Home
ಮೊಬೈಲ್

ಪ್ರಖ್ಯಾತ ಸ್ಮಾರ್ಟ್‌ಫೋನ್‌ಗಳಿಗೆ ಎಲ್‌ಜಿ G3 ಪೈಪೋಟಿ

By Shwetha

ಎಲ್‌ಜಿ ಮತ್ತು ಇತರ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗೆ ಭಾರತವು ಅತ್ಯಂತ ಆಕರ್ಷಕ ಮಾರುಕಟ್ಟೆಯಾಗಿದೆ. ತಮ್ಮ ಉಪ ಪ್ರಾಂತ್ಯಗಳಲ್ಲಿ ಈ ದಿಗ್ಗಜ ಸ್ಮಾರ್ಟ್‌ಫೋನ್‌ಗಳು ಲಾಂಚಿಂಗ್ ಅನ್ನು ಘೋಷಿಸಿದ ಕೂಡಲೇ ಭಾರತದಲ್ಲಿ ಕೂಡ ತಮ್ಮ ಪ್ರಭಾವವನ್ನು ಬೀರುವುದು. ಎಲ್‌ಜಿಯಿಂದ ಕ್ಯುಎಚ್‌ಡಿ ಡಿಸ್‌ಪ್ಲೇ ಉಳ್ಳ G3 ಸ್ಮಾರ್ಟ್‌ಫೋನ್ ಅನ್ನು ಭಾರತ ಇದೇ ಮೊದಲ ಬಾರಿಗೆ ಸ್ವೀಕರಿಸುತ್ತಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎಲ್‌ಜಿ ಅಧಿಕೃತವಾಗಿ G3 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುತ್ತಿದೆ. ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಈ ಕಾರ್ಯಕ್ರಮ ನೇರವಾಗಿ ಪ್ರಸಾರವಾಗುತ್ತಿದೆ.

ಎಲ್‌ಜಿ G3 ಭಾರತದಲ್ಲಿ ಭರ್ಜರಿ ಉದ್ಘಾಟನೆ

ನಿಯಮಿತ ಎಚ್‌ಡಿ ಪ್ಯಾನಲ್‌ಗಳನ್ನು ಒದಗಿಸುವ ಮೂಲಕ ಎಲ್‌ಜಿ G3 ಅನ್ನು ಯಶಸ್ವಿಯಾಗಿ ಲಾಂಚ್ ಮಾಡುವ ಮೂಲಕ ಸ್ಯಾಮ್‌ಸಂಗ್, ಸೋನಿ ಮತ್ತು ಎಚ್‌ಟಿಯನ್ನು ತುಸು ಸಪ್ಪೆಯಾಗಿಸಿದೆ. ಇದು ಕ್ಯೂಎಚ್‌ಡಿ ಡಿಸ್‌ಪ್ಲೇಯನ್ನು ಮಾತ್ರ ಒದಗಿಸದೇ 2K ಯಲ್ಲಿ ಕೂಡ ಬರುತ್ತಿದೆ ಇದು ಬಳಕೆದಾರರನ್ನು ಅದ್ಭುತ ಎಂಬ ಭಾವನೆಯನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದೆ. ಎಲ್‌ಜಿ ಫೋನ್‌ನಲ್ಲಿ ಬಳಸಲಾಗಿರುವ ವಿನ್ಯಾಸ ಮತ್ತು ಹಾರ್ಡ್‌ವೇರ್‌ಗೆ ಸಂಪೂರ್ಣ ಕ್ರೆಡಿಟ್ ಹೋಗುತ್ತದೆ ಎಂಬುದನ್ನು ಇಲ್ಲಿ ಸೇರಿಸಲೇಬೇಕು.

ಎಲ್‌ಜಿ G3: ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ (2560×1440 pixels) HD IPS ಡಿಸ್‌ಪ್ಲೇಯೊಂದಿಗೆ ಬಂದಿರುವ 538ppi ಪಿಕ್ಸೆಲ್‌ ಡೆನ್ಸಿಟಿಯನ್ನು ನೀಡುತ್ತಿದೆ. ಇದರಲ್ಲಿ 2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್ ಇದ್ದು Adreno 330 GPU ಡಿವೈಸ್‌ನಲ್ಲಿದೆ. ಇದು 2 ಅಥವಾ 3 ಜಿಬಿ RAM ಅನ್ನು ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್) ಓಎಸ್ ಅನ್ನು ಆಧರಿಸಿ ನೀಡುತ್ತಿದೆ.

ಎಲ್‌ಜಿ G3 13MP ರಿಯರ್ ಕ್ಯಾಮೆರಾವನ್ನು ಒಳಗೊಂಡಿದ್ದು ಓಎಸ್, ಡ್ಯುಯೆಲ್ ಫ್ಲ್ಯಾಶ್ ಮತ್ತು ಎಲ್‌ಜಿ ಹೊಸ ತಂತ್ರಜ್ಞಾನ ಲೇಸರ್ ಆಟೋ ಫೋಕಸ್ ಅನ್ನು ಹೊಂದಿದೆ. 4K ವೀಡಿಯೋ ರೆಕಾರ್ಡಿಂಗ್ ಅನ್ನು ಕೂಡ ಈ ಡಿವೈಸ್‌ನಲ್ಲಿ ನಿಮಗೆ ಮಾಡಬಹುದಾಗಿದೆ. 2.1MP ಮುಂಭಾಗ ಶೂಟರ್ ಕೂಡ ಇದರಲ್ಲಿದೆ. ಎಲ್‌ಜಿ 16ಜಿಬಿ / 32ಜಿಬಿ ಆಂತರಿಕ ಮೆಮೊರಿಯನ್ನು ನೀಡುತ್ತಿದ್ದು ಇದನ್ನು ನಿಮಗೆ 128 ಜಿಬಿ ಎಸ್‌ಡಿ ಕಾರ್ಡ್ ಅನ್ನು ಬಳಸಿಕೊಂಡು ವಿಸ್ತರಿಸಬಹುದಾಗಿದೆ. ಇದರಲ್ಲಿರುವ ಸಂಪರ್ಕ ವೈಶಿಷ್ಟ್ಯಗಳೆಂದರೆ 4G LTE / 3ಜಿ HSPA+, ವೈಫೈ 802.11 a/b/g/n/ac, ಬ್ಲ್ಯೂಟೂತ್ 4.0 , GPS, NFC and ಸ್ಲಿಮ್ ಪೋರ್ಟ್ ಆಗಿದೆ. ಎಲ್‌ಜಿ ಜಿ3 3000 mAh ತೆಗೆಯಬಹುದಾದ ಬ್ಯಾಟರಿಯೊಂದಿಗೆ ಬಂದಿದ್ದು Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಕೂಡ ಒದಗಿಸುತ್ತಿದೆ.

Best Mobiles in India

English summary
This article tells about that Watch Lg G3 India launch live webcast event that is taking place in Mumbai, India, LG will officially launch the G3 smarpthone and GizBot will be reporting from ground zero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+