೆ ಇದು ಕಿಟ್‌ಕ್ಯಾಟ್ ಓಎಸ್ ಅನ್ನು ಹೊಂದಿದ್ದಾಗಿದೆ. ಈ ಕಿಟ್‌ಕ್ಯಾಟ್ ಚಾಲನೆ ಆರಂಭವಾದದ್ದೇ ಮೋಟೋರೋಲೋದ ಮೋಟೋ ಇ ಸ್ಮಾರ್ಟ್‌ಫೋನ್‌ನಿಂದ ಎಂಬುದನ್ನು ಮಾತ್ರ ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಬೇರೆ ಹಲವಾರು ಸ್ಮಾರ್ಟ್‌ಫೋನ್‌ಗಳಂತೆ, ಇದೇ ಅಂಶವನ್ನು ಆಧರಿಸಿಕೊಂಡು ಉಗಮವಾದ ಇತರ ಸ್ಮಾರ್ಟ್‌ಫೋನ್‌ಗಳಾದ ಮೈಕ್ರೋಮ್ಯಾಕ್ಸ್ ಯುನೈಟ್ 2, ಕ್ಯಾನ್‌ವಾಸ್ ಎಂಗೇಜ್, ಕ್ಸೋಲೋ Q600s, ಲಾವಾ ಐರಿಸ್ X1, ಹೀಗೆ ಕಿಟ್‌ಕ್ಯಾಟ್ ಓಎಸ್ ಅನ್ನು ಆಧಾರವಾಗಿಟ್ಟುಕೊಂಡೇ ಇವೆಲ್ಲಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದವು. ಅದರಲ್ಲಿ ಲಾವಾ ಐರಿಸ್ X1 7,999 ಕ್ಕೆ ಅಮೆಜಾನ್ ಇಂಡಿಯಾದಲ್ಲಿ ಈಗ ಲಭ್ಯವಾಗುತ್ತಿದೆ.

ಲಾವಾ ಐರಿಸ್ X1 ವೀಡಿಯೋ ನೋಟ

ಲಾವಾ ಐರಿಸ್ X1: ಪ್ರಮುಖ ವೈ‍ಶಿಷ್ಟ್ಯಗಳು
ಇದು 4.5 ಇಂಚಿನ FWVGA IPS (854 x 480 ಪಿಕ್ಸೆಲ್‌ಗಳ) ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದು 8.9 mm ದಪ್ಪವನ್ನು ಹೊಂದಿದ್ದು 138 ಗ್ರಾಮ್ ತೂಕವನ್ನು ಹೊಂದಿದೆ. ಇದನ್ನು ಕೈಯಲ್ಲಿ ಹಿಡಿದುಕೊಳ್ಳಲು ಬಹು ಹಿತವಾಗಿದ್ದು 1.2 GHz ಕ್ವಾಡ್ - ಕೋರ್ Broadcom BCM23550 ಪ್ರೊಸೆಸರ್ ಹೊಂದಿದ್ದು 1ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. ಇದು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ LED ಫ್ಲ್ಯಾಶ್ ಅನ್ನು ಹೊಂದಿದ್ದು 1.4 µm ಪಿಕ್ಸೆಲ್ BSI+ ಸೆನ್ಸಾರ್ ಅನ್ನು ಹೊಂದಿದೆ. ಇದರ ರಿಯರ್ ಕ್ಯಾಮೆರಾ ಪೂರ್ಣ HD ವೀಡಿಯೋ ರೆಕಾರ್ಡಿಂಗ್ ಅನ್ನು ಅನುಮತಿಸುವಂತಿದ್ದು ಆಟೋ ಫೋಕಸ್, HDR ಮೋಡ್ ಅನ್ನು ಒಳಗೊಂಡಿದೆ. ವೀಡಿಯೋ ಕರೆಗಾಗಿ ಫೋನ್ 2.0 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಕೂಡ ಹೊಂದಿದೆ.

ಲಾವಾ ಐರಿಸ್ x1 ವೀಡಿಯೋ ನೋಟ

<center><iframe width="100%" height="360" src="//www.youtube.com/embed/CqcsJitgqqE?feature=player_embedded" frameborder="0" allowfullscreen></iframe></center>

Read more about:
English summary
This article tells that Watch Lava Iris X1 unboxing video.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot